ಕಷ್ಟದ ಟಾಸ್ಕ್​ ನಿಭಾಯಿಸಲು ಒದ್ದಾಟ; ಕೈ-ಕೈ ಮಿಲಾಯಿಸುವ ಹಂತಕ್ಕೆ ಬಂದ ಬಿಗ್​ ಬಾಸ್​ ಸ್ಪರ್ಧಿಗಳು

Updated on: Nov 09, 2023 | 5:18 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್​ ನೀಡಲಾಗಿದೆ. ಅದನ್ನು ನಿಭಾಯಿಸುವಾಗ ಒಬ್ಬರು ಇನ್ನೊಬ್ಬರನ್ನು ತಳ್ಳಾಡಿದ್ದಾರೆ. ಎರಡು ಗುಂಪುಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ವಿನಯ್​ ಗೌಡ ಮತ್ತು ಕಾರ್ತಿಕ್ ಮಹೇಶ್​ ಅವರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.

ಈ ಬಾರಿಯ ಬಿಗ್​ ಬಾಸ್​ನಲ್ಲಿ ಗುಂಪುಗಾರಿಕೆ ಜೋರಾಗಿದೆ. ಇಡೀ ದೊಡ್ಮನೆ ಎರಡು ಗುಂಪಾಗಿ ಒಡೆದುಹೋಗಿದೆ. ಆ ಗುಂಪುಗಳಲ್ಲಿ ಇರುವ ಸ್ಪರ್ಧಿಗಳ ಮನಸ್ಸು ಕೂಡ ಒಡೆದಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಟಾಸ್ಕ್​ ವಿಚಾರದಲ್ಲಂತೂ ಬಿಗ್​ ಬಾಸ್​ (Bigg Boss Kannada) ಮನೆ ಒಂದು ರೀತಿಯ ರಣಾಂಗಣ ಆಗುತ್ತಿದೆ. ವಿನಯ್​ ಗೌಡ (Vinay Gowda) ಅವರು ತಮ್ಮ ರಫ್​ ಆ್ಯಂಡ್​ ಟಫ್​ ವರ್ತನೆಯಿಂದಾಗಿ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಹಲವು ಹಂತಗಳಲ್ಲಿ ವಿನಯ್​ಗೆ ತಿರುಗೇಟ ನೀಡುತ್ತಿದ್ದಾರೆ. ಈಗ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್​ ನೀಡಲಾಗಿದೆ. ಅದನ್ನು ನಿಭಾಯಿಸುವಾಗ ಒಬ್ಬರು ಇನ್ನೊಬ್ಬರನ್ನು ತಳ್ಳಾಡಿದ್ದಾರೆ. ಎರಡು ಗುಂಪುಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ವಿನಯ್​ ಗೌಡ ಮತ್ತು ಕಾರ್ತಿಕ್ ಮಹೇಶ್​ (Karthik Mahesh) ಅವರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ನವೆಂಬರ್​ 9ರಂದು ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ದಿನದ 24 ಗಂಟೆಯೂ ಉಚಿತವಾಗಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ಲೈವ್​ ಆಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 09, 2023 05:18 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More