ಕೊರೊನಾ, ನಿಫಾ ಆತಂಕದ ನಡುವೆ ಸದ್ದಿಲ್ಲದೆ ಉಲ್ಬಣಿಸುತ್ತಿದೆ ಬ್ಲ್ಯಾಕ್​ ಫಂಗಸ್​; 10 ದಿನಗಳಲ್ಲಿ 25 ಮಂದಿಗೆ ಸೋಂಕು, 7 ಸಾವು

ರಾಜ್ಯದಲ್ಲಿ ಪತ್ತೆಯಾದ ಬ್ಲ್ಯಾಕ್​ ಫಂಗಸ್​  ಸೊಂಕಿನ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಶೇ.30ರಷ್ಟು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಡುಬಂದಿದ್ದು, ಬೆಂಗಳೂರು ಒಂದರಲ್ಲೇ ಒಟ್ಟು 1,236 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಆ ಪೈಕಿ ಈವರೆಗೆ 154 ಜನ ಸಾವಿಗೀಡಾಗಿದ್ದಾರೆ.

ಕೊರೊನಾ, ನಿಫಾ ಆತಂಕದ ನಡುವೆ ಸದ್ದಿಲ್ಲದೆ ಉಲ್ಬಣಿಸುತ್ತಿದೆ ಬ್ಲ್ಯಾಕ್​ ಫಂಗಸ್​; 10 ದಿನಗಳಲ್ಲಿ 25 ಮಂದಿಗೆ ಸೋಂಕು, 7 ಸಾವು
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Sep 09, 2021 | 7:14 AM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಅವಾಂತರ ಇನ್ನೂ ಹಸಿಯಾಗಿದೆ. ಸದ್ಯ ಮೇಲ್ನೋಟಕ್ಕೆ ಕೊರೊನಾ ನಿಯಂತ್ರಣಕ್ಕೆ ಬಂದಂತೆ ತೋರುತ್ತಿದೆಯಾದರೂ ಯಾವ ಕ್ಷಣದಲ್ಲಿ ಸೋಂಕು ಮತ್ತೆ ಮೂರನೇ ಅಲೆಯನ್ನು ಎಬ್ಬಿಸುವುದೋ ಎಂಬ ಭಯ ಜನರಲ್ಲಿದೆ. ಇನ್ನೊಂದೆಡೆ ಕೇರಳದಲ್ಲಿ ಆತಂಕ ಹುಟ್ಟಿಸಿರುವ ನಿಫಾ ವೈರಸ್​ ಕೂಡಾ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲೇ ಕರ್ನಾಟಕದಲ್ಲಿ ಬ್ಲ್ಯಾಕ್​ ಫಂಗಸ್​​ ಪ್ರಕರಣಗಳೂ ಹೆಚ್ಚಾಗುತ್ತಿದ್ದು, 10 ದಿನಗಳ ಅವಧಿಯಲ್ಲಿ 25 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿ, 7 ಜನ ಸಾವಿಗೀಡಾಗಿದ್ದಾರೆ ಎಂಬ ವರದಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ದಿನೇದಿನೆ ಹೆಚ್ಚಾಗುತ್ತಿರುವ ವೈರಸ್‌ಗಳ ಕಾಟ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗುವಂತೆ ಕಾಣುತ್ತಿದೆ. ಕೊರೊನಾ, ನಿಫಾ, ಬ್ಲ್ಯಾಕ್​ ಫಂಗಸ್​ ಎಲ್ಲವೂ ಒಂದರ ಬೆನ್ನಿಗೆ ಒಂದು ನಿಂತಿರುವಂತೆ ಆಗಿದ್ದು, ಜನ ಮೈಮರೆತರೆ ಯಾವಾಗ ಬೇಕಾದರೂ ಅಪಾಯದ ಸನ್ನಿವೇಶ ಉದ್ಭವಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈವರೆಗೆ 3,904 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದ್ದು, 458 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಪತ್ತೆಯಾದ ಬ್ಲ್ಯಾಕ್​ ಫಂಗಸ್​  ಸೊಂಕಿನ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಶೇ.30ರಷ್ಟು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಡುಬಂದಿದ್ದು, ಬೆಂಗಳೂರು ಒಂದರಲ್ಲೇ ಒಟ್ಟು 1,236 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಆ ಪೈಕಿ ಈವರೆಗೆ 154 ಜನ ಸಾವಿಗೀಡಾಗಿದ್ದಾರೆ. ಬಹುಮುಖ್ಯವಾಗಿ ಕಳೆದ ಹತ್ತು ದಿನಗಳಲ್ಲಿ 25 ಮಂದಿಗೆ ಬ್ಲಾಕ್ ಫಂಗಸ್ ಸೋಂಕು ತಗುಲಿದ್ದು, ಏಳು ಜನರ ಸಾವು ಸಂಭವಿಸಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬ್ಲ್ಯಾಕ್​ ಫಂಗಸ್ ಪ್ರಕರಣಗಳು ದಾಖಾಲಾಗಿವೆ ಎನ್ನುವುದರ ಮಾಹಿತಿ ಇಲ್ಲಿದೆ 100ಕ್ಕಿಂತ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾದ ಜಿಲ್ಲೆಗಳು: ಧಾರವಾಡದಲ್ಲಿ- 345 ವಿಜಯಪುರದಲ್ಲಿ – 236 ಕಲಬುರುಗಿಯಲ್ಲಿ 216 ಬಳ್ಳಾರಿಯಲ್ಲಿ – 176 ಚಿತ್ರದುರ್ಗದಲ್ಲಿ- 167 ಬೆಳಗಾವಿಯಲ್ಲಿ – 159 ರಾಯಚೂರಿನಲ್ಲಿ‌ – 142 ಮೈಸೂರಿನಲ್ಲಿ – 137 ಬಾಗಲಕೋಟೆಯಲ್ಲಿ -131 ದಾವಣಗೆರೆಯಲ್ಲಿ- 127 ಕೋಲಾರದಲ್ಲಿ – 114 ದಕ್ಷಿಣ ಕನ್ನಡದಲ್ಲಿ – 106

ಕಡಿಮೆ ಪ್ರಕರಣಗಳು ಕಂಡುಬಂದ ಜಿಲ್ಲೆಗಳು ಧಾರವಾಡ – 50 ಬಳ್ಳಾರಿ – 28 ದಕ್ಷಿಣ ಕನ್ನಡದಲ್ಲಿ – 25 ಕಲಬುರ್ಗಿಯಲ್ಲಿ – 24 ದಾವಣಗೆರೆ ಹಾಗೂ ಮೈಸೂರಿನಲ್ಲಿ‌ ತಲಾ 20 ಶಿವಮೊಗ್ಗ – 15 ಬಾಗಲಕೋಟೆಯಲ್ಲಿ – 13 ರಾಯಚೂರಿನಲ್ಲಿ – 12 ಕೋಲಾರ, ಹಾಸನ, ಚಿಕ್ಕಬಳ್ಳಾಪುರದಲ್ಲಿ ತಲಾ 11 ಗದಗದಲ್ಲಿ 10

ಇದನ್ನೂ ಓದಿ: Nipah Virus: ಕೊವಿಡ್​ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ದಾಖಲಾಗಿದ್ದವರ ಪೈಕಿ ಶೇ.30ರಷ್ಟು ಸೋಂಕಿತರಿಗೆ ಸಂಪೂರ್ಣ ದೃಷ್ಟಿ ಹಾನಿ -ಮಿಂಟೋ ಆಸ್ಪತ್ರೆ ವರದಿ

(Black Fungus cases increasing silently amid of Covid 19 and Nipah fear in Karnataka)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್