ಪಾರಿವಾಳಗಳಿಗೆ ಹಾಕುವ ಧಾನ್ಯದಿಂದ ಗೆದ್ದು ಬಾ ಭಾರತ ಎಂದು ಬರೆದು ಶುಭ ಹಾರೈಸಿದ ಅಭಿಮಾನಿ

| Updated By: ಆಯೇಷಾ ಬಾನು

Updated on: Nov 19, 2023 | 11:48 AM

ಮಧ್ಯಾಹ್ನ 2 ಗಂಟೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ವಿಶ್ವ ಕಪ್​ಗಾಗಿ ಕದನ ನಡೆಯಲಿದೆ. ಹೀಗಾಗಿ ಇಂದು ದೇಶಾದ್ಯಂತ ಗೆದ್ದು ಬಾ ಇಂಡಿಯಾ ಅಂತಾ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಅದರಂತೆ ಮೈಸೂರಿನಲ್ಲಿ ಅಭಿಮಾನಿಯೊಬ್ಬರು ಪಾರಿವಾಳಗಳಿಗೆ ಹಾಕುವ ಧಾನ್ಯಗಳಲ್ಲಿ ಗೆದ್ದು ಬಾ ಭಾರತ ಎಂದು ಬರೆದು ಶುಭಹಾರೈಸಿದ್ದಾರೆ.

ಮೈಸೂರು, ನ.19: ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಕ್ರಿಕೆಟ್ ವಿಶ್ವಯುದ್ಧದ ಫೈನಲ್​ ಪಂದ್ಯದ ಕಾವು ಹೆಚ್ಚಾಗಿದೆ. ಮಧ್ಯಾಹ್ನ 2 ಗಂಟೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ವಿಶ್ವ ಕಪ್​ಗಾಗಿ ಕದನ ನಡೆಯಲಿದೆ. ಹೀಗಾಗಿ ಇಂದು ದೇಶಾದ್ಯಂತ ಗೆದ್ದು ಬಾ ಇಂಡಿಯಾ ಅಂತಾ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಕ್ರೀಡಾಭಿಮಾನಿಗಳು ವಿಶೇಷ ರೀತಿಯಲ್ಲಿ ಶುಭ ಕೋರುತ್ತಿದ್ದಾರೆ. ಅದರಂತೆ ಮೈಸೂರಿನಲ್ಲಿ ಅಭಿಮಾನಿಯೊಬ್ಬರು ಪಾರಿವಾಳಗಳಿಗೆ ಹಾಕುವ ಧಾನ್ಯಗಳಲ್ಲಿ ಗೆದ್ದು ಬಾ ಭಾರತ ಎಂದು ಬರೆದು ಶುಭಹಾರೈಸಿದ್ದಾರೆ.

2023ರಲ್ಲಿ ಭಾರತ ಕ್ರಿಕೆಟ್ ತಂಡವೂ 3ನೇ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಕನಸು ಮಾತ್ರ ನೋಡ್ತಿಲ್ಲ. ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. 2003 ಮತ್ತು 2007 ರಲ್ಲಿ ಸತತ 11 ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವೂ ಪ್ರಶಸ್ತಿ ಜಯಿಸಿತ್ತು. ಇಂದಿನ ಪಂದ್ಯವನ್ನ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆಯಲು ಕ್ಯಾಪ್ಟನ್​​ ರೋಹಿತ್ ಶರ್ಮಾ ಬಳಗ ತಯಾರಿ ನಡೆಸಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ