Elephant Video: ಬಿಸಿಲ ಬೇಗೆ ತಾಳಲಾರದೆ ನೀರಿನಲ್ಲಿ ಬಿದ್ದು ಆಟವಾಡಿದ ಆನೆ ಮರಿ

Edited By:

Updated on: Nov 09, 2022 | 9:02 AM

ಮೈಸೂರಿನ ಹೆಚ್​ಡಿ ಕೋಟೆಯಲ್ಲಿರುವ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರದಲ್ಲಿ ಆನೆ ಮರಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಆನೆಗಳು ಎಷ್ಟು ರಾಜಗಾಂಭೀರ್ಯದಿಂದ ಇರುತ್ತವೋ ಕೆಲವೊಮ್ಮೆ ಅಷ್ಟೇ ಎಂಜಾಯ್ ಕೂಡ ಮಾಡುತ್ತವೆ. ಮೈಸೂರಿನ (Mysuru) ಹೆಚ್​ಡಿ ಕೋಟೆಯಲ್ಲಿರುವ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರದಲ್ಲಿ ಆನೆ ಮರಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ. ಕಾಡಿನ ನೀರಿನ ಹೊಂಡದಲ್ಲಿ ಮಲಗಿಕೊಂಡು ಆಟವಾಡುತ್ತಿರುವ ಆನೆ ಮರಿಯ ವಿಡಿಯೋವನ್ನು ಸಫಾರಿಗೆ ಹೋದ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ದಮ್ಮನಕಟ್ಟೆಯಲ್ಲಿ (Dammanakatte) ಬಿಸಿಲ‌ ಬೇಗೆಯಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಆನೆ ಮರಿ ಹೊರಳಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

Loading...
Unable to load recommendations.
Follow Us
TV9 Web

TV9 Kannada

Read More