AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ-ಕೇರಳ ಗಡಿಭಾಗದಲ್ಲಿ ನಿಫಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹೆಚ್ ಡಿ ಕೋಟೆ ತಹಸೀಲ್ದಾರ್ ಮತ್ತು ವೈದ್ಯಾಧಿಕಾರಿ

ಕರ್ನಾಟಕ-ಕೇರಳ ಗಡಿಭಾಗದಲ್ಲಿ ನಿಫಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹೆಚ್ ಡಿ ಕೋಟೆ ತಹಸೀಲ್ದಾರ್ ಮತ್ತು ವೈದ್ಯಾಧಿಕಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 15, 2023 | 11:35 AM

Share

ತಹಸೀಲ್ದಾರ್ ಸಣ್ಣ ರಾಮಪ್ಪ ಮತ್ತು ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್ ಗಡಿಭಾಗಕ್ಕೆ ತೆರಳಿ ಹತ್ತಿರದ ಗ್ರಾಮಗಳ ಜನರಿಗೆ ಮತ್ತು ಕೇರಳದಿಂದ ಕರ್ನಾಟಕ ಪ್ರವೇಶಿಸುವ ಜನರಿಗೆ ನಿಫಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸೋಂಕಿಗೊಳಗಾಳಗಾಗದಿಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಆಕಸ್ಮಾತ್ ಸೋಂಕಿಗೊಳಗಾದಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಅವರು ವಿವರಿಸುತ್ತಿದ್ದಾರೆ.

ಮೈಸೂರು: ವೈರಸ್ ಗಳ ಮೂಲಕ ಉಂಟಾಗುವ ಸೋಂಕಿನ ಪ್ರಕರಣಗಳು ಕೇರಳದಲ್ಲಿ ಮೊದಲು ಕಾಣಿಸಿಕೊಳ್ಳುತ್ತವೆ. ಈಗ, ಬಾವಲಿಗಳ ಮೂಲಕ ಹಬ್ಬುವ ಅಪಾಯಕಾರಿ ನಿಫಾ ವೈರಸ್ ಸೋಂಕಿನ ಪ್ರಕರಣಗಳು ಆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಹಾಗಾಗೇ, ಕೇರಳ-ಕರ್ನಾಟಕ ಗಡಿಭಾಗದಲ್ಲಿ ಕಟ್ಟೆಚ್ಚರವಹಿಸಲಾಗಿದೆ ಮತ್ತು ನೆರೆ ರಾಜ್ಯದಿಂದ ವಾಹನಗಳಲ್ಲಿ ಬರುವ ಜನರ ಆರೋಗ್ಯದ ತಪಾಸಣೆ ನಡೆಸಲಾಗುತ್ತಿದೆ. ಗಮನಾರ್ಹ ಸಂಗತಿಯೆಂದರೆ, ಹೆಚ್ ಡಿ ಕೋಟೆಯ ತಹಸೀಲ್ದಾರ್ ಸಣ್ಣ ರಾಮಪ್ಪ ಮತ್ತು ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್ ಗಡಿಭಾಗಕ್ಕೆ ತೆರಳಿ ಹತ್ತಿರದ ಗ್ರಾಮಗಳ ಜನರಿಗೆ ಮತ್ತು ಕೇರಳದಿಂದ ಕರ್ನಾಟಕ ಪ್ರವೇಶಿಸುವ ಜನರಿಗೆ ನಿಫಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸೋಂಕಿಗೊಳಗಾಳಗಾಗದಿಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಆಕಸ್ಮಾತ್ ಸೋಂಕಿಗೊಳಗಾದಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಅವರು ವಿವರಿಸುತ್ತಿದ್ದಾರೆ. ಸೋಂಕು ಯಾವುದೇ ಆಗಿರಲಿ prevention is better than cure ಅಂತ ಹೇಳತ್ತಾರಲ್ಲ? ಅದು ಸರ್ವಕಾಲಿಕ ಸತ್ಯ, ಹಾಗಾಗಿ ನಮ್ಮ ಎಚ್ಚರದಲ್ಲಿ ನಾವಿರಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ