Nipah Virus: ಕೊವಿಡ್​ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

Nipah Virus Symptoms: ನಿಫಾ ವೈರಸ್ ಕೊರೊನಾ ವೈರಸ್​ನಂತೆ ಅಲ್ಲ. ಏಕೆಂದರೆ, ನಿಫಾ ವೈರಸ್​ಗೆ ಇದುವರೆಗೂ ಯಾವುದೇ ಲಸಿಕೆಯೇ ಇಲ್ಲ. ಲಸಿಕೆಯ ಸಂಶೋಧನೆಯೂ ಮುಗಿದಿಲ್ಲ. ನಿಫಾ ವೈರಸ್ ತಗುಲಿದವರ ಪೈಕಿ ಶೇ.40 ರಿಂದ ಶೇ.75 ರಷ್ಟು ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.

Nipah Virus: ಕೊವಿಡ್​ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?
ನಿಫಾ ವೈರಸ್
Follow us
S Chandramohan
| Updated By: ಸುಷ್ಮಾ ಚಕ್ರೆ

Updated on: Sep 07, 2021 | 5:52 PM

ಬೆಂಗಳೂರು: ಭಾರತ ಹಾಗೂ ಕೇರಳ ರಾಜ್ಯಗಳು ಈಗಾಗಲೇ ಕೊರೊನಾ ವೈರಸ್‌ನಿಂದ (Covid-19 Virus) ಸಾಕಷ್ಟು ತತ್ತರಿಸಿ ಹೋಗಿವೆ. ಇದರ ಮಧ್ಯೆಯೇ ಈಗ ಮತ್ತೊಂದು ಭಯಾನಕ ವೈರಸ್​ನ ಕಾಟ ಶುರುವಾಗಿದೆ. ಕೇರಳದಲ್ಲಿ ನಿಫಾ ವೈರಸ್​ನಿಂದ (Nipah Virus) ಕಳೆದ ಭಾನುವಾರ ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಇದರಿಂದ ಕೇರಳ ಏಕಕಾಲಕ್ಕೆ ಕೊರೊನಾ ವೈರಸ್ ಹಾಗೂ ನಿಫಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಹಾಗಾದರೆ, ನಿಫಾ ವೈರಸ್​ಗೂ ಕೊರೊನಾ ವೈರಸ್​ಗೂ ಇರುವ ವ್ಯತ್ಯಾಸವೇನು? ನಿಫಾ ವೈರಸ್ ಅದೆಷ್ಟು ಅಪಾಯಕಾರಿ ವೈರಸ್ ಎನ್ನುವುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಕೇರಳ ರಾಜ್ಯ ಮೊದಲೇ ಕೊರೊನಾ ವೈರಸ್​ನಿಂದ ತತ್ತರಿಸಿ ಹೋಗಿದೆ. ಈಗ ಭಾರತದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಹೊಸ ಕೊರೊನಾ ಕೇಸ್​ಗಳ ಪೈಕಿ ಶೇ. 50ರಿಂದ ಶೇ. 70ರಷ್ಟು ಹೊಸ ಕೊರೊನಾ ಕೇಸ್​ಗಳು ಕೇರಳ ರಾಜ್ಯವೊಂದರಲ್ಲೇ ಪತ್ತೆಯಾಗುತ್ತಿವೆ. ಕೇರಳ ರಾಜ್ಯದಲ್ಲಿ ಕೊರೊನಾ ಕೇಸ್ ಗಳನ್ನೇ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಇದರ ಮಧ್ಯೆಯೇ ಕೇರಳ ರಾಜ್ಯಕ್ಕೆ ಮತ್ತೊಂದು ಡೆಡ್ಲಿ ವೈರಸ್ ಎಂಟ್ರಿ ಕೊಟ್ಟಿದೆ. ಅದುವೇ ನಿಫಾ ವೈರಸ್. ಹೌದು, ನಿಫಾ ವೈರಸ್ ಈಗ ಕೇರಳ ರಾಜ್ಯದ ಕೋಯಿಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಕಳೆದ ಭಾನುವಾರ 12 ವರ್ಷದ ಬಾಲಕನೊಬ್ಬ ನಿಫಾ ವೈರಸ್​ನಿಂದ ಸಾವನ್ನಪ್ಪಿದ್ದಾನೆ. ಇದು ಈಗ ಕೇರಳ ರಾಜ್ಯದಲ್ಲಿ ವೈರಸ್ ಗಳ ಬಗೆಗಿನ ಭಯ, ಆತಂಕ ದ್ವಿಗುಣವಾಗುವಂತೆ ಮಾಡಿದೆ. ಕೊರೊನಾ ವೈರಸ್​ಗೆ ಹೋಲಿಸಿದರೆ, ನಿಫಾ ವೈರಸ್ ಬಾರಿ ಡೆಡ್ಲಿ ವೈರಸ್.

ನಮ್ಮ ದೇಶದಲ್ಲಿ ಕೊರೊನಾ ವೈರಸ್​ಗೆ ಈಗಾಗಲೇ ಲಸಿಕೆ ಸಿಕ್ಕಿದೆ. ಔಷಧಿ ಪಡೆದು ಕೊರೊನಾ ವೈರಸ್​ನಿಂದ ಗುಣಮುಖವಾಗಬಹುದು. ಕೊರೊನಾ ವೈರಸ್ ತಗುಲಿದವರ ಪೈಕಿ ಶೇ.1.3 ರಷ್ಟು ಜನರು ಮಾತ್ರ ನಮ್ಮ ದೇಶದಲ್ಲಿ ಸಾವನ್ನಪ್ಪಿದ್ದಾರೆ. ನಮ್ಮ ದೇಶದಲ್ಲಿ ಕೊರೊನಾ ವೈರಸ್ ತಗುಲಿದ ಬಳಿಕ, ಶೇ.98.7 ರಷ್ಟು ಜನರು ಗುಣಮುಖವಾದ ದಾಖಲೆಯೇ ಇದೆ.

ಆದರೆ, ನಿಫಾ ವೈರಸ್ ಕೊರೊನಾ ವೈರಸ್​ನಂತೆ ಅಲ್ಲ. ಏಕೆಂದರೆ, ನಿಫಾ ವೈರಸ್​ಗೆ ಇದುವರೆಗೂ ಯಾವುದೇ ಲಸಿಕೆಯೇ ಇಲ್ಲ. ಲಸಿಕೆಯ ಸಂಶೋಧನೆಯೂ ಮುಗಿದಿಲ್ಲ. ನಿಫಾ ವೈರಸ್ ತಗುಲಿದವರ ಪೈಕಿ ಶೇ.40 ರಿಂದ ಶೇ.75 ರಷ್ಟು ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ನಿಫಾ ವೈರಸ್​ಗೆ ಯಾವುದೇ ನಿರ್ದಿಷ್ಟ, ನಿಖರವಾದ ಔಷಧಿಯೂ ಇಲ್ಲ. ಹೀಗಾಗಿ ನಿಫಾ ವೈರಸ್ ಡೆಡ್ಲಿ ವೈರಸ್. ಕೊರೊನಾ ವೈರಸ್​ಗಿಂತ ನಿಫಾ ವೈರಸ್ ಅತಿ ಹೆಚ್ಚು ಡೆಡ್ಲಿ ವೈರಸ್.

ನಿಫಾ ವೈರಸ್ ತಗುಲಿರುವ ಲಕ್ಷಣಗಳೆಂದರೆ, ಅನಾರೋಗ್ಯ, ಜ್ವರ, ಮೈ ಕೈ ನೋವು, ಸ್ನಾಯುಗಳ ನೋವು, ತಲೆನೋವು, ಸುಸ್ತು, ವಾಂತಿ. ನಿಫಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ. ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅದೇ ರೀತಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಬಾವಲಿ, ಹಂದಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ. ಬಾವಲಿಗಳು ತಿಂದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೇರಳದ ಕೋಯಿಕ್ಕೋಡ್ ಬಾಲಕನಿಗೆ ಮನೆ ಬಳಿ ಇದ್ದ ರಾಂಬಟನ್ ಎನ್ನುವ ಹಣ್ಣು ತಿಂದಿದ್ದರಿಂದ ನಿಫಾ ವೈರಸ್ ತಗುಲಿರುವ ಶಂಕೆ ಇದೆ. ಬಾಲಕನ ಮನೆ ಬಳಿ ನದಿ ಕೂಡ ಇದೆ. ನದಿ ಬಳಿ ಬಾವಲಿಗಳು ಇವೆ. ಬಾವಲಿಗಳು ತಿಂದ ರಾಂಬಟನ್ ಹಣ್ಣನ್ನು ಬಾಲಕ ಸೇವಿಸಿರಬಹುದು. ಬಳಿಕ ಬಾಲಕನಿಗೆ ನಿಫಾ ವೈರಸ್ ತಗುಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ . ಮನುಷ್ಯರಿಗೆ ನಿಫಾ ವೈರಸ್ ತಗುಲಿದ ಬಳಿಕ ವೇಗವಾಗಿ ಹರಡುತ್ತದೆ.

ನಿಫಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿದವರಿಂದ ಭೌತಿಕ ಅಂತರ ಕಾಪಾಡಿಕೊಳ್ಳಬೇಕು. ನಿಫಾ ವೈರಸ್ ತಗುಲಿದವರನ್ನು ಭೇಟಿಯಾದ ಬಳಿಕ ಕೈಗಳನ್ನು ತಪ್ಪದೇ ತೊಳೆಯಬೇಕು. ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿರುವುದು ಇದೇ ಮೊದಲೇನೂ ಅಲ್ಲ. 2018ರ ಮೇ ತಿಂಗಳಿನಲ್ಲೂ ನಿಫಾ ವೈರಸ್ ಪತ್ತೆಯಾಗಿತ್ತು. ಆಗ ನಿಫಾ ವೈರಸ್ ವಿರುದ್ಧದ ಸಮರದಲ್ಲಿ ಕೇರಳ ಗೆಲುವು ಸಾಧಿಸಿತ್ತು. ಆದರೆ, ಈಗ ಒಂದೇ ಬಾರಿಗೆ ಎರಡೆರಡು ವೈರಸ್ ಗಳನ್ನು ನಿಯಂತ್ರಿಸಿ, ನಿರ್ವಹಿಸಬೇಕಾದ ಸ್ಥಿತಿಯಲ್ಲಿ ಕೇರಳ ರಾಜ್ಯ ಇದೆ. ಇದು ಕೇರಳದ ಆರೋಗ್ಯ ಇಲಾಖೆಗೆ ಡಬಲ್ ಸವಾಲಿನ ಪರಿಸ್ಥಿತಿ. ನಿಫಾ ವೈರಸ್ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿರುವ ಪ್ರಾಣಿ, ಪಕ್ಷಿಗಳನ್ನು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಹತ್ಯೆ ಮಾಡಿ ಮಣ್ಣಿನಲ್ಲಿ ಹೂಳಬೇಕು.

ಕೇರಳದಲ್ಲಿ ನಿಫಾ ವೈರಸ್​ನಿಂದ 12 ವರ್ಷದ ಬಾಲಕ ಸಾವನ್ನಪ್ಪಿದವರ ಕುಟುಂಬದವರ ಸ್ಯಾಂಪಲ್ ಅನ್ನು ಪರೀಕ್ಷೆಗೆ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್​ಗೆ ಕಳುಹಿಸಲಾಗಿತ್ತು. ಎಂಟು ಮಂದಿಯ ವರದಿಯು ನೆಗೆಟಿವ್ ಎಂದು ಬಂದಿದೆ. ಇದರಿಂದ ಕೇರಳ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಬಾಲಕನ ಸಂಪರ್ಕದಲ್ಲಿದ್ದ 48 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು 5 ಸ್ಯಾಂಪಲ್​ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. 11 ಮಂದಿಯಲ್ಲಿ ಲಕ್ಷಣಗಳು ಕಂಡು ಬಂದಿವೆ. ಆದರೆ, ಲ್ಯಾಬ್​ನಿಂದ ಸ್ಯಾಂಪಲ್ ವರದಿ ಬರಬೇಕಾಗಿದೆ. ಕೇರಳ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಹತ್ತು ಸಲಹೆಗಳನ್ನು ನೀಡಿದೆ. ಕಂಟೇನ್​ಮೆಂಟ್ ಏರಿಯಾದಲ್ಲಿ ಸಕ್ರಿಯ ಕೇಸ್ ಶೋಧ ನಡೆಸಬೇಕು. ನೆರೆಹೊರೆಯ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಬೇಕು. ದಿನದ 24 ಗಂಟೆಯೂ ಕಂಟ್ರೋಲ್ ರೂಂ ತೆರೆಯಬೇಕು. ಆಸ್ಪತ್ರೆ, ಸಮುದಾಯದ ಸರ್ವೇಲೇನ್ಸ್ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದ್ದು, ಕೇರಳ ರಾಜ್ಯಕ್ಕೆ ಎಲ್ಲ ರೀತಿಯ ತಾಂತ್ರಿಕ ನೆರವು ನೀಡಲಾಗುವುದು ಎಂದು ಹೇಳಿದೆ.

ನಿಫಾ ವೈರಸ್ ವಿರುದ್ಧ ನಿರ್ದಿಷ್ಟವಾದ ಔಷಧಿ ಇಲ್ಲ. ಆದರೆ, ಸಪೋರ್ಟೀವ್ ಔಷಧಿಯನ್ನು ನೀಡಲಾಗುತ್ತಿದೆ. ನಿಫಾ ವೈರಸ್ ತಗುಲಿದವರಿಗೆ ರೆಮಿಡಿಸಿವಿರ್, ರಿಬಾವೀರೀನ್ ಔಷಧಿ ನೀಡಲು ಕೇರಳದ ವೈದ್ಯಕೀಯ ಮಂಡಳಿ ಒಪ್ಪಿಗೆ ನೀಡಿದೆ. ಆಸ್ಟ್ರೇಲಿಯಾದಿಂದ ಹ್ಯೂಮನ್ ಮಾನೋಕ್ಲೋನಲ್ ಆ್ಯಂಟಿಬಾಡಿ ಔಷಧಿ ತರಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಕೋಯಿಕ್ಕೋಡ್‌ನ ಮೃತ ಬಾಲಕನ ಜೊತೆಗೆ ಆರೋಗ್ಯ ಇಲಾಖೆಯ 251 ಮಂದಿ ಸಂಪರ್ಕದಲ್ಲಿದ್ದರು ಎಂದು ಕೇರಳ ಸರ್ಕಾರ ಕೇಂದ್ರಕ್ಕೆ ವರದಿ ನೀಡಿದೆ. ಎಲ್ಲ 251 ಮಂದಿ ಸ್ಯಾಂಪಲ್ ಅನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಎಲ್ಲ ಸಂಪರ್ಕಿತರ ಆರೋಗ್ಯ ಸ್ಥಿರವಾಗಿದೆ. ಆದರೆ, 251 ಮಂದಿಯ ಪೈಕಿ 11 ಮಂದಿಯಲ್ಲಿ ಕೆಲ ಲಕ್ಷಣಗಳು ಕಂಡು ಬಂದಿವೆ. ಬಾಲಕನ ಮನೆಯಲ್ಲಿದ್ದ ಟಗರು ರಕ್ತದ ಸ್ಯಾಂಪಲ್ ಅನ್ನು ಪಡೆದು ಪರೀಕ್ಷಿಸಲಾಗುತ್ತಿದೆ. ಮೃತ ಬಾಲಕನ ಮನೆಯ ಬಳಿಯೇ ರಾಂಬಟನ್ ಹಣ್ಣಿನ ಗಿಡ ಇತ್ತು. ಇದರ ಹಣ್ಣನ್ನು ಪಕ್ಷಿ, ಬಾವಲಿಗಳು ತಿಂದಿರುವ ಸಾಧ್ಯತೆ ಇದೆ. ಕೋಯಿಕ್ಕೋಡ್ ಜಿಲ್ಲೆಯ ಅಕ್ಕಪಕ್ಕದ ಮಲಪ್ಪುರಂ, ವೈಯನಾಡು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರದಲ್ಲಿ ರಾಜ್ಯ ಮಟ್ಟದ ನಿಫಾ ಕಂಟ್ರೋಲ್ ಸೆಲ್ ಆರಂಭಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿಫಾ ವೈರಸ್ ತಗುಲಿದವರಿಗೆ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ.

ಇದನ್ನೂ ಓದಿ: Nipah virus: ನಿಫಾ ವೈರಸ್​ ವಿರುದ್ಧ ಕೊವಿಶೀಲ್ಡ್​ ಲಸಿಕೆ ಬಳಕೆ; ಅಧ್ಯಯನ ಹೇಳಿದ್ದೇನು?

ಕೇರಳದಲ್ಲಿ ನಿಫಾ ವೈರಸ್ ಪತ್ತೆ; ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚನೆ

(Nipah Virus: Important Facts on Nipah Virus, Symptoms as Kerala on Alert after Boy Death Difference of Nipah and Covid )

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ