Engineers Day 2023: ದೇಶ ನಿರ್ಮಾಣಕ್ಕೆ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ ಅವರ ಪಾತ್ರ ಉಲ್ಲೇಖಿಸಿ ವಿಶೇಷ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಇಂಜಿನಿಯರ್ಸ್ ದಿನದ ಅಂಗವಾಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ(M Visvesvaraya) ಅವರನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi ವಿಶೇಷ ಶುಭಾಶಯವನ್ನು ಕೋರಿದ್ದಾರೆ. ದೇಶದ ನಿರ್ಮಾಣದಲ್ಲಿ ಇಂಜಿನಿಯರ್ಗಳ ಪಾತ್ರವನ್ನು ಉಲ್ಲೇಖಿಸಿ ಒಂದು ಸದೃಢ ದೇಶವನ್ನು ಹೇಗೆ ಕಟ್ಟಬೇಕು ಅದರಲ್ಲಿ ಇಂಜಿನಿಯರ್ಗಳ ಪಾತ್ರಗಳೇನು ಎಂಬುದನ್ನು ಪ್ರಧಾನಿ ವಿವರಿಸಿದ್ದಾರೆ
ಇಂಜಿನಿಯರ್ಸ್ ದಿನದ ಅಂಗವಾಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ(M Visvesvaraya) ಅವರನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi ವಿಶೇಷ ಶುಭಾಶಯವನ್ನು ಕೋರಿದ್ದಾರೆ. ದೇಶದ ನಿರ್ಮಾಣದಲ್ಲಿ ಇಂಜಿನಿಯರ್ಗಳ ಪಾತ್ರವನ್ನು ಉಲ್ಲೇಖಿಸಿ ಒಂದು ಸದೃಢ ದೇಶವನ್ನು ಹೇಗೆ ಕಟ್ಟಬೇಕು ಅದರಲ್ಲಿ ಇಂಜಿನಿಯರ್ಗಳ ಪಾತ್ರಗಳೇನು ಎಂಬುದನ್ನು ಪ್ರಧಾನಿ ವಿವರಿಸಿದ್ದಾರೆ. ಅದರಲ್ಲೂ ವಿಶ್ವೇಶ್ವರಯ್ಯ ಅವರನ್ನು ವಿಶೇಷವಾಗಿ ಸ್ಮರಿಸಿ ಕೆಆರ್ಎಸ್ ಅಣೆಕಟ್ಟೆಯನ್ನು ಕಟ್ಟಿ ಲಕ್ಷಾಂತರ ರೈತರ ಜೀವನವನ್ನು ಹೇಗೆ ಬೆಳಗಿದರು ಎಂಬುದನ್ನು ಮೋದಿಯವರು ತಾವು ಹಂಚಿಕೊಂಡಿರುವ ವಿಡಿಯೋದಲ್ಲಿ ವಿವರಿಸಿದ್ದಾರೆ.
ಇದರ ಜತೆಗೆ ಭಾರತದ ಇಂಜಿನಿಯರಿಂಗ್ ಪರಂಪರೆ ಇಂದು ನಿನ್ನೆಯದಲ್ಲ ನೂರಾರು ವರ್ಷಗಳ ಹಿಂದೆಯೇ ಅತ್ಯದ್ಭುತ ದೇವಾಲಯಗಳು, ಅತ್ಯಧ್ಭುತ ಕಟ್ಟಡಗಳ ಮೂಲಕ ಸಾಕಷ್ಟು ಶಿಲ್ಪಿಗಳು ತಮ್ಮ ಇಂಜಿನಿಯರಿಂಗ್ ಕಲೆಗಳ ಮೂಲಕ ಗಮನ ಸೆಳೆದಿದ್ದಾರೆ ಎಂದು ದೇಶದ ಖ್ಯಾತ ಶಿಲ್ಪ ಕಲೆಗಳನ್ನು ತಮ್ಮ ವಿಡಿಯೋ ತೋರಿಸಿದ್ದಾರೆ.
ಅದರಲ್ಲಿ ಕರ್ನಾಟಕದ ಹಂಪಿ, ಮುರುಡೇಶ್ವರವನ್ನು ಉಲ್ಲೇಖಿಸಿದ್ದಾರೆ. ಇದರ ಜತೆಗೆ ಆಧುನಿಕ ಭಾರತದ ವಿಶೇಷತೆಯನ್ನು ಹೇಳುವಾಗ ಶಿವಮೊಗ್ಗ ವಿಮಾನ ವಿಮಾನ ನಿಲ್ದಾಣವನ್ನು ಕೂಡ ಉಲ್ಲೇಖಿಸಿದ್ದಾರೆ. ಹಾಗೆಯೇ ಸಂಸತ್ ಭವನ, ಕಾಶ್ಮೀರದ ಕಣಿವೆಯಲ್ಲಿನ ಸುರಂಗ ಮಾರ್ಗ, ದೇಶದ ಅತ್ಯಂತ ಉದ್ದದ ರೈಲ್ವೆ ಸೇತುವೆ ಸೇರಿದಂತೆ ಹಲವು ಆಧುನಿಕ ಕಾಲದಲ್ಲಿ ಕಂಡುಬಂದಿರುವಂತಹ ಅತ್ಯದ್ಭುತ ಇಂಜಿನಿಯರಿಂಗ್ ನಿರ್ಮಾಣವನ್ನು ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
Greetings to all hardworking engineers on #EngineersDay! Their innovative minds and tireless dedication have been the backbone of our nation’s progress. From infrastructural marvels to tech breakthroughs, their contributions touch every aspect of our lives. pic.twitter.com/lcBeL1GmZQ
— Narendra Modi (@narendramodi) September 15, 2023
ಇಂದು ಇಂಜಿನಿಯರ್ಸ್ ಡೇ, ಪ್ರಧಾನಿ ಮೋದಿ ದೇಶದ ಎಲ್ಲಾ ಇಂಜಿಯರ್ಗಳನ್ನು ಅಭಿನಂದಿಸಿ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವಿಡಿಯೋ ಶೀರ್ಷಿಕೆಯಲ್ಲಿ ಕಷ್ಟಪಟ್ಟು ದುಡಿಯುವ ಇಂಜಿನಿಯರ್ಗಳಿಗೆ ದಿನದ ಶುಭಾಶಯಗಳು ಅವರ ನವೀನ ಮನಸ್ಸು ಮತ್ತು ದಣಿವರಿಯದ ಸಮರ್ಪಣೆ ನಮ್ಮ ದೇಶದ ಪ್ರಗತಿಗೆ ಬೆನ್ನೆಲುಬಾಗಿದೆ. ತಂತ್ರಜ್ಞಾನದ ಪ್ರಗತಿಗೆ ಅವರ ಕೊಡುಗೆ ಅಪಾಯ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ