AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿನೂ ಪಡೆದಿಲ್ಲ ದೀಪಿಕಾ ಪಡುಕೋಣೆ; ಕಾರಣವೇನು?

ದೀಪಿಕಾ ಪಡುಕೋಣೆ ಅವರು ‘ಜವಾನ್’ ಸಿನಿಮಾದಲ್ಲಿ ನಟಿಸಲು 15 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಇದನ್ನು ದೀಪಿಕಾ ಅಲ್ಲಗಳೆದಿದ್ದಾರೆ. ತಾವು ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಎಂದಿರುವ ಅವರು, ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಭಾರತ ವಿಶ್ವಕಪ್ ಗೆದ್ದ ಕಥೆಯನ್ನು ಆಧರಿಸಿ ‘83’ ಚಿತ್ರವನ್ನು ಮಾಡಲಾಗಿತ್ತು. ಅದಕ್ಕೆ ಅವರು ಸಂಭಾವನೆ ಪಡೆದಿಲ್ಲ. ಇದಕ್ಕೆ ಅವರು ಕಾರಣ ತಿಳಿಸಿದ್ದಾರೆ.

‘ಜವಾನ್’ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿನೂ ಪಡೆದಿಲ್ಲ ದೀಪಿಕಾ ಪಡುಕೋಣೆ; ಕಾರಣವೇನು?
ದೀಪಿಕಾ ಪಡುಕೋಣೆ
ರಾಜೇಶ್ ದುಗ್ಗುಮನೆ
|

Updated on: Sep 15, 2023 | 12:43 PM

Share

‘ಜವಾನ್’ ಸಿನಿಮಾ (Jawan Movie) ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಬೀಗುತ್ತಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ ಅವರು ಒಂದೇ ವರ್ಷದಲ್ಲಿ ಎರಡನೇ ಯಶಸ್ಸು ಕಂಡಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಮಾತ್ರವಲ್ಲದೆ, ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ (Deepika Padukone) ಮೊದಲಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸೋಕೆ ಕಲಾವಿದರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಅಚ್ಚರಿಯ ವಿಚಾರ ಎಂದರೆ ದೀಪಿಕಾ ಪಡುಕೋಣೆ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ.

ದೀಪಿಕಾ ಪಡುಕೋಣೆ ಅವರು ‘ಜವಾನ್’ ಸಿನಿಮಾದಲ್ಲಿ ನಟಿಸಲು 15 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಇದನ್ನು ದೀಪಿಕಾ ಅಲ್ಲಗಳೆದಿದ್ದಾರೆ. ತಾವು ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಎಂದಿರುವ ಅವರು, ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

ಭಾರತ ವಿಶ್ವಕಪ್ ಗೆದ್ದ ಕಥೆಯನ್ನು ಆಧರಿಸಿ ‘83’ ಚಿತ್ರವನ್ನು ಮಾಡಲಾಗಿತ್ತು. ಇದರಲ್ಲೂ ದೀಪಿಕಾ ಅತಿಥಿ ಪಾತ್ರ ಮಾಡಿದ್ದರು. ಆದರೆ, ಅದಕ್ಕೆ ಅವರು ಸಂಭಾವನೆ ಪಡೆದಿಲ್ಲ. ಇದಕ್ಕೆ ಅವರು ಕಾರಣ ತಿಳಿಸಿದ್ದಾರೆ. ‘ನನಗೆ 83 ಸಿನಿಮಾದ ಭಾಗವಾಗಬೇಕಿತ್ತು. ಪತಿಯ ಯಶಸ್ಸಿನ ಭಾಗವಾಗುವ ಹೆಂಡತಿಯ ಪಾತ್ರದಲ್ಲಿ ನಟಿಸೋಕೆ ನನಗೆ ಖುಷಿ ಇತ್ತು. ಪತಿಗಾಗಿ ತಮ್ಮ ವೃತ್ತಿ ಜೀವನವನ್ನು ತ್ಯಾಗ ಮಾಡುವ ಮಹಿಳೆಯರಿಗೆ ಗೌರವ ಸಲ್ಲಿಸಲು ನನಗೊಂದು ಅವಕಾಶ ಸಿಕ್ಕಿತ್ತು. ಅದಕ್ಕೆ ಯಾವುದೇ ಚಾರ್ಜ್ ಮಾಡಿರಲಿಲ್ಲ. ಅದೇ ರೀತಿ ಶಾರುಖ್ ಖಾನ್​ ಹಾಗೂ ರೋಹಿತ್ ಶೆಟ್ಟಿಗಾಗಿ ನಾನು ಸಂಭಾವನೆ ಪಡೆಯದೇ ಅತಿಥಿ ಪಾತ್ರ ಮಾಡುತ್ತೇನೆ’ ಎಂದು ದೀಪಿಕಾ ಹೇಳಿದ್ದಾರೆ.

ಇದನ್ನೂ ಓದಿ: ‘ಜವಾನ್’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅವರದ್ದು ಹಿಟ್ ಕಾಂಬಿನೇಷನ್. ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಶಾರುಖ್-ದೀಪಿಕಾ ಒಟ್ಟಾಗಿ ನಟಿಸಿದರು. ‘ಬಿಲ್ಲು’ ಸಿನಿಮಾದ ವಿಶೇಷ ಹಾಡಿನಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. 2013ರ ಸೂಪರ್ ಹಿಟ್ ಸಿನಿಮಾ ‘ಚೆನ್ನೈ ಎಕ್ಸ್​​ಪ್ರೆಸ್’ ಚಿತ್ರದಲ್ಲಿ ಇವರು ನಟಿಸಿದ್ದರು. ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲೂ ಶಾರುಖ್-ದೀಪಿಕಾ ಅಭಿನಯಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ