AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ.1 ರಿಂದ ಡ್ರೈವಿಂಗ್ ಲೈಸೆನ್ಸ್, ಆಧಾರ್ ಸಂಖ್ಯೆ ಬದಲಾವಣೆ, ಸರ್ಕಾರಿ ಉದ್ಯೋಗ ಪಡೆಯಲು ಜನನ ಪ್ರಮಾಣಪತ್ರ ಒಂದೇ ದಾಖಲೆ

ಅಕ್ಟೋಬರ್ 1ರಿಂದ, ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ಪಡೆಯುವುದು, ಮತದಾರರ ಪಟ್ಟಿ ತಿದ್ದುಪಡಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ, ಸರ್ಕಾರಿ ಉದ್ಯೋಗ ನೇಮಕಾತಿ ಇತ್ಯಾದಿ ಸೇರಿದಂತೆ ಹಲವಾರು ನಿರ್ಣಾಯಕ ಸೇವೆಗಳನ್ನು ಪಡೆಯಲು ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿರುತ್ತದೆ.

ಅ.1 ರಿಂದ ಡ್ರೈವಿಂಗ್ ಲೈಸೆನ್ಸ್, ಆಧಾರ್ ಸಂಖ್ಯೆ ಬದಲಾವಣೆ, ಸರ್ಕಾರಿ ಉದ್ಯೋಗ ಪಡೆಯಲು ಜನನ ಪ್ರಮಾಣಪತ್ರ ಒಂದೇ ದಾಖಲೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Sep 15, 2023 | 2:01 PM

Share

ದೆಹಲಿ. ಸೆ.15: ಅಕ್ಟೋಬರ್ 1ರಿಂದ, ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ಪಡೆಯುವುದು, ಮತದಾರರ ಪಟ್ಟಿ ತಿದ್ದುಪಡಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ, ಸರ್ಕಾರಿ ಉದ್ಯೋಗ ನೇಮಕಾತಿ ಇತ್ಯಾದಿ ಸೇರಿದಂತೆ ಹಲವಾರು ನಿರ್ಣಾಯಕ ಸೇವೆಗಳನ್ನು ಪಡೆಯಲು ಜನನ ಪ್ರಮಾಣಪತ್ರವನ್ನು (birth certificate)ಒಂದೇ ದಾಖಲೆಯಾಗಿರುತ್ತದೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023ರ ಅನುಷ್ಠಾನವನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಇದು ಜನನ ಮತ್ತು ಮರಣಗಳ ಡೇಟಾಬೇಸ್ ರಚಿಸಲು ಸಹಾಯ ಮಾಡುತ್ತದೆ ಮತ್ತು ಸಾರ್ವಜನಿಕ ಸೇವೆಗಳು, ಸಾಮಾಜಿಕ ಪ್ರಯೋಜನಗಳು ಹಾಗೂ ಡಿಜಿಟಲ್ ನೋಂದಣಿಯ, ಪಾರದರ್ಶಕವಾದ ದಾಖಲೆಗಳನ್ನು ನೀಡುವ ಸಲುವಾಗಿ ಈ ಕ್ರಮವನ್ನು ತರಲಾಗಿದೆ.

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 (2023 ರ 20) ನ ಕ್ರಮ 1 ಮತ್ತು ಉಪ-ಕ್ರಮ (2) ರ ಆಧಾರದ ಮೇಲೆ, ಈ ಕಾಯಿದೆ ಅನುಷ್ಠಾನವನ್ನು ತರಲಾಗುವುದು. ಜತೆಗೆ ಈ ಪ್ರಕ್ರಿಯೆಗೆ ನೂತನ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದೆ. ಕೇಂದ್ರ ಸರ್ಕಾರವು ಅಕ್ಟೋಬರ್ 1ರಿಂದ ಈ ಕಾಯಿದೆ ಜಾರಿಗೆ ಬರಲಿದೆ ಎಂದು ಹೇಳಿದೆ.

ಇನ್ನು ಈ ಮಸೂದೆಯನ್ನು ಸಂಸತ್ತಿನ ಮಾನ್ಸೂನ್ ಅಧಿವೇಶನದ ಕೊನೆ ದಿನದಂದು ಎರಡೂ ಸದನಗಳು ಅಂಗೀಕರಿಸಿತ್ತು. ರಾಜ್ಯಸಭೆಯು ಆಗಸ್ಟ್ 7 ರಂದು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿದೆ ಮತ್ತು ಲೋಕಸಭೆಯು ಆಗಸ್ಟ್ 1 ರಂದು ಅಂಗೀಕರಿಸಿದೆ.

ಇದನ್ನೂ ಓದಿ:ಲೋಕಸಭೆಯಲ್ಲಿ ಜನನ ಪ್ರಮಾಣಪತ್ರವನ್ನು ಸರ್ವ ಉದ್ದೇಶಗಳಿಗೆ ಏಕೈಕ ದಾಖಲೆಯಾಗಿ ಬಳಸಲು ಅನುಮತಿಸುವ ಮಸೂದೆ ಮಂಡನೆ

ಈ ಕಾಯಿದೆಯ ಪ್ರಮುಖ ಅಂಶಗಳು:

1. ಈ ಕಾಯಿದೆಯು ಜನನ ಮತ್ತು ಮರಣಗಳ ರಾಷ್ಟ್ರೀಯ ನೋಂದಣಿಯನ್ನು ಮೇಲ್ವಿಚಾರಣೆ ಮಾಡಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ ಅಧಿಕಾರವನ್ನು ನೀಡುತ್ತದೆ. ರಾಜ್ಯದಿಂದ ನೇಮಕಗೊಂಡ ಮುಖ್ಯ ರಿಜಿಸ್ಟ್ರಾರ್‌ಗಳು ಮತ್ತು ರಿಜಿಸ್ಟ್ರಾರ್‌ಗಳು ಈ ರಾಷ್ಟ್ರೀಯ ಡೇಟಾಬೇಸ್‌ಗೆ ಡೇಟಾವನ್ನು ನೀಡುತ್ತಾರೆ. ಆದರೆ ಮುಖ್ಯ ರಿಜಿಸ್ಟ್ರಾರ್‌ಗಳು ರಾಜ್ಯ ಮಟ್ಟದ ಡೇಟಾಬೇಸ್‌ಗಳನ್ನು ನಿರ್ವಹಿಸುತ್ತಾರೆ.

2. ಈ ಹಿಂದೆ, ಕೆಲವು ವ್ಯಕ್ತಿಗಳು ಜನನ ಮತ್ತು ಮರಣಗಳನ್ನು ರಿಜಿಸ್ಟ್ರಾರ್‌ಗೆ ವರದಿ ಮಾಡುವ ಅವಶ್ಯಕತೆ ಇತ್ತು.

3. ಉದಾಹರಣೆಗೆ, ಮಗುವಿನ ಜನನದ ಆಸ್ಪತ್ರೆಯ ಉಸ್ತುವಾರಿ ವೈದ್ಯಕೀಯ ಅಧಿಕಾರಿಯು ಜನನವನ್ನು ವರದಿ ಮಾಡಬೇಕು. ಇದಲ್ಲದೆ, ಪೋಷಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆಯನ್ನು ಒದಗಿಸಬೇಕಾಗಿದೆ. ಜೈಲು, ಹೋಟೆಲ್ ಅಥವಾ ಲಾಡ್ಜ್‌ನಲ್ಲಿ ಹೆರಿಗೆಯಾದ ಪ್ರಕರಣಕ್ಕೂ ಈ ನಿಯಮ ಅನ್ವಯಿಸುತ್ತದೆ. ಇಲ್ಲಿ, ಜೈಲರ್ ಮತ್ತು ಹೋಟೆಲ್ ಮ್ಯಾನೇಜರ್ ಎಲ್ಲಾ ಸಂಬಂಧಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

4. ಹೊಸ ಕಾಯಿದೆಯ ಅಡಿಯಲ್ಲಿ, ಇದನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ. ದತ್ತು ಪಡೆದ ಪೋಷಕರು, ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗು ಮತ್ತು ಒಂಟಿ ಪೋಷಕರಿಗೆ ಅಥವಾ ಅವಿವಾಹಿತ ತಾಯಿ ಮಗುವಿನ ಜನನದ ಸಂದರ್ಭದಲ್ಲಿ ಯಾರು ಪೋಷಕರು ಇರುತ್ತಾರೆ ಅವರ ದಾಖಲೆಗಳನ್ನು ನೀಡಬಹುದು.

5.ಹೊಸ ಶಾಸನವು ಕೇಂದ್ರ ಸರ್ಕಾರದ ಅನುಮೋದನೆಗೆ ಒಳಪಟ್ಟು ಜನಸಂಖ್ಯೆಯ ನೋಂದಣಿಗಳು, ಮತದಾರರ ಪಟ್ಟಿಗಳು ಮತ್ತು ಇತರ ಅಧಿಕೃತ ಪ್ರಾಧಿಕಾರಗಳೊಂದಿಗೆ ರಾಷ್ಟ್ರೀಯ ಡೇಟಾಬೇಸ್​​ನ್ನು ಹಂಚಿಕೊಳ್ಳಲು ಅನುಮತಿ ನೀಡಲಾಗಿದೆ. ಜತೆಗೆ ರಾಜ್ಯದ ಡೇಟಾಬೇಸ್‌ಗಳನ್ನು ರಾಜ್ಯ-ಅನುಮೋದಿತ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು.

6.ಕಾಯಿದೆಯ ಪ್ರಕಾರ, ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್‌ರ ಸರಿಯಾಗಿ ಪ್ರಕ್ರಿಯೆ ಅಥವಾ ಮನವಿಯನ್ನು ಸ್ವೀಕರಿಸದಿದ್ದರೆ, ಜಿಲ್ಲಾ ರಿಜಿಸ್ಟ್ರಾರ್ ಅಥವಾ ಮುಖ್ಯ ರಿಜಿಸ್ಟ್ರಾರ್‌ಗೆ ಮೇಲ್ಮನವಿ ಸಲ್ಲಿಸಬಹುದು. ಈ ಮನವಿಯನ್ನು 30 ದಿನಗಳಲ್ಲಿ ಮಾಡಬೇಕು. ಜಿಲ್ಲಾ ನೋಂದಣಾಧಿಕಾರಿ ಅಥವಾ ಮುಖ್ಯ ನೋಂದಣಾಧಿಕಾರಿಗಳು ಮೇಲ್ಮನವಿ ಸಲ್ಲಿಸಿದ ದಿನಾಂಕದಿಂದ 90 ದಿನಗಳ ಒಳಗಾಗಿ ಇದಕ್ಕೆ ಪ್ರಕ್ರಿಯೆ ನೀಡಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!