BJP MLA feels the heat: ಸಿದ್ದರಾಮಯ್ಯರನ್ನು ‘ಮುಗಿಸಿಬಿಡುವ’ ಹೇಳಿಕೆ ನೀಡಿದ್ದ ಡಾ ಸಿಎನ್ ಅಶ್ವಥ್ ನಾರಾಯಣ ವಿರುದ್ಧ ಎಫ್ಐಆರ್!

ಅರುಣ್​ ಕುಮಾರ್​ ಬೆಳ್ಳಿ

Updated on: May 25, 2023 | 10:32 AM

ಅಶ್ವಥ್ ನಾರಾಯಣ ವಿರೋಧ ಪಕ್ಷದ ಶಾಸಕ! ಲಕ್ಷ್ಮಣ್ ತಾವು ದೂರು ಸಲ್ಲಿಸಿದ್ದ ಠಾಣೆಗೆ ತೆರಳಿ ಎಫ್ಐಆರ್ ದಾಖಲಾಗುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಮೈಸೂರು: ಚುನಾವಣೆಗಿಂತ ಮುಂಚೆ ನಡೆದ ಸಂಗತಿಯನ್ನು ನಿರೀಕ್ಷಿಸಲಾಗಿತ್ತು ಮತ್ತು ಚುನಾವಣೆ ಇದೆಲ್ಲ ನಡೆಯಲಿದೆ ಅಂತಲೂ ನಿರೀಕ್ಷಿಸಲಾಗಿತ್ತು. ಸರ್ಕಾರದ ಪ್ರತಿನಿಧಿಗಳು ನಡೆಸುವ ಆಟಗಳಲ್ಲಿ ಅಸಲು ಇಕ್ಕಟ್ಟಿಗೆ, ಸಮಸ್ಯೆಗೆ ಸಿಲುಕುವವರು ಸರ್ಕಾರೀ ಅಧಿಕಾರಿಗಳು. ಚುನಾವಣೆಗೆ ಮೊದಲು ಆಗ ಮಿನಿಸ್ಟ್ರಾಗಿದ್ದ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಟಿಪ್ಪು ಸುಲ್ತಾನನನ್ನು ಕೊಂದ ಹಾಗೆ ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರ (Siddaramaiah) ಕತೆಯನ್ನೂ ಮುಗಿಸಿಬಿಡಿ ಅಂತ ಅತ್ಯಂತ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದರು. ಕೂಡಲೇ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಎಫ್ಐಆರ್ ದಾಖಲಾಗಿರಲಿಲ್ಲ. ಆದರೆ ಈಗ ಗೇಮ್ ಉಲ್ಟಾ ಅಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ ಮತ್ತು ಅಶ್ವಥ್ ನಾರಾಯಣ ವಿರೋಧ ಪಕ್ಷದ ಶಾಸಕ! ಲಕ್ಷ್ಮಣ್ ತಾವು ದೂರು ಸಲ್ಲಿಸಿದ್ದ ಠಾಣೆಗೆ ತೆರಳಿ ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್ ದಾಖಲಾಗುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಪಾಪ ಪೊಲೀಸ್ ಆಧಿಕಾರಿಯ ಅವಸ್ಥೆ ಯಾರಿಗೂ ಬೇಡ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.