ITPO complex inaugurated: ದೆಹಲಿ ಪ್ರಗತಿ ಮೈದಾನದಲ್ಲಿ ಅತ್ಯಾಧುನಿಕ ಐಟಿಪಿಒ ಕಾಂಪ್ಲೆಕ್ಸ್ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

PM Narendra Modi: ಸೆಪ್ಟೆಂಬರ್‌ನಲ್ಲಿ ಜಿ 20 ನಾಯಕರ ಸಭೆಯನ್ನು ಆಯೋಜಿಸುವ ಜವಾಬ್ದಾರಿ ಭಾರತದ ಹೆಗಲಿಗೆ ಬಂದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮರುಅಭಿವೃದ್ಧಿಪಡಿಸಿದ ಐಟಿಪಿಒ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಬೆಳಗ್ಗೆ ಉದ್ಘಾಟಿಸಿ, ಹೋಮ ಹವನವನ್ನು ನೆರವೇರಿಸಿದರು.

ITPO complex inaugurated: ದೆಹಲಿ ಪ್ರಗತಿ ಮೈದಾನದಲ್ಲಿ ಅತ್ಯಾಧುನಿಕ ಐಟಿಪಿಒ ಕಾಂಪ್ಲೆಕ್ಸ್ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
ಅತ್ಯಾಧುನಿಕ ಐಟಿಪಿಒ ಕಾಂಪ್ಲೆಕ್ಸ್ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
Follow us
ಸಾಧು ಶ್ರೀನಾಥ್​
|

Updated on: Jul 26, 2023 | 11:39 AM

ದೆಹಲಿ, ಜುಲೈ 26: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ನಾಯಕರ ಸಭೆಗೆ ಆತಿಥ್ಯ ವಹಿಸಲಿರುವ ಭಾರತವು ದೆಹಲಿಯಲ್ಲಿ ಮರುಅಭಿವೃದ್ಧಿಗೊಂಡ ಭಾರತ ವ್ಯಾಪಾರ ಉತ್ತೇಜನಾ ಸಂಸ್ಥೆ (ಐಟಿಪಿಒ) ಸಂಕೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟನಾ ಪೂಜೆ ನೆರವೇರಿಸಿದರು. ಇದನ್ನು ಪ್ರಗತಿ ಮೈದಾನ ಕಾಂಪ್ಲೆಕ್ಸ್ ಎಂದೂ ಕರೆಯುತ್ತಾರೆ. ITPO ಸಂಕೀರ್ಣವು ಸುಮಾರು 123 ಎಕರೆ ಪ್ರದೇಶದಲ್ಲಿ ಕ್ಯಾಂಪಸ್ ಪ್ರದೇಶದಲ್ಲಿ ಹರಡಿದೆ. ಇದು ಭಾರತದ ಅತಿದೊಡ್ಡ MICE (ಸಭೆಗಳು, ಉತ್ತೇಜನಗಳು, ಸಮಾವೇಶಗಳು ಮತ್ತು ಪ್ರದರ್ಶನಗಳು) ತಾಣವಾಗಿದೆ.

ಇದೇ ವೇಳೆ ಪ್ರಧಾನಿ ಮೋದಿ ಈ ಮೈದಾನದಲ್ಲಿನ ಸಂಕೀರ್ಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 2700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗಲಿದೆ. ಸಂಸ್ಕೃತಿ ಮತ್ತು ಕಲೆಯನ್ನು ಪ್ರದರ್ಶಿಸಲು ಸಮಾವೇಶ ಕೇಂದ್ರವನ್ನು ನಿರ್ಮಿಸಲಾಗುತ್ತದೆ.

Also Read: ವಿಶ್ವ ನಾಯಕತ್ವದ ಜವಾಬ್ದಾರಿ ಕನಸು ನನಸು! ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ITPO ಸಂಕೀರ್ಣ ಉದ್ಘಾಟನೆ

ಪ್ರದರ್ಶನ ಸಭಾಂಗಣ ಸೇರಿದಂತೆ ಆಂಫಿಥಿಯೇಟರ್ ಮತ್ತು ಇತರ ಹಲವು ಸೌಲಭ್ಯಗಳನ್ನು ಇದರಲ್ಲಿ ಸ್ಥಾಪಿಸಲಾಗುವುದು. ಅಂತರರಾಷ್ಟ್ರೀಯ ಸಮ್ಮೇಳನಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು IECC ಅನ್ನು ನಿರ್ಮಿಸಲಾಗುತ್ತಿದೆ.

ಬೆಳಗ್ಗೆ 10 ಗಂಟೆಗೆ ಹವನ ಪೂಜೆಯೊಂದಿಗೆ ಪ್ರಧಾನಿ ಮೋದಿ ಸಮಾರಂಭವನ್ನು ಉದ್ಘಾಟಿಸಿದರು. ನಂತರ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಂಜೆ 6:30ಕ್ಕೆ 620 ಅಂಚೆಚೀಟಿಗಳು ಮತ್ತು ನಾಣ್ಯಗಳನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ಸಂಜೆ 7.05ಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.