CM’s thanksgiving convention: ಸಿದ್ದರಾಮಯ್ಯರ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗುವವರಿಗೆ ಮೃಷ್ಟಾನ್ನ ಭೋಜನ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2023 | 12:37 PM

ಊಟದ ನಂತರ ತಿನ್ನಲು ಏಲಕ್ಕಿ ಬಾಳೆಹಣ್ಣು. ದೂರದ ಊರುಗಳಿಂದ ಬಂದವರು ಆಗಲೇ ಊಟ ಮಾಡಲಾರಂಭಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೈಸೂರಿನ ವರುಣಾದಲ್ಲಿ ಇಂದು ಕೃತಜ್ಞತಾ ಸಮಾವೇಶ (Thanksgiving convention) ನಡೆಸಲಿದ್ದು ಸಾವಿರಾರು ಜನ ಅದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಹಾಜರಾಗಲಿರುವ ಜನಕ್ಕೆ ಮೃಷ್ಟಾನ ಭೋಜನ (feast) ತಯಾರಾಗಿದೆ ಮಾರಾಯ್ರೇ. ಮೆನುನಲ್ಲಿ ಏನೇನಿದೆ ಅಂತ ಒಮ್ಮೆ ನೋಡಿಬಿಡಿ. ಸಿಹಿಗಾಗಿ ಹೋಳಿಗೆ, ಪೂರಿ, ಮೂರು ಬಗೆಯ ಪಲ್ಯಗಳು, ಬಜ್ಜಿ, ಮೊಸರು ಬಜ್ಜಿ, ಹಪ್ಪಳ-ಸಂಡಿಗೆ, ಪುಲಾವ್, ಅನ್ನ-ಸಾಂಬರು ಮತ್ತು ರಸಂ, ಮೊಸರು ಮತ್ತು ಮಜ್ಜಿಗೆ. ಊಟದ ನಂತರ ತಿನ್ನಲು ಏಲಕ್ಕಿ ಬಾಳೆಹಣ್ಣು. ದೂರದ ಊರುಗಳಿಂದ ಬಂದವರು ಆಗಲೇ ಊಟ ಮಾಡಲಾರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 10, 2023 12:36 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.