ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು

Updated on: Apr 23, 2026 | 10:26 PM

ಪಶ್ಚಿಮ ಬಂಗಾಳದಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ. ಇಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದಂತೆ, ಝಾರ್‌ಗ್ರಾಮ್ ಪ್ರದೇಶದ ಪ್ರಾಥಮಿಕ ಶಾಲೆಯ ಬಳಿ ಕಾಡಾನೆಯೊಂದು ಇದ್ದಕ್ಕಿದ್ದಂತೆ ಬೀಡು ಬಿಟ್ಟಿತು. ಇದರಿಂದಾಗಿ, ಆ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದ ಮತದಾರರು ಸ್ವಲ್ಪ ಹೊತ್ತು ಆಘಾತಕ್ಕೊಳಗಾದರು.

 

ಕೊಲ್ಕತ್ತಾ, ಏಪ್ರಿಲ್ 23: ಇಂದು ಪಶ್ಚಿಮ ಬಂಗಾಳ (West Bengal) ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಜಾರ್ಗ್ರಾಮ್‌ನ ಮತಗಟ್ಟೆಯ ಬಳಿ ಇದ್ದಕ್ಕಿದ್ದಂತೆ ಆನೆಯೊಂದು ಮತಗಟ್ಟೆಗೆ ಬಂದಿತು. ಇದನ್ನು ನೋಡಿದ ಮತದಾರರು ಸ್ವಲ್ಪ ಆಘಾತಕ್ಕೊಳಗಾದರು. ಜಾರ್ಗ್ರಾಮ್‌ನ ಜಿಡುಸೋಲ್ ಪ್ರಾಥಮಿಕ ಶಾಲೆಯ ಬಳಿ ಈ ಘಟನೆ ನಡೆದಿದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಆನೆಗಳು ಇರುತ್ತವೆ ಎಂದು ಮೊದಲೇ ಎಚ್ಚರಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮತ ಚಲಾಯಿಸಲು ಬಂದಿದ್ದ ಮತದಾರರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಆನೆ ಮತಗಟ್ಟೆಯ ಬಳಿ ಚಲಿಸುತ್ತಿರುವುದನ್ನು ವೀಡಿಯೊ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿದ್ದು, ವೈರಲ್ ಆಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More