ಆಂಧ್ರದ ವಿಶಾಖಪಟ್ಟಣಂ ಸಮುದ್ರತೀರದಲ್ಲಿ ಪತ್ತೆಯಾಯ್ತು ಅಪರೂಪದ ಸಮುದ್ರ ಕುದುರೆ ಮೀನುಗಳು, ವಿಶೇಷತೆ ಏನೆಂದರೆ..

Seahorse Fish: ಈ ಸೀ ಹಾರ್ಸ್ ಫಿಶ್ ಆಕಾರ ನೋಡಲು ಚಿಕ್ಕದಾಗಿದೆ.. 2-3 ಇಂಚು ಗಾತ್ರದಲ್ಲಿದೆ. ಸೀಗಡಿಯಂತೆಯೇ ಭಾಸವಾಗುತ್ತದೆ. ಅಷ್ಟೇ ಏಕೆ ಸೀಗಡಿಯಲ್ಲಿ ಈ ಸೀ ಹಾರ್ಸ್​​ ಬೆರೆತಿದ್ದರೆ ಮೀನುಗಾರರು ಅದನ್ನು ಅಷ್ಟಾಗಿ ಗುರಿತಿಸುವುದಿಲ್ಲ. ಈ ಸಮುದ್ರ ಕುದುರೆ ಮೀನುಗ ಸಾಮಾನ್ಯವಾಗಿ ಉಷ್ಣವಲಯದ ಮತ್ತು ಸಮಶೀತೋಷ್ಣ ನೀರಿನಲ್ಲಿ ಕಂಡುಬರುತ್ತವೆ.

ಆಂಧ್ರದ ವಿಶಾಖಪಟ್ಟಣಂ ಸಮುದ್ರತೀರದಲ್ಲಿ ಪತ್ತೆಯಾಯ್ತು ಅಪರೂಪದ ಸಮುದ್ರ ಕುದುರೆ ಮೀನುಗಳು, ವಿಶೇಷತೆ ಏನೆಂದರೆ..
ವಿಶಾಖಪಟ್ಟಣಂ ಸಮುದ್ರತೀರದಲ್ಲಿ ಪತ್ತೆಯಾಯ್ತು ಅಪರೂಪದ ಸಮುದ್ರ ಕುದುರೆ
Follow us
ಸಾಧು ಶ್ರೀನಾಥ್​
|

Updated on: Sep 15, 2023 | 3:03 PM

Vizag, ಆಂಧ್ರ ಪ್ರದೇಶ: ವಿಶಾಖಪಟ್ಟಣಂ ಬಳಿ ಬಂಗಾಳಕೊಲ್ಲಿ ಕರಾವಳಿಯಲ್ಲಿ ( Visakhapatnam Beach) ಸಮುದ್ರ ಕುದುರೆ ಎಂಬ ಅಪರೂಪದ ಮೀನುಗಳು ಮೀನುಗಾರರ ಕಣ್ಣಿಗೆ ಬಿದ್ದಿವೆ. ಎಂದಿನಂತೆ ಅವರು ತಾವು ಹಿಡಿಯುತ್ತಿದ್ದ ಸೀಗಡಿಗಳ ಮಧ್ಯೆ ವಿಚಿತ್ರ ಆಕಾರದ ಈ ಮೀನುಗಳನ್ನು ನೋಡಿದ್ದಾರೆ. ಮೊದಲು ರತ್ನಂ ಎಂಬ ಮೀನುಗಾರನಿಗೆ ಇದು ಆಶ್ಚರ್ಯ ತಂದಿದೆ. ಇಲ್ಲಿಯವರೆಗೆ ಅವರುಯಾರೂ ಇಂತಹುದನ್ನು ಗುರುತಿಸಿಲಿಲ್ಲ. ಆದರೆ ಮೀನುಗಾರರಿಂದ ಸಿಗಡಿ ಖರೀದಿಸಿದ ಉದ್ಯಮಿ ಗ್ರಾಹಕ ವಿಜಯ್ ಕುಮಾರ್ ಅದನ್ನು ಗುರುತಿಸಿದ್ದಾರೆ. ಮುಂದೆ ಈ ಮೀನುಗಳ ಫೋಟೋಗಳನ್ನು ಆಂಧ್ರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ವಾಟ್ಸಾಪ್ ಸ್ಟೇಟಸ್ ನಲ್ಲಿ ನೋಡಿ, ಅವರು ಅದನ್ನು ಸಮುದ್ರ ಕುದುರೆ ಎಂದು ಗುರುತಿಸಿ ವಿಜಯ್ ಅವರಿಗೆ ಕರೆ ಮಾಡಿ ಅದರ ವಿವರಗಳನ್ನು ತಿಳಿಸಿದ್ದಾರೆ. ಹಾಗಾಗಿ ವಿಶಾಖಪಟ್ಟಣದಲ್ಲಿ ಈಗ ಸಿಕ್ಕಿರುವುದು ಸಮುದ್ರ ಕುದುರೆ ಜಾತಿಯ ಮೀನು (Seahorse Fish) ಎಂಬುದು ಖಚಿತವಾಗಿದೆ. ಇವು ನೇರವಾಗಿ ನಿಂತು ಈಜುವ ಮೀನುಗಳು.

ವಿಶಾಖಪಟ್ಟಣದಲ್ಲಿ ಮೀನುಗಾರರು ಹಿಂದೆಂದೂ ಈ ಜಾತಿಯ ಮೀನನ್ನು ನೋಡಿರಲಿಲ್ಲ. ಸಮುದ್ರ ಕುದುರೆ ಮೀನು ಆಕಾರದಲ್ಲಿ ಕುದುರೆಯ ತಲೆಯನ್ನು ಹೊಂದಿರುವ ಅಸಾಮಾನ್ಯ ಮೀನು. ಸಮುದ್ರ ಕುದುರೆಗಳಲ್ಲಿ 20 ಕ್ಕೂ ಹೆಚ್ಚು ಜಾತಿಗಳು ಅಥವಾ ಪ್ರಭೇದಗಳಿವೆ. ಅವು ಬೆಚ್ಚಗಿನ ಮತ್ತು ಸೌಮ್ಯವಾದ ಸಮುದ್ರಗಳಲ್ಲಿ ಜೀವಿಸುತ್ತವೆ. ಪೂರ್ವ ಕರಾವಳಿಯಲ್ಲಿರುವ ಈ ಅಪರೂಪದ ಸಮುದ್ರ ಕುದುರೆಯ ಕುರುಹುಗಳು ಸಂಶೋಧಕರನ್ನು ಕುತೂಹಲ ಕೆರಳಿಸಿದೆ. ಇವುಗಳ ಬಗ್ಗೆ ವಿಚಾರಿಸಿದರೆ ಇತ್ತೀಚಿನ ದಿನಗಳಲ್ಲಿ ಸಮುದ್ರಕ್ಕೆ ಬೇಟೆಗೆ ತೆರಳಿದ್ದ ಮೀನುಗಾರರ ಬಲೆಗೆ ಹೆಚ್ಚಾಗಿ ಸಿಕ್ಕಿ ಬೀಳುತ್ತಿವೆ ಎಂಬುದು ಮತ್ತಷ್ಟು ಗೊತ್ತಾಗಿದೆ. ಇತ್ತೀಚೆಗೆ ವಿಶಾಖಪಟ್ಟಣದ ಮೀನುಗಾರಿಕಾ ಬಲೆಯಲ್ಲಿ ಈ ಸಮುದ್ರ ಕುದುರೆ ಪತ್ತೆಯಾಗಿದ್ದು, ನಗರದ ವಿಜಯಕುಮಾರ್ ಅವರು ಸಂಜೆ ಬಂದರಿನಲ್ಲಿ ಸಿಗಡಿ ಖರೀದಿಸಿ, ಸೀಗಡಿ ಸಮೇತ ಈ ಸಮುದ್ರ ಕುದುರೆಯನ್ನು ಮನೆಗೆ ತಂದಾಗ ಈ ಅಪರೂಪದ ಜೀವಿ ಪ್ರಕರಣ ಬೆಳಕಿಗೆ ಬಂದಿದೆ.

ಈ ಸೀ ಹಾರ್ಸ್ ಫಿಶ್ ಆಕಾರ ನೋಡಲು ಚಿಕ್ಕದಾಗಿದೆ.. ಎರಡರಿಂದ ಮೂರು ಇಂಚು ಗಾತ್ರದಲ್ಲಿದೆ. ಸೀಗಡಿಯನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಅಷ್ಟೇ ಏಕೆ ಸೀಗಡಿಯಲ್ಲಿ ಈ ಸೀ ಹಾರ್ಸ್​​ ಬೆರೆತಿರುವುದರಿಂದ ಮೀನುಗಾರರು ಅಷ್ಟಾಗಿ ಗಮನಿಸುವುದಿಲ್ಲ. ಈ ಸಮುದ್ರ ಕುದುರೆ ಮೀನುಗಳು ಸಾಮಾನ್ಯವಾಗಿ ಉಷ್ಣವಲಯದ ಮತ್ತು ಸಮಶೀತೋಷ್ಣ ನೀರಿನಲ್ಲಿ ಕಂಡುಬರುತ್ತವೆ. ಈ ಸಮುದ್ರ ಕುದುರೆಗಳು ಮುಖ್ಯವಾಗಿ ಹವಳದ ಬಂಡೆಗಳು ಮತ್ತು ಮ್ಯಾಂಗ್ರೋವ್‌ಗಳಂತಹ ಪ್ರದೇಶಗಳಲ್ಲಿ ಸಂಚರಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ಸಮುದ್ರಕುದುರೆಗಳ ಸಂತಾನೋತ್ಪತ್ತಿ ಪ್ರಕ್ರಿಯೆಯು ಅಸಾಮಾನ್ಯವಾಗಿದೆ.. ಸಮುದ್ರಕುದುರೆ ಮೀನು ಜಾತಿಯ ಅನೇಕ ವಿಶಿಷ್ಟತೆಗಳಿವೆ. ಅವು ನೇರವಾಗಿ ನಿಂತು ಈಜುತ್ತವೆ. ಬಾಗಿದ ಕುತ್ತಿಗೆ, ಉದ್ದವಾದ ಗಂಟಲು, ತಲೆ, ದೇಹ ನೇರ ಮತ್ತು ಬಾಲ ಬಾಗಿರುತ್ತದೆ. ಕಿವಿಗಳು ಇರುವುದಿಲ್ಲ. ಜೊತೆಗೆ, ಸಮುದ್ರ ಕುದುರೆಗಳು ಸಂತಾನೋತ್ಪತ್ತಿ ಮಾಡುವ ರೀತಿಯಲ್ಲಿ ಅಸಾಮಾನ್ಯವಾಗಿವೆ. ಹೆಣ್ಣು ಸಮುದ್ರ ಕುದುರೆಯು ತನ್ನ ಮೊಟ್ಟೆಗಳನ್ನು ಗಂಡು ಸಮುದ್ರ ಕುದುರೆಯ ಬಾಲದ ಕೆಳಗೆ ಚೀಲದಲ್ಲಿ ಇಡುತ್ತದೆ. ಮೊಟ್ಟೆ ಹೊರಬರುವವರೆಗೆ ಗಂಡು ಅವುಗಳನ್ನು ಒಯ್ಯುತ್ತದೆ. ಗಂಡು ಸಮುದ್ರ ಕುದುರೆಗಳು ತನ್ನ ಸಂತತಿಗೆ ಕಾವು ಕೊಡಲು ತಮ್ಮ ದೇಹದ ಮುಂಭಾಗದಲ್ಲಿ ಚೀಲವನ್ನು ಹೊಂದಿರುತ್ತವೆ.

ಗರ್ಭಾವಸ್ಥೆಯಲ್ಲಿ, ಹೆಣ್ಣು ಮೀನುಗಳು ಮೊಟ್ಟೆಗಳನ್ನು ಗಂಡು ಮೀನಿನ ಚೀಲಕ್ಕೆ ಬಿಡುತ್ತವೆ. ನಂತರ ಗಂಡು ಮೀನು ಅವುಗಳನ್ನು ಆಂತರಿಕವಾಗಿ ಫಲವತ್ತಾಗಿಸುತ್ತದೆ. ಪರಿಣಾಮವಾಗಿ, ಶಿಶುಗಳು ಮೊಟ್ಟೆಗಳಿಂದ ಹೊರಬಂದಾಗ, ಅವುಗಳನ್ನು ನೀರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅವು ಒಂದೇ ಸ್ಥಳದಲ್ಲಿ ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸಿದರೆ, ಆ ಪ್ರದೇಶಗಳಲ್ಲಿ ಅದರ ಉಪಸ್ಥಿತಿಯು ಬಲವಾಗಿ ವ್ಯಕ್ತವಾಗುತ್ತದೆ. ಅನೇಕ ಜನರು ಸಮುದ್ರ ಕುದುರೆಗಳನ್ನು ಪ್ರೀತಿಸುತ್ತಾರೆ. ಏಕೆಂದರೆ ಅವುಗಳನ್ನು ತಮ್ಮ ಆಸಕ್ತಿದಾಯಕ ರೂಪದೊಂದಿಗೆ ಅಕ್ವೇರಿಯಂನಲ್ಲಿ ಇರಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಈ ಸಮುದ್ರ ಕುದುರೆಗಳನ್ನು ಔಷಧದಲ್ಲಿ ಬಳಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!