ರಾಮಚರಿತಮಾನಸವನ್ನು ಪೊಟ್ಯಾಶಿಯಂ ಸೈನೈಡ್‌ಗೆ ಹೋಲಿಸಿದ ಬಿಹಾರದ ಶಿಕ್ಷಣ ಸಚಿವ

ರಾಮಚರಿತ ಮಾನಸ ಕುರಿತು ಸಚಿವ ಚಂದ್ರಶೇಖರ್ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿತೀಶ್ ಕುಮಾರ್ ಕೇಳುತ್ತಿಲ್ಲವೇ? ನಿತೀಶ್ ಕುಮಾರ್ ಅವರು ಸನಾತನ ಸಂಸ್ಥೆಯನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಚಂದ್ರಶೇಖರ್ ಅವರಿಗೆ ಯಾವುದೇ ಸಮಸ್ಯೆ ಇದ್ದರೆ ಅವರು ಧರ್ಮ ಬದಲಿಸಲಿ ಎಂದು ಬಿಜೆಪಿ ವಕ್ತಾರ ನೀರಜ್ ಕುಮಾರ್ ಸಲಹೆ ನೀಡಿದ್ದಾರೆ.

ರಾಮಚರಿತಮಾನಸವನ್ನು ಪೊಟ್ಯಾಶಿಯಂ ಸೈನೈಡ್‌ಗೆ ಹೋಲಿಸಿದ ಬಿಹಾರದ ಶಿಕ್ಷಣ ಸಚಿವ
ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್
Follow us
ರಶ್ಮಿ ಕಲ್ಲಕಟ್ಟ
|

Updated on:Sep 15, 2023 | 3:33 PM

ಪಾಟ್ನಾ ಸೆಪ್ಟೆಂಬರ್ 15: ಬಿಹಾರದ (Bihar) ಶಿಕ್ಷಣ ಸಚಿವ ಚಂದ್ರಶೇಖರ್ (Chandra Shekhar) ರಾಮಾಯಣವನ್ನು ಆಧರಿಸಿದ ಹಿಂದೂ ಧಾರ್ಮಿಕ ಪುಸ್ತಕವಾದ ರಾಮಚರಿತಮಾನಸವನ್ನು(Ramcharitmanas) ಪೊಟ್ಯಾಶಿಯಂ ಸೈನೈಡ್‌ಗೆ (Potassium cyanide) ಹೋಲಿಸಿದ್ದಾರೆ. ಹಿಂದಿ ದಿವಸ್‌ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. “ನೀವು ಐವತ್ತೈದು ರೀತಿಯ ಭಕ್ಷ್ಯಗಳನ್ನು ಬಡಿಸಿ, ಅದರಲ್ಲಿ ಪೊಟ್ಯಾಶಿಯಂ ಸೈನೈಡ್ ಅನ್ನು ಬೆರೆಸಿದರೆ, ನೀವು ಅದನ್ನು ತಿನ್ನುತ್ತೀರಾ? ಹಿಂದೂ ಧರ್ಮದ ಧರ್ಮಗ್ರಂಥಗಳ ವಿಷಯವೂ ಅದೇ”ಎಂದು ಚಂದ್ರಶೇಖರ್ ಹೇಳಿದ್ದಾರೆ.

ರಾಮಚರಿತಮಾನಸಕ್ಕೆ ನನ್ನ ಆಕ್ಷೇಪ ದೃಢವಾಗಿದೆ. ಅದು ನನ್ನ ಜೀವನದುದ್ದಕ್ಕೂ ಇರುತ್ತದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂದು ಬಿಹಾರ ಸಚಿವರು ಹೇಳಿದ್ದಾರೆ. ಗಟಾರಕ್ಕೆ ಇಳಿಯುವವರ ಜಾತಿಗಳನ್ನು ಬದಲಾಯಿಸದ ಹೊರತು ಈ ದೇಶದಲ್ಲಿ ಮೀಸಲಾತಿ ಮತ್ತು ಜಾತಿ ಗಣತಿಯ ಅವಶ್ಯಕತೆ ಇರುತ್ತದೆ ಎಂದು ಅವರು ಹೇಳಿದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ರಾಮಚರಿತ ಮಾನಸ ಕುರಿತು ಸಚಿವ ಚಂದ್ರಶೇಖರ್ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿತೀಶ್ ಕುಮಾರ್ ಕೇಳುತ್ತಿಲ್ಲವೇ? ನಿತೀಶ್ ಕುಮಾರ್ ಅವರು ಸನಾತನ ಸಂಸ್ಥೆಯನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಚಂದ್ರಶೇಖರ್ ಅವರಿಗೆ ಯಾವುದೇ ಸಮಸ್ಯೆ ಇದ್ದರೆ ಅವರು ಧರ್ಮ ಬದಲಿಸಲಿ ಎಂದು ಬಿಜೆಪಿ ವಕ್ತಾರ ನೀರಜ್ ಕುಮಾರ್ ಸಲಹೆ ನೀಡಿದ್ದಾರೆ.

ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಚಂದ್ರಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಹೇಳಿದ್ದಾರೆ.

ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಹೊಸ ತಲೆಮಾರಿಗೆ ವಿಷ ಉಣಿಸುತ್ತಿದ್ದಾರೆ. ಬಿಹಾರದ ಶಿಕ್ಷಣ ಸಚಿವರಿಗೆ ನಾಚಿಕೆಯಾಗಬೇಕು. ರಾಮಚರಿತಮಾನಸ ಪೊಟ್ಯಾಶಿಯಂ ಸೈನೈಡ್ ಎಂದು ಕರೆಯುವ ಮೂಲಕ ಹೊಸ ತಲೆಮಾರಿನ ಮನಸ್ಸಿಗೆ ವಿಷ ಉಣಿಸುತ್ತಿದ್ದಾರೆ ಎಂದು ಪಾಸ್ವಾನ್ ಹೇಳಿದ್ದಾರೆ.

ಇದನ್ನೂ ಓದಿ:  ಇಂಡಿಯಾ ಮೈತ್ರಿಕೂಟ ಸನಾತನ ಧರ್ಮ ಮತ್ತು ಹಿಂದೂ ವಿರೋಧಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಶಿಕ್ಷಣ ಸಚಿವರ ಮಾನಸಿಕ ಸ್ಥಿತಿ ಕೆಟ್ಟಿದೆ. ಅವರು ಸ್ವತಃ ಚಿಕಿತ್ಸೆ ಪಡೆಯಬೇಕು. ನಾವು 2003 ರಲ್ಲಿ ಮಾನಸಿಕ ಆಸ್ಪತ್ರೆಯನ್ನು ತೆರೆದಿದ್ದೇವೆ. ಬಿಹಾರ ಸರ್ಕಾರವು ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರೆ, ಬಿಜೆಪಿಯು ಅವರಿಗೆ ಚಿಕಿತ್ಸೆ ನೀಡಲಿದೆ ಎಂದು ಬಿಹಾರದ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಹೇಳಿದ್ದಾರೆ.

ಈ ಹಿಂದೆಯೂ ಚಂದ್ರಶೇಖರ್ ಇದೇ ರೀತಿ ಹೇಳಿಕೆ ನೀಡಿದ್ದರು

ಚಂದ್ರಶೇಖರ್ ರಾಮಚರಿತಮಾನಸ ಕುರಿತು ಹೇಳಿಕೆ ನೀಡಿ ವಿವಾದಕ್ಕೀಡಾಗಿರುವುದು ಇದೇ ಮೊದಲು ಅಲ್ಲ. ರಾಮಚರಿತಮಾನಸ ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಆರ್‌ಜೆಡಿ ಪಕ್ಷದ ಸಚಿವರು ಜನವರಿಯಲ್ಲಿ ಹೇಳಿದ್ದರು. ಒಂದು ರಾಷ್ಟ್ರವು ಪ್ರೀತಿ ಮತ್ತು ವಾತ್ಸಲ್ಯದಿಂದ ಶ್ರೇಷ್ಠವಾಗುತ್ತದೆ. ರಾಮಚರಿತಮಾನಸ್, ಮನುಸ್ಮೃತಿ ಮತ್ತು ಬಂಚ್ ಆಫ್ ಥಾಟ್ಸ್‌ನಂತಹ ಪುಸ್ತಕಗಳು ದ್ವೇಷ ಮತ್ತು ಸಾಮಾಜಿಕ ವಿಭಜನೆಯ ಬೀಜಗಳನ್ನು ಬಿತ್ತಿದವು. ದಲಿತರು, ಹಿಂದುಳಿದವರು ಮತ್ತು ಮಹಿಳೆಯರಿಗೆ ಶಿಕ್ಷಣದ ವಿರುದ್ಧ ಮಾತನಾಡುವ ರಾಮಚರಿತಮಾನದ ಒಂದು ಭಾಗ ಮತ್ತು ಮನುಸ್ಮೃತಿಯನ್ನು ಜನರು ಸುಟ್ಟುಹಾಕಲು ಇದೇ ಕಾರಣ ಎಂದು ಸಚಿವರು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Fri, 15 September 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ