AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2023ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಸಿಗಲಿ: 5 ವರ್ಷಗಳ ಹಿಂದೆ ಮೋದಿ ಹೇಳಿದ್ದ ವಿಡಿಯೊ ವೈರಲ್

2018ರಲ್ಲಿ ಎನ್‌ಡಿಎ ಭರ್ಜರಿ ಬಹುಮತದೊಂದಿಗೆ ವಿಶ್ವಾಸಮತ ಗೆದ್ದ ನಂತರ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದರು.  2018 ರಲ್ಲಿ, ತೆಲುಗು ದೇಶಂ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಇದಕ್ಕೆ ವಿರೋಧ ಪಕ್ಷದಲ್ಲಿ ಹಲವು ಪಕ್ಷಗಳು ಬೆಂಬಲಿಸಿದ್ದವು.

2023ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಸಿಗಲಿ: 5 ವರ್ಷಗಳ ಹಿಂದೆ ಮೋದಿ ಹೇಳಿದ್ದ ವಿಡಿಯೊ ವೈರಲ್
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
| Updated By: ಡಾ. ಭಾಸ್ಕರ ಹೆಗಡೆ

Updated on:Jul 26, 2023 | 2:26 PM

ದೆಹಲಿ ಜುಲೈ 26: ಲೋಕಸಭೆಯಲ್ಲಿ ಇಂದು (ಬುಧವಾರ) ಕಾಂಗ್ರೆಸ್ (Congress) ಮತ್ತು ಭಾರತ್ ರಾಷ್ಟ್ರ ಸಮಿತಿ (Bharat Rashtra Samithi)ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ (No-confidence motion) ಮಂಡಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ಐದು ವರ್ಷಗಳ ಹಿಂದಿನ ವಿಡಿಯೊ ವೈರಲ್ ಆಗಿದೆ. ಐದು ವರ್ಷದ ಹಿಂದೆ ಅಂದರೆ, 2018 ರಲ್ಲಿ, ಲೋಕ ಸಭೆಯಲ್ಲಿ ಮಾತನಾಡುತ್ತ, ಮೋದಿ ಅವರು, 2023ರಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧರಾಗಿ ಎಂದು ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಮೋದಿ ಹೀಗೆ ಹೇಳುವಾಗ ಲೋಕಸಭೆಯ ಸದಸ್ಯರು ಜೋರಾಗಿ ನಗುತ್ತಿದ್ದಾರೆ.

2014ರಲ್ಲಿ ಎನ್‌ಡಿಎ ಭರ್ಜರಿ ಬಹುಮತದೊಂದಿಗೆ ವಿಶ್ವಾಸಮತ ಗೆದ್ದ ನಂತರ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದರು.  2018 ರಲ್ಲಿ, ತೆಲುಗು ದೇಶಂ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಇದಕ್ಕೆ ವಿರೋಧ ಪಕ್ಷದಲ್ಲಿ ಹಲವು ಪಕ್ಷಗಳು ಬೆಂಬಲಿಸಿದ್ದವು. ಆಗ ಲೋಕಸಭಾ ಸ್ಪೀಕರ್ ಆಗಿದ್ದ ಸುಮಿತ್ರಾ ಮಹಾಜನ್ ಅವರು ವಿಶ್ವಾಸ ಮತಕ್ಕೆ ಅವಕಾಶ ನೀಡಿದ್ದು ಇದರಲ್ಲಿ ಎನ್ ಡಿಎ 314 ಮತಗಳನ್ನು ಪಡೆದಿತ್ತು. ಈ ಹೊತ್ತಲ್ಲಿ ಮೋದಿಯವರು, 2023 ರಲ್ಲಿ ನೀವು ಮತ್ತೆ ಅವಿಶ್ವಾಸ ನಿರ್ಣಯವನ್ನು ತರಲು ನಿಮಗೆ ಅವಕಾಶ ಸಿಗುವಂತೆ ನೀವು ಚೆನ್ನಾಗಿ ತಯಾರಿ ನಡೆಸಬೇಕು ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ಸದಸ್ಯರು ಅವರ ಭಾಷಣಕ್ಕೆ ಅಡ್ಡಿಪಡಿಸಿದಾಗ, ಪ್ರಧಾನಿ ಮೋದಿ, “ಯೇ ಸಮರ್ಪಣ್ ಭಾವ್ ಹೈ. ನೀವು ಹೆಮ್ಮೆ ಪಡುವ ಫಲಿತಾಂಶವು 400 ರಿಂದ 40 ಆಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರ ವಿಚಾರ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

ಮಣಿಪುರದ ಆಕ್ರೋಶದ ನಡುವೆಯೇ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ

ವಿರೋಧ ಪಕ್ಷದ ಒಕ್ಕೂಟ ಇಂಡಿಯಾ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಲು ನಿರ್ಧರಿಸಿದೆ.ಇದರಿಂದಾಗಿ ಮಣಿಪುರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಪ್ರಧಾನಿ ಮೋದಿಯನ್ನು ಒತ್ತಾಯಿಸಲಾಗುತ್ತದೆ. ಎನ್ ಡಿಎ ಬಹುಮತವನ್ನು ಹೊಂದಿರುವುದರಿಂದ ಅವಿಶ್ವಾಸ ನಿರ್ಣಯವು ವಿಫಲಗೊಳ್ಳುತ್ತದೆ. ಆದಾಗ್ಯೂ ಇಂಡಿಯಾದ ಈ ಅವಿಶ್ವಾಸ ನಿರ್ಣಯವು ಪ್ರತಿಪಕ್ಷಗಳ ಮೊದಲ ಪ್ರಮುಖ ಹೆಜ್ಜೆಯಾಗಿದೆ. ಏತನ್ಮಧ್ಯೆ ಮಣಿಪುರದಲ್ಲಿ ಚರ್ಚೆಗೆ ಸಿದ್ಧ. ಆದರೆ ಪ್ರತಿಪಕ್ಷಗಳು ಚರ್ಚೆಯಿಂದ ಓಡಿಹೋಗುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Wed, 26 July 23