ಬೆಂಗಳೂರಿನಲ್ಲಿ ನಕಲಿ ಗನ್ ತೋರಿಸಿ ರೈಲ್ವೆ ಪ್ರಯಾಣಿಕರನ್ನ ದೋಚುತ್ತಿದ್ದ ಉತ್ತರ ಪ್ರದೇಶ, ಬಿಹಾರ ಆರೋಪಿಗಳ ಬಂಧನ

ರೈಲು ಕ್ರಾಸಿಂಗ್ ಮಾಡುತ್ತಿದ್ದ ವೇಳೆ ರೈಲುಗಳಿಗೆ ಎಂಟ್ರಿ ಕೊಡ್ತಿದ್ದ ಆರೋಪಿಗಳು ನಕಲಿ ಗನ್ ತೋರಿಸಿ ರೈಲಿನಲ್ಲಿದ್ದ ಪ್ರಯಾಣಿಕರನ್ನ ದೋಚುತ್ತಿದ್ದರು. ಕಳೆದೊಂದು ತಿಂಗಳಲ್ಲಿ ಇದೇ ರೀತಿಯ ಮೂರು ದೂರುಗಳು ದಾಖಲಾಗಿದ್ದವು.

ಬೆಂಗಳೂರಿನಲ್ಲಿ ನಕಲಿ ಗನ್ ತೋರಿಸಿ ರೈಲ್ವೆ ಪ್ರಯಾಣಿಕರನ್ನ ದೋಚುತ್ತಿದ್ದ ಉತ್ತರ ಪ್ರದೇಶ, ಬಿಹಾರ ಆರೋಪಿಗಳ ಬಂಧನ
ಬೆಂಗಳೂರಿನಲ್ಲಿ ನಕಲಿ ಗನ್ ತೋರಿಸಿ ರೈಲ್ವೆ ಪ್ರಯಾಣಿಕರನ್ನ ದೋಚುತ್ತಿದ್ದ ಉತ್ತರ ಪ್ರದೇಶ ಆರೋಪಿಗಳ ಬಂಧನ

ಬೆಂಗಳೂರು: ನಕಲಿ ಗನ್ ತೋರಿಸಿ ಬೆಂಗಳೂರಿನಲ್ಲಿ ರೈಲ್ವೆ ಪ್ರಯಾಣಿಕರನ್ನ ದೋಚುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ನಕಲಿ ಗನ್ ತೋರಿಸಿ ರೈಲ್ವೆ ಪ್ರಯಾಣಿಕರನ್ನ ದೋಚುತ್ತಿದ್ದ ಆರೋಪಿಗಳಾದ ಬಿಹಾರ ಮೂಲದ ರವಿಚಂದ್ (27) ಹಾಗೂ ಉತ್ತರ ಪ್ರದೇಶ ಮೂಲದ ಸಂದೀಪ್ (32) ಬಂಧಿತರು. ಬೆಂಗಳೂರು ರೈಲ್ವೆ ಪೊಲೀಸರು ಈ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ರೈಲು ಕ್ರಾಸಿಂಗ್ ಮಾಡುತ್ತಿದ್ದ ವೇಳೆ ರೈಲುಗಳಿಗೆ ಎಂಟ್ರಿ ಕೊಡ್ತಿದ್ದ ಆರೋಪಿಗಳು ನಕಲಿ ಗನ್ ತೋರಿಸಿ ರೈಲಿನಲ್ಲಿದ್ದ ಪ್ರಯಾಣಿಕರನ್ನ ದೋಚುತ್ತಿದ್ದರು. ಕಳೆದೊಂದು ತಿಂಗಳಲ್ಲಿ ಇದೇ ರೀತಿಯ ಮೂರು ದೂರುಗಳು ದಾಖಲಾಗಿದ್ದವು. ಒಮ್ಮೆ ಎಂಟ್ರಿ ಕೊಟ್ರೆ ರೈಲಿನ ಒಂದು ಕಂಪಾರ್ಟ್ಮೆಂಟ್ ನಲ್ಲಿದ್ದ ಜನರನ್ನ ಹೆದರಿಸಿ ಚಿನ್ನಾಭರಣ ಹಣ ದೋಚುತ್ತಿದ್ದರು. ಬಂಧಿತರಿಂದ 3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ನಕಲಿ ಗನ್ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ರೈತನ ಕಾರು ಅಡ್ಡಗಟ್ಟಿ ದರೋಡೆ

ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಬಿಟ್ಟಗೊಂಡನಹಳ್ಳಿ ಗೇಟ್ ನಲ್ಲಿ ರೈತನ ಕಾರು ಅಡ್ಡಗಟ್ಟಿ 15 ಸಾವಿರ ಹಣ, ಎರಡು ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ.

ರೈತ ರಾಮಚಂದ್ರ‌ ಅವರು ತುಮಕೂರು ಮಾರುಕಟ್ಟೆಯಲ್ಲಿ ತರಕಾರಿ ಮಾರಿ 15 ಸಾವಿರ ಹಣದೊಂದಿಗೆ ಮನೆಗೆ ಹೋಗುತ್ತಿದ್ದ. ಕಾರು ನಿಲ್ಲಿಸಿ ಜಾಕ್ ನೀಡುವಂತೆ ಕೇಳಿದ್ದರು. ನಂತರ ಮಾರಕಾಸ್ತ್ರ ತೋರಿಸಿ, ಬೆದರಿಸಿ ಹಣ ಮೊಬೈಲ್ ಕಿತ್ತು ಪರಾರಿಯಾಗಿದ್ದರು. ಇದರಿಂದ ರಸ್ತೆಯಲ್ಲಿ ಓಡಾಡೋಕೆ ಸ್ಥಳೀಯರು ಭಯ ಪಡುತ್ತಿದ್ದಾರೆ. ಸಿ‌.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ- 20 ವರ್ಷ ಕಠಿಣ ಜೈಲು; ಮೈಸೂರಿನಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

(bangalore railway police arrest two dacoits)

Click on your DTH Provider to Add TV9 Kannada