ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ

Edited By:

Updated on: Dec 04, 2024 | 1:18 PM

ಫೆಂಗಲ್ ಚಂಡಮಾರುತದ ಪ್ರಭಾವ ಟೊಮೆಟೋ ಬೆಳೆಯ ಮೇಲೂ ಆಗಿದೆ. ಬೆಳೆ ನಾಶ, ರೋಗದ ಪರಿಣಾಮ ಟೊಮೆಟೊ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಟೊಮೆಟೊ ಕಾಯಿಯನ್ನೇ ಮಾರಾಟ ಮಾಡಲಾಗುತ್ತಿದೆ. ದರವೂ ದುಬಾರಿಯಾಗಿದೆ. ವಿವರ ಇಲ್ಲಿದೆ.

ಚಿಕ್ಕಬಳ್ಳಾಪುರ, ಡಿಸೆಂಬರ್ 4: ಫೆಂಗಲ್ ಚಂಡಮಾರುತದಿಂದ ಟೊಮೆಟೋಗೆ ಭಾರಿ ಬೇಡಿಕೆ ಬಂದಿದ್ದು, ಬೆಳೆ ಕೊರತೆಯಾಗಿದೆ. ಜಿಟಿಜಿಟಿ ಮಳೆ ಹಾಗೂ ತಂಪಾದ ಹವಾಮಾನದಿಂದಾಗಿ ತೋಟದಲ್ಲಿ ಟೊಮೆಟೋ ಕಾಯಿ ಆಗಿದ್ದರೂ ಹಣ್ಣಾಗುತ್ತಿಲ್ಲ. ರೈತರು ಕಾಯಿಯನ್ನೇ ಕಟಾವು ಮಾಡಿ ಮಾರುಕಟ್ಟೆಗೆ ಬಿಡುತ್ತಿದ್ದು, ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಣ್ಣುಗಳ ಬದಲು ಕಾಯಿ ಮಾರಾಟ ಮಾಡಲಾಗುತ್ತಿದೆ. 14 ಕೆಜಿ ಬಾಕ್ಸ್ ಸಗಟು ಮಾರಾಟ (ಹೋಲ್​ಸೇಲ್) ದರ 800 ರೂಪಾಯಿ ಆಗಿದೆ. ಹೆಚ್ಚಿನ ವಿವರ ವಿಡಿಯೋದಲ್ಲಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More