ಬೆಂಗಳೂರು, ನ.08: ಆನೇಕಲ್(Anekal) ತಾಲೂಕಿನ ಚಂದಾಪುರ ಸಮೀಪದ ರಾಮಕೃಷ್ಣಪುರ ಕೆರೆಯಲ್ಲಿ ಮೀನುಗಳ ಮಾರಣಹೋಮ ಆಗಿದ್ದು, ಕೆಮಿಕಲ್ ನೀರು ಹರಿಬಿಟ್ಟಿದ್ದರಿಂದ ಮೀನು(Fish)ಗಳು ಸಾವನ್ನಪ್ಪಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೌದು, ರಾಮಕೃಷ್ಣಪುರ ಪ್ರಸನ್ನ ವೆಂಕಟೇಶ್ವರ ದೇವಾಲಯಕ್ಕೆ ಹೊಂದಿಕೊಂಡಿರುವ ಕೆರೆ ಇದಾಗಿದ್ದು, ಕೆರೆಯ ಅಕ್ಕಪಕ್ಕದ ಅಪಾರ್ಟ್ಮೆಂಟ್ ಹಾಗೂ ಕಾರ್ಖಾನೆಗಳ ಕಲುಷಿತ ನೀರು ಹರಿದು ಬಿಟ್ಟ ಹಿನ್ನೆಲೆ ಈ ಘಟನೆ ನಡೆದಿದ್ದು, ಪರಿಣಾಮವಾಗಿ ದೇವಾಲಯ ಹಾಗೂ ಸುತ್ತಮುತ್ತ ಮೀನುಗಳ ಸಾವಿನಿಂದ ಗಬ್ಬು ವಾಸನೆ ಹಬ್ಬಿದೆ. ಇನ್ನು ಇಷ್ಟೆಲ್ಲಾ ಮೀನುಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ