Parliament Monsoon Session: ಲೋಕಸಭೆಯಲ್ಲಿ ಜನನ ಪ್ರಮಾಣಪತ್ರವನ್ನು ಸರ್ವ ಉದ್ದೇಶಗಳಿಗೆ ಏಕೈಕ ದಾಖಲೆಯಾಗಿ ಬಳಸಲು ಅನುಮತಿಸುವ ಮಸೂದೆ ಮಂಡನೆ
ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 ಅಸ್ತಿತ್ವಕ್ಕೆ ಬಂದ 54 ವರ್ಷಗಳ ಬಳಿಕ ಮೊದಲ ಬಾರಿಗೆ ತಿದ್ದುಪಡಿಯಾಗುವ ಸಾಧ್ಯತೆಯಿದೆ.
ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 ಅಸ್ತಿತ್ವಕ್ಕೆ ಬಂದ 54 ವರ್ಷಗಳ ಬಳಿಕ ಮೊದಲ ಬಾರಿಗೆ ತಿದ್ದುಪಡಿಯಾಗುವ ಸಾಧ್ಯತೆಯಿದೆ. ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಡೇಟಾಬೇಸ್ ನಿರ್ವಹಣೆಗಾಗಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದ ಉದ್ದೇಶಕ್ಕಾಗಿ ಜನರರ ಪ್ರಮಾಣಪತ್ರವನ್ನು ಏಕೈಕ ದಾಖಲೆಯಾಗಿ ಬಳಸಲು ಅನುವು ಮಾಡುವ ಮಸೂದೆಯನ್ನು ಸರ್ಕಾರ ಬುಧವಾರ ಲೋಕಸಭೆಯಲ್ಲಿ ಮಂಡಿಸಿದೆ.
ವಾಸ್ತವವಾಗಿ, ಕೇಂದ್ರ ಸರ್ಕಾರವು ಬುಧವಾರ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದು, ಶಾಲಾ-ಕಾಲೇಜುಗಳಲ್ಲಿ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ವಿತರಣೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿಗಾಗಿ ಜನನ ಪ್ರಮಾಣಪತ್ರವನ್ನು ಏಕೈಕ ದಾಖಲೆಯಾಗಿ ಬಳಸಲು ಅನುಮತಿಸುತ್ತದೆ.
ಜನಸಂಖ್ಯಾ ನೋಂದಣಿ, ಮತದಾರರ ಪಟ್ಟಿ, ಆಧಾರ್ ಸಂಖ್ಯೆ, ಪಡಿತರ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಸ್ತಿ ನೋಂದಣಿ ಮತ್ತು ಕೇಂದ್ರ ಸರ್ಕಾರವು ಸೂಚಿಸಿದ ಇತರ ಡೇಟಾಬೇಸ್‌ಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಮಾತ್ರ ಜನನ ಮತ್ತು ಮರಣದ ಡೇಟಾಬೇಸ್ ಲಭ್ಯವಾಗಲಿದೆ.
ಮತ್ತಷ್ಟು ಓದಿ: 2023ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಸಿಗಲಿ: 5 ವರ್ಷಗಳ ಹಿಂದೆ ಮೋದಿ ಹೇಳಿದ್ದ ವಿಡಿಯೊ ವೈರಲ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಪರವಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಈ ಮಸೂದೆಯನ್ನು ಮಂಡಿಸಿದರು. ಈಗ ನೀವು ಜನ್ಮ ಪ್ರಮಾಣಪತ್ರವನ್ನು ಪಡೆದರೆ, ನಿಮ್ಮ ಎಲ್ಲಾ ಪ್ರಮುಖ ಸರ್ಕಾರಿ ಕೆಲಸಗಳು ಕ್ಷಣಾರ್ಧದಲ್ಲಿ ಮಾಡಲಾಗುತ್ತದೆ. ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಈ ಮಸೂದೆಯನ್ನು ವಿರೋಧಿಸಿದರು, ಈ ಕ್ರಮವು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ