ಇಂಡಿಯಾ ಮೈತ್ರಿಕೂಟ ಸನಾತನ ಧರ್ಮ ಮತ್ತು ಹಿಂದೂ ವಿರೋಧಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ತಮಿಳುನಾಡಿನ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾಷೆಯ ತಡೆಯಿಂದಾಗಿ ದೇಶದ ಉಳಿದವರಿಗೆ ಇದು ಅರ್ಥವಾಗಲಿಲ್ಲ. ಇದು ಯಾವಾಗಲೂ ಹಾಗೆ. ಈಗ ಸೋಷಿಯಲ್ ಮೀಡಿಯಾದಿಂದಾಗಿ ಮಂತ್ರಿಯೊಬ್ಬರು ಏನು ಹೇಳುತ್ತಿದ್ದಾರೆಂದು ತಿಳಿಯಲು ಅನುವಾದಕರೇ ಬೇಕಾಗಿಲ್ಲ. ಇದು ಆಶ್ಚರ್ಯವೇನಿಲ್ಲ. 70 ವರ್ಷಗಳಿಂದ ಡಿಎಂಕೆ ಇದನ್ನು ಮಾಡುತ್ತಿದೆ. ಇದು ಬೂಟಾಟಿಕೆ. ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು "ಸಂವಿಧಾನದ ಅಪಹಾಸ್ಯ" ಎಂದು ಕರೆದ ನಿರ್ಮಲಾ ಸೀತಾರಾಮನ್

ಇಂಡಿಯಾ ಮೈತ್ರಿಕೂಟ ಸನಾತನ ಧರ್ಮ ಮತ್ತು  ಹಿಂದೂ ವಿರೋಧಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us
ರಶ್ಮಿ ಕಲ್ಲಕಟ್ಟ
|

Updated on:Sep 15, 2023 | 3:15 PM

ದೆಹಲಿ ಸೆಪ್ಟೆಂಬರ್ 15 : ಡಿಎಂಕೆ (DMK) ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ (INDIA) ಹಿಂದೂಗಳು ಮತ್ತು ‘ಸನಾತನ ಧರ್ಮ’ದ ವಿರುದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಸನಾತನ ಧರ್ಮ, ಜನರ ನಡುವೆ ವಿಭಜನೆ ಮತ್ತು ತಾರತಮ್ಯವನ್ನು ಪ್ರೇರೇಪಿಸುತ್ತಿದೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ವಿರುದ್ದ ಸಚಿವೆ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಅನ್ನು ನೇರವಾಗಿ ಟಾರ್ಗೆಟ್ ಮಾಡಿದ ನಿರ್ಮಲಾಸೀತಾರಾಮನ್, ಪ್ರಸ್ತುತ ಪಕ್ಷ ಭಾರತವನ್ನು ಒಡೆಯಲು ಬಯಸುವ ಗುಂಪುಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಇತರ ನಾಯಕರ ಡಿಎಂಕೆ ನಾಯಕನ ಹೇಳಿಕೆ ಬಗ್ಗೆ ಅಂತರ ಕಾಪಾಡಿದ್ದರೂ ಬಿಜೆಪಿ,  ಕಾಂಗ್ರೆಸ್ ಪಕ್ಷದ ಮೇಲೆ ಟೀಕಾ ಪ್ರಹಾರ ಮಾಡಿದೆ.

“ಇದು ಸನಾತನ ಧರ್ಮದ ವಿರುದ್ಧವಲ್ಲ, ಆದರೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕರೆ ಎಂದು ಸಚಿವರು ಬಹಿರಂಗವಾಗಿ ಹೇಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದು, ಇಂಡಿಯಾ ಮೈತ್ರಿಕೂಟದ ಯಾವುದೇ ಘಟಕವು ಟೀಕೆಗಳನ್ನು ಖಂಡಿಸಿಲ್ಲ ಎಂದಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಸಚಿವರು, ಸನಾತನ ವಿರೋಧ ಡಿಎಂಕೆಯಲ್ಲಿನ ನೀತಿ ಆಗಿದೆ. ನಾನು ಅದನ್ನು ಖುದ್ದಾಗಿ ನೋಡಿದ್ದೇನೆ ಎಂದು ಹೇಳಿದ್ದಾರೆ.

ತಮಿಳುನಾಡಿನ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾಷೆಯ ತಡೆಯಿಂದಾಗಿ ದೇಶದ ಉಳಿದವರಿಗೆ ಇದು ಅರ್ಥವಾಗಲಿಲ್ಲ. ಇದು ಯಾವಾಗಲೂ ಹಾಗೆ. ಈಗ ಸೋಷಿಯಲ್ ಮೀಡಿಯಾದಿಂದಾಗಿ ಮಂತ್ರಿಯೊಬ್ಬರು ಏನು ಹೇಳುತ್ತಿದ್ದಾರೆಂದು ತಿಳಿಯಲು ಅನುವಾದಕರೇ ಬೇಕಾಗಿಲ್ಲ. ಇದು ಆಶ್ಚರ್ಯವೇನಿಲ್ಲ. 70 ವರ್ಷಗಳಿಂದ ಡಿಎಂಕೆ ಇದನ್ನು ಮಾಡುತ್ತಿದೆ. ಇದು ಬೂಟಾಟಿಕೆ.

ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು “ಸಂವಿಧಾನದ ಅಪಹಾಸ್ಯ” ಎಂದು ಕರೆದ ಅವರು, ತಮಿಳುನಾಡು ಸಚಿವರು ಸಾರ್ವಜನಿಕ ಕಚೇರಿಯಲ್ಲಿ ತಮ್ಮ ಪ್ರಮಾಣವಚನವನ್ನು ಉಲ್ಲಂಘಿಸುತ್ತಾರೆ ಎಂದು ತಿಳಿದಿದ್ದರೂ ಅವರು ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಮಲೇರಿಯಾ, ಡೆಂಗ್ಯೂ ಮತ್ತು ಸೊಳ್ಳೆಗಳಂತೆ ಸನಾತನ (ಧರ್ಮ) ನಿರ್ಮೂಲನೆ ಮಾಡಬೇಕು. ಅದನ್ನು ವಿರೋಧಿಸಿದರಷ್ಟೇ ಸಾಲದು ಎಂಗ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಇದನ್ನು ತೀವ್ರವಾಗಿ ಖಂಡಿಸಿವೆ.

ಡಿಎಂಕೆ ನಾಯಕ ಎ ರಾಜಾ ಅವರು ‘ಸನಾತನ ಧರ್ಮ’ವನ್ನು ಸಾಮಾಜಿಕ ಪಿಡುಗು ಏಡ್ಸ್ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಗೆ ಹೋಲಿಸಬೇಕು ಎಂದಿದ್ದಾರೆ.

ಉದಯನಿಧಿ ಸ್ಟಾಲಿನ್ ಮತ್ತು ಎ ರಾಜಾ ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಹೇಳಿದ್ದು, ಪಕ್ಷಕ್ಕೆ “ಸರ್ವಧರ್ಮ ಸಮಭಾವ್” (ಎಲ್ಲಾ ಧರ್ಮಗಳಿಗೆ ಸಮಾನ ಗೌರವ) ನಲ್ಲಿ ನಂಬಿಕೆಯಿದೆ ಎಂದು ಪ್ರತಿಪಾದಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ನನ್ನ ಮಗ “ಸನಾತನ ಸಂಸ್ಥೆಯು ಬೋಧಿಸಿದ ಅಮಾನವೀಯ ತತ್ವಗಳ ಬಗ್ಗೆ ಮಾತನಾಡಿದ್ದಾರೆ. ಪರಿಶಿಷ್ಟ ಜಾತಿಗಳು, ಪಂಗಡಗಳು ಮತ್ತು ಮಹಿಳೆಯರ ವಿರುದ್ಧ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆಯೇ ಹೊರತು “ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಟೀಕಿಸುವ ಉದ್ದೇಶವನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿಸ್ಟಾಲಿನ್ ವಿರುದ್ಧ ಟೀಕೆ ಮಾಡಲಾಗದೆ ನಮ್ಮ ವಿರುದ್ಧ ಟೀಕೆ; ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ ವಾಗ್ದಾಳಿ

ದೆಹಲಿ ಘೋಷಣೆ ಬಗ್ಗೆ ಸಚಿವರು ಹೇಳಿದ್ದೇನು?

ಹಣಕಾಸು ವೇದಿಕೆಯಾಗಿರುವ G20, ಕ್ರಿಪ್ಟೋ ಸ್ವತ್ತುಗಳು, ಜಾಗತಿಕ ಸಾಲ ಮತ್ತು ಬ್ರೆಟನ್ ವುಡ್ಸ್ ಸಂಸ್ಥೆಗಳಲ್ಲಿ ಸುಧಾರಣೆಯ ಅಗತ್ಯತೆಯಂತಹ ವಿಷಯಗಳ ಮೇಲೆ ಸಾಮೂಹಿಕ ಕ್ರಮವನ್ನು ತೆಗೆದುಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತವು ಎಲ್ಲಾ ವಿಷಯಗಳ ಬಗ್ಗೆ ಒಮ್ಮತವನ್ನು ಹೊಂದುವಲ್ಲಿ ಯಶಸ್ವಿಯಾಗಿದೆ, ದೆಹಲಿ ಘೋಷಣೆಯೊಂದಿಗೆ ನಾನು ತೃಪ್ತಿ ಹೊಂದಿದ್ದೇನೆ ಎಂದು ಅವರು ಹೇಳಿದರು.

ಜಿ 20 ನಲ್ಲಿ ಹಣಕಾಸು ಮಾರ್ಗವು ಗಣನೀಯ ಕೊಡುಗೆಯನ್ನು ಹೊಂದಿದೆ. ಭಾರತದ ಅಧ್ಯಕ್ಷತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದ ಉತ್ತಮ ಚಿಂತನೆಯ ಶೈಲಿಯಲ್ಲಿ ಬಹುಪಕ್ಷೀಯ ಸಂಸ್ಥೆಗಳಿಗೆ ಸುಧಾರಣೆಯ ಅಗತ್ಯವಿದೆ. ಕ್ರಿಪ್ಟೋ ಸ್ವತ್ತುಗಳನ್ನು ನಿಯಂತ್ರಿಸುವಂತಹ ವಿಷಯಗಳಲ್ಲಿ, ದೇಶಗಳು “ಪ್ರತ್ಯೇಕ ಪ್ರಯತ್ನಗಳನ್ನು” ಮಾಡಿದರೆ ಅದು ಒಳ್ಳೆಯದಲ್ಲ ಎಂದು ಸಚಿವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Fri, 15 September 23

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್