Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ, ವಿಡಿಯೋ ನೋಡಿ
ಹಣೆಬರಹ ಅಥವಾ ಪ್ರಾರಬ್ಧದ ಪರಿಕಲ್ಪನೆ ಬಗ್ಗೆ ತಿಳಿಯಿರಿ. ಮನುಷ್ಯನ ಆಯುಷ್ಯ, ಕರ್ಮ, ಹಣ, ವಿದ್ಯೆ ಮತ್ತು ಮರಣ ಈ ಐದು ಪ್ರಾರಬ್ಧಗಳು ಗರ್ಭದಲ್ಲಿಯೇ ನಿರ್ಧರಿತವಾಗುತ್ತವೆ ಎಂಬ ನಂಬಿಕೆಯನ್ನು ವಿವರಿಸಲಾಗಿದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರುಜಿ ಅವರು ಹಣೆಬರಹವನ್ನು ಬದಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಲೇಖನವು ಸ್ವಯಂ ಇಚ್ಛೆ ಮತ್ತು ವಿಧಿಯ ನಡುವಿನ ಸಂಘರ್ಷವನ್ನು ಪರಿಶೀಲಿಸುತ್ತದೆ.
ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ | ಪಂಚೈತಾನಿ ಹಿ ಸೃಜ್ಯಂತೇ ಗರ್ಭಸ್ಥ ವ ದೇಹಿನಃ ||
ಹಣೆ ಬರಹ ಅಥವಾ ವಿಧಿ ಲಿಖಿತ. ಮನುಷ್ಯನ ಐದು ಪ್ರಾರಬ್ಧಗಳಿವು. ಮನುಷ್ಯನ ಆಯುಷ್ಯ, ಕರ್ಮ, ಹಣ, ವಿದ್ಯೆ ಮತ್ತು ಮರಣ ಎಂಬ ಈ ಐದು ಯೋಗಗಳು, ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಸೃಷ್ಟಿಯಾಗಿಬಿಟ್ಟಿರುತ್ತವೆ. ಅನೇಕ ವಿಷಯಗಳು ನಮಗೆ ಅರ್ಥವಾಗುವುದೇ ಇಲ್ಲ. ನಾವು ಎಷ್ಟೇ ಪ್ರಯತ್ನಪಟ್ಟರೂ ಕೆಲವು ಘಟನೆಗಳನ್ನು ತಪ್ಪಿಸುವುದಕ್ಕಾಗಲೀ ಬದಲಿಸುವುದಕ್ಕಾಗಲೀ ನಮಗೆ ಆಗುವುದೇ ಇಲ್ಲ. ಇದಕ್ಕೇ ಹಣೆಬರಹ, ಅಥವಾ ಪ್ರಾರಬ್ಧ ಎಂದು. ತಾಯಿಯ ಗರ್ಭವನ್ನು ಪ್ರವೇಶಿಸಿದ ಕೂಡಲೇ ಆ ಭ್ರೂಣದ ಮೇಲೆ ಬ್ರಹ್ಮನು ಬರೆದುಬಿಡುತ್ತಾನಂತೆ. ಅದಕ್ಕೇ ಬ್ರಹ್ಮ ಲಿಖಿತ ಎಂದೂ ಹೆಸರು. ಹಣ ಬರಹವನ್ನು ಬದಲಾಯಿಸಿಕೊಳ್ಳಲು ಸಾಧ್ಯವೆ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗೂರುಜಿ ಉತ್ತರ ನೀಡಿದ್ದಾರೆ.