‘ಸ್ತ್ರೀ ಶಿಲ್ಪ ಕೊಟ್ಟು ನಮ್ಮಲ್ಲಿ ಆಸೆ ಹುಟ್ಟಿಸಬೇಡಿ’: ಕೇರಳ ರಾಜ್ಯ ಪ್ರಶಸ್ತಿ ವಿಜೇತ ನಟ ಅಲೆನ್ಸಿಯರ್ ಹೇಳಿಕೆಗೆ ಆಕ್ರೋಶ

Malayalam actor Alencier Ley Lopez: ಪ್ರಶಸ್ತಿ ಸ್ವೀಕರಿಸಿ ಮನೆಗೆ ಹೋಗಲು ಅಣಿಯಾಗಿದ್ದೆ. ಪ್ರಶಸ್ತಿ ಭಾರವಿತ್ತು. ಮುಖ್ಯಮಂತ್ರಿ ಇದ್ದಿದ್ದರೆ ಹೇಳಬಹುದಿತ್ತು. ಸಾಂಸ್ಕೃತಿಕ ಸಚಿವರು ಇರುವ ಕಾರಣ ಹೇಳುತ್ತೇನೆ. ನಮಗೆ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ನೀಡಲಾಗಿದೆ. ಎಲ್ಲರಿಗೂ ಶ್ರೇಷ್ಠ ನಟ ಪ್ರಶಸ್ತಿ ಸಿಗುತ್ತದೆ. ವಿಶೇಷ ಪ್ರಶಸ್ತಿ ಪಡೆದವರಿಗೆ ಇದಕ್ಕೆ ಚಿನ್ನದ ಲೇಪನವನ್ನಾದರೂ ನೀಡಿ ಕೊಡಬೇಕು. 25000 ರೂಪಾಯಿ ಕೊಟ್ಟು ನನಗೆ ಮತ್ತು ಕುಂಜಾಕೋ ಬೋಬನ್‌ಗೆ ಅವಮಾನ ಮಾಡಬೇಡಿ

‘ಸ್ತ್ರೀ ಶಿಲ್ಪ ಕೊಟ್ಟು ನಮ್ಮಲ್ಲಿ ಆಸೆ ಹುಟ್ಟಿಸಬೇಡಿ’: ಕೇರಳ ರಾಜ್ಯ ಪ್ರಶಸ್ತಿ ವಿಜೇತ ನಟ ಅಲೆನ್ಸಿಯರ್ ಹೇಳಿಕೆಗೆ ಆಕ್ರೋಶ
ಅಲೆನ್ಸಿಯರ್ ಲೇ ಲೋಪೆಜ್
Follow us
ರಶ್ಮಿ ಕಲ್ಲಕಟ್ಟ
|

Updated on: Sep 15, 2023 | 1:55 PM

ತಿರುವನಂತಪುರಂ ಸೆಪ್ಟೆಂಬರ್ 15ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ (Kerala State Film Award) ಪ್ರದಾನ ಸಂದರ್ಭದಲ್ಲಿ ಮಲಯಾಳಂ ನಟ ಅಲೆನ್ಸಿಯರ್ ಲೇ ಲೋಪೆಜ್ (Alencier Ley Lopez) ಮಹಿಳಾ ವಿರೋಧಿ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಚಿತ್ರ ನಿರ್ಮಾಪಕರ ಒಂದು ವಿಭಾಗವೂ ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಗುರುವಾರ ರಾತ್ರಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಅಪ್ಪನ್’ (Appan) ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ  ನಟ ಅಲೆನ್ಸಿಯರ್, “ಈ ಸ್ತ್ರೀ ಶಿಲ್ಪದೊಂದಿಗೆ (ನಮ್ಮನ್ನು) ಪ್ರಚೋದಿಸಬೇಡಿ. ನಮಗೆ ‘ಪುರುಷ ಶಕ್ತಿ’ಯನ್ನು ಪ್ರತಿನಿಧಿಸುವ ಶಿಲ್ಪವನ್ನು ನೀಡಬೇಕು. ಗಟ್ಟಿಗರಾಗಿರುವ ಮುಖ್ಯಮಂತ್ರಿ ಇರುವ ಸ್ಥಳದಲ್ಲಿ ಪುರುಷ ಶಿಲ್ಪ ಮಾತ್ರ ಸೂಕ್ತವಾಗಿರುತ್ತದೆ. ಪುರುಷ ಶಿಲ್ಪವನ್ನು ಸ್ವೀಕರಿಸುವ ದಿನ ನಾನು ನನ್ನ ನಟನೆಯನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ನಟ ಈ ರೀತಿ ಹೇಳಿದ್ದಾರೆ. ಅಲೆನ್ಸಿಯರ್ ಭಾಷಣ ಆರಂಭಿಸುವ ಮುನ್ನವೇ ಸಿಎಂ ಪಿಣರಾಯಿ ವೇದಿಕೆಯಿಂದ ನಿರ್ಗಮಿಸಿದ್ದರು. ‘ವಿಶೇಷ ತೀರ್ಪುಗಾರರ’ ಪ್ರಶಸ್ತಿ ಮತ್ತು 25,000 ರೂಪಾಯಿ ಬಹುಮಾನದ ವಿರುದ್ಧವೂ ಅಲೆನ್ಸಿಯರ್ ವ್ಯಂಗ್ಯವಾಡಿದ್ದಾರೆ.

ಸಮಾರಂಭದಲ್ಲಿ ಅಲೆನ್ಸಿಯರ್ ಮಾತು

‘ಪ್ರಶಸ್ತಿ ಸ್ವೀಕರಿಸಿ ಮನೆಗೆ ಹೋಗಲು ಅಣಿಯಾಗಿದ್ದೆ. ಪ್ರಶಸ್ತಿ ಭಾರವಿತ್ತು. ಮುಖ್ಯಮಂತ್ರಿ ಇದ್ದಿದ್ದರೆ ಹೇಳಬಹುದಿತ್ತು. ಸಾಂಸ್ಕೃತಿಕ ಸಚಿವರು ಇರುವ ಕಾರಣ ಹೇಳುತ್ತೇನೆ. ನಮಗೆ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ನೀಡಲಾಗಿದೆ. ಎಲ್ಲರಿಗೂ ಶ್ರೇಷ್ಠ ನಟ ಪ್ರಶಸ್ತಿ ಸಿಗುತ್ತದೆ. ವಿಶೇಷ ಪ್ರಶಸ್ತಿ ಪಡೆದವರಿಗೆ ಇದಕ್ಕೆ ಚಿನ್ನದ ಲೇಪನವನ್ನಾದರೂ ನೀಡಿ ಕೊಡಬೇಕು. 25000 ರೂಪಾಯಿ ಕೊಟ್ಟು ನನಗೆ ಮತ್ತು ಕುಂಜಾಕೋ ಬೋಬನ್‌ಗೆ ಅವಮಾನ ಮಾಡಬೇಡಿ. ನಮಗೆ ಪ್ರಶಸ್ತಿ ಮೊತ್ತ ಹೆಚ್ಚಳ ಮಾಡಬೇಕು. ಗೌತಮ್ ಘೋಷ್ ಅವರಲ್ಲಿ ವಿನಂತಿ, ವಿಶೇಷ ತೀರ್ಪುಗಾರ ಪ್ರಶಸ್ತಿ ನೀಡಿ ನಮ್ಮನ್ನು ಅವಮಾನಿಸಬೇಡಿ. ಎಲ್ಲರಿಗೂ ಒಳ್ಳೆಯ ಪ್ರಶಸ್ತಿಗಳು ಸಲ್ಲಬೇಕು, ವಿಶೇಷ ತೀರ್ಪುಗಾರ ಪ್ರಶಸ್ತಿಗೆ ಚಿನ್ನ ಲೇಪಿತ ಪ್ರಶಸ್ತಿ ನೀಡಬೇಕು.

ಈ ಸ್ತ್ರೀ ವಿಗ್ರಹ ಕೊಟ್ಟು ನಮ್ಮನ್ನು ಪ್ರಚೋದಿಸಬೇಡಿ. ಇನ್ನು ಮುಂದೆಯಾದರೂ ಗಟ್ಟಿಗ ಮುಖ್ಯಮಂತ್ರಿ ಇರುವಲ್ಲಿ ಮಹಿಳಾ ಪ್ರತಿಮೆ ನೀಡಿ ಅವಮಾನ ಮಾಡಬೇಡಿ. ಯಾವಾಗ ನಾನು ಪುರುಷ ಪ್ರತಿಮೆ ಸ್ವೀಕರಿಸುತ್ತೇನೋ ಅಂದು ನಾನು ನಟನೆಯನ್ನು ನಿಲ್ಲಿಸುತ್ತೇನೆ ಎಂದು ಅಲೆನ್ಸಿಯರ್ ಹೇಳಿದ್ದಾರೆ.

ಇದನ್ನೂ ಓದಿ:  ‘ಜವಾನ್’ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿನೂ ಪಡೆದಿಲ್ಲ ದೀಪಿಕಾ ಪಡುಕೋಣೆ; ಕಾರಣವೇನು?

ಮಹಿಳೆ/ಟ್ರಾನ್ಸ್‌ಜೆಂಡರ್‌ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕಿ ಶ್ರುತಿ ಶರಣ್ಯಮ್‌, ಅಲೆನ್ಸಿಯರ್‌ ಹೇಳಿಕೆ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಅಲೆನ್ಸಿಯರ್ ಹೇಳಿಕೆಗೆ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದ ಅವರು, ಪ್ರಶಸ್ತಿಯ ಮೂಲಕ ಪಿತೃಪ್ರಭುತ್ವದ ವಿರುದ್ಧ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದ ಕೆಲವೇ ನಿಮಿಷಗಳಲ್ಲಿ ನಟ ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. “ನನ್ನ ಕೈಯಲ್ಲಿರುವ ‘ಮಹಿಳೆ’ ವಿಶೇಷವಾದುದು ಎಂದು ಪ್ರಶಸ್ತಿ ಹಿಡಿದಿರುವ ಚಿತ್ರದೊಂದಿಗೆ ಶ್ರುತಿ ಈ ರೀತಿ ಬರೆದಿದ್ದಾರೆ.

ನಟ ಸಂತೋಷ್ ಕೀಝತ್ತೂರು ಮತ್ತು ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಕೂಡಾ ನಟನ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅಲೆನ್ಸಿಯರ್ ಪ್ರಶಸ್ತಿಯನ್ನು ಹಿಂದಿರುಗಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಅಲೆನ್ಸಿಯರ್ ವಿರುದ್ಧ ಅವರ ಮಹಿಳಾ ಸಹೋದ್ಯೋಗಿಯೊಬ್ಬರು MeToo ಆರೋಪವನ್ನು ಎತ್ತಿದ್ದರು. ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಂತರ ಅವರು ದೂರನ್ನು ಮುಂದುವರಿಸಲಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ