EPF Claim: ಇಪಿಎಫ್​ಒ ಸದಸ್ಯ ಮರಣ ಹೊಂದಿದರೆ ಕ್ಲೇಮ್ ಮಾಡುವ ಪ್ರಕ್ರಿಯೆ ಸರಳಗೊಳಿಸಿದ ಸಂಸ್ಥೆ

|

Updated on: Jun 05, 2024 | 7:13 AM

ಆಧಾರ್​ನಲ್ಲಿರುವ ಮಾಹಿತಿ ಈಗ ಬಹಳಷ್ಟು ದಾಖಲೆಗೆ ಆಧಾರವಾಗಿರುತ್ತದೆ. ಆಧಾರ್​ನಲ್ಲಿರುವ ಹೆಸರು ನಿಖರವಾಗಿರಬೇಕು. ಅದರಂತೆಯೇ ಯುಎಎನ್​ನಲ್ಲೂ ಇರಬೇಕು. ವ್ಯತ್ಯಾಸ ಇದ್ದರೆ ಕ್ಲೇಮ್ ಮಾಡುವುದು ಕಷ್ಟ

ಪಿಎಫ್ ಅಥವಾ ಭವಿಷ್ಯನಿಧಿ ಎನ್ನುವುದು ನಮಗೆ ಬಹಳಷ್ಟು ಸಂದರ್ಭದಲ್ಲಿ ಅನುಕೂಲಕ್ಕೆ ಬರುತ್ತದೆ. ಆದರೆ ಪಿಎಫ್ ಕ್ಲೇಮ್ ಮಾಡುವಾಗ ಕೆಲವೊಮ್ಮೆ ಸಮಸ್ಯೆ ಎದುರಾಗುತ್ತದೆ. ಪಿಎಫ್ ಕ್ಲೇಮ್ ಮಾಡುವಾಗ ಆಧಾರ್ ಮತ್ತು ಯುಎಎನ್ ಅಗತ್ಯವಾಗಿ ಬೇಕು. ಆಧಾರ್​ನಲ್ಲಿರುವ ಮಾಹಿತಿ ಈಗ ಬಹಳಷ್ಟು ದಾಖಲೆಗೆ ಆಧಾರವಾಗಿರುತ್ತದೆ. ಆಧಾರ್​ನಲ್ಲಿರುವ ಹೆಸರು ನಿಖರವಾಗಿರಬೇಕು. ಅದರಂತೆಯೇ ಯುಎಎನ್​ನಲ್ಲೂ ಇರಬೇಕು. ವ್ಯತ್ಯಾಸ ಇದ್ದರೆ ಕ್ಲೇಮ್ ಮಾಡುವುದು ಕಷ್ಟ. ಸದಸ್ಯ ಸತ್ತ ಬಳಿಕ ಅವರ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವಾಗ, ಆಧಾರ್ ಮತ್ತು ಯುಎಎನ್ ಮಾಹಿತಿ ತಾಳೆಯಾಗದಿದ್ದರೆ ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಇಪಿಎಫ್​ಒ ಸಂಸ್ಥೆ ಒಂದಷ್ಟು ವಿನಾಯಿತಿ ಕೊಟ್ಟಿದೆ.