ವಿಶ್ವ ನಾಯಕತ್ವದ ಜವಾಬ್ದಾರಿ ಕನಸು ನನಸು! ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ITPO ಸಂಕೀರ್ಣ ಉದ್ಘಾಟನೆ

PM Narendra Modi : ದೆಹಲಿಯ ಪ್ರಗತಿ ಮೈದಾನದ ಪುನರಾಭಿವೃದ್ಧಿಗೊಂಡ ITPO ಸಂಕೀರ್ಣವನ್ನು ಪ್ರಧಾನಿ ಮೋದಿ ನಾಳೆ ಬುಧವಾರ ಲೋಕಾರ್ಪಣೆ ಮಾಡಲಿದ್ದಾರೆ. ಇದು ಭಾರತದ ಅತಿದೊಡ್ಡ ಸಭಾಂಗಣ ಎನಿಸಿಕೊಳ್ಳಲಿದೆ

ವಿಶ್ವ ನಾಯಕತ್ವದ ಜವಾಬ್ದಾರಿ ಕನಸು ನನಸು! ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ITPO ಸಂಕೀರ್ಣ ಉದ್ಘಾಟನೆ
| Updated By: ಸಾಧು ಶ್ರೀನಾಥ್​

Updated on:Jul 25, 2023 | 10:39 AM

ವಿಶ್ವದ ನಾಯಕತ್ವ ವಹಿಸುವ ಮಹತ್ವದ ಜವಾಬ್ದಾರಿಯನ್ನು ಈ ಬಾರಿ ಭಾರತ ನಿಭಾಯಿಸುತ್ತಿದೆ. ಸೆಪ್ಟಂಬರ್ ನಲ್ಲಿ ನಡೆಯಲಿರುವ G20 ಸಮಾವೇಶದ ನೇತೃತ್ವವನ್ನು ಭಾರತ ವಹಿಸಿಕೊಂಡಿದೆ.‌ ಸೆಪ್ಟಂಬರ್ ನಲ್ಲಿ ಮಹಾ ಅಧಿವೇಶನಕ್ಕೆ ನವದೆಹಲಿಯ ಪ್ರಗತಿ ಮೈದಾನ ಅದ್ಧೂರಿಯಾಗಿ ಸಿದ್ಧಗೊಳ್ಳುತ್ತಿದೆ. ನವದೆಹಲಿಯ ಪ್ರಗತಿ ಮೈದಾನದ ಪುನರಾಭಿವೃದ್ಧಿಗೊಂಡ ITPO ಸಂಕೀರ್ಣವನ್ನು (Redeveloped ITPO Complex For G20 Leaders Meet) ಪ್ರಧಾನಿ ನರೇಂದ್ರ ಮೋದಿ (PM Narendra Modi ) ನಾಳೆ ಬುಧವಾರ (July 26) ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಲೋಕಾರ್ಪಣೆ ಮಾಡುತ್ತಿರುವ ಪ್ರಗತಿ ಮೈದಾನದ ಸಭಾಂಗಣ ಭಾರತದ ಅತಿದೊಡ್ಡ ಸಭಾಂಗಣ ಎನಿಸಿಕೊಳ್ಳಲಿದ್ದು, ವಿಶ್ವದರ್ಜೆಯ ತಂತ್ರಜ್ಞಾನ ಹೊಂದಿದೆ. ಜರ್ಮನಿಯ ಹ್ಯಾನೋವರ್ ಎಕ್ಸಿಬಿಷನ್ ಸೆಂಟರ್, ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ ನಂತಹ ಬೃಹತ್ ಸಂಕೀರ್ಣಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮೂಲಸೌಕರ್ಯವು ವಿಶ್ವ ದರ್ಜೆಯ ಕಾರ್ಯಕ್ರಮಗಳನ್ನು ನಿರೂಪಿಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ವಿಶ್ವದರ್ಜೆಯ ಬೃಹತ್ ಸಭಾಂಗಣದ ವಿಶೇಷತೆ ಏನೂ ಅಂತ ನೋಡೋದಾದ್ರೆ..

ಬೃಹತ್ ಸಭಾಂಗಣದ ವಿಶೇಷತೆ: ಸಮಾವೇಶ ಕೇಂದ್ರದ 3 ನೇ ಹಂತದಲ್ಲಿ, 7,000 ಭವ್ಯವಾದ ಆಸನ ಸಾಮರ್ಥ್ಯ ಹೊಂದಿದೆ. ಆಸ್ಟ್ರೇಲಿಯಾದ ಐಕಾನಿಕ್ ಸಿಡ್ನಿ ಒಪೇರಾ ಹೌಸ್‌ನ ಸಾಮರ್ಥ್ಯಕ್ಕಿಂತ ಹೆಚ್ಚು ಆಸನ ವ್ಯವಸ್ಥೆ ಇದ್ದು, ಜಾಗತಿಕ ಮಟ್ಟದಲ್ಲಿ ಮೆಗಾ ಸಮ್ಮೇಳನಗಳು, ಅಂತಾರಾಷ್ಟ್ರೀಯ ಶೃಂಗಸಭೆಗಳನ್ನು ಆಯೋಜಿಸುವ ಮಟ್ಟಿನ ಕ್ವಾಲಿಟಿ ಇದೆ. ಅಸಾಧಾರಣ ವೈಶಿಷ್ಟ್ಯಗಳ 3,000 ಜನರ ಆಸನ ಸಾಮರ್ಥ್ಯದೊಂದಿಗೆ ಆಂಫಿಥಿಯೇಟರ್, ಮೂರು PVR ಥಿಯೇಟರ್‌ಗಳಿಗೆ ಸಮಾನವಾದ ಈ ಗ್ರ್ಯಾಂಡ್ ಆಂಫಿಥಿಯೇಟರ್ ನ್ನ ಒಳಗೊಂಡಿದೆ. 5,500 ಕ್ಕೂ ಹೆಚ್ಚು ವಾಹನ ನಿಲುಗಡೆಗೆ ಸ್ಥಳ ಇದ್ದು, ಸಿಗ್ನಲ್-ಮುಕ್ತ ರಸ್ತೆಗಳ ಮೂಲಕ ಸುಲಭವಾಗಿ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. G20 ನಾಯಕರನ್ನ ಬರಮಾಡಿಕೊಳ್ಳಲು ಭಾರತದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ವಿಶ್ವದರ್ಜೆಯ ಆಡಿಟೋರಿಯಂ ಕಣ್ಮನ ಸೆಳೆಯುತ್ತಿದೆ.

Published On - 10:37 am, Tue, 25 July 23

Follow us