ಪ. ಬಂಗಾಳದಲ್ಲಿ ಫುಟ್ಬಾಲ್ ಅಕಾಡೆಮಿ: ಸ್ಪೇನ್ ಪ್ರವಾಸದಲ್ಲಿ ಲಾ ಲಿಗಾ ಅಧಿಕಾರಿಗಳನ್ನು ಭೇಟಿಯಾದ ಮಮತಾ ಬ್ಯಾನರ್ಜಿ
Mamata Banerjee Meets La Liga President: ಸ್ಪೇನ್‌ನಂತೆ, ಬಂಗಾಳದಲ್ಲಿ ಫುಟ್‌ಬಾಲ್ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಪ್ರತಿ ದಿನ ಫುಟ್ಬಾಲ್ ಕುರಿತ ಚರ್ಚೆಯೂ ನಡೆಯುತ್ತದೆ. ಬಂಗಾಳದಲ್ಲಿ ಫುಟ್ಬಾಲ್ ಅಕಾಡೆಮಿ ತೆರೆಯಲು ಅಗತ್ಯವಿರುವ ಭೂಮಿಯನ್ನು ಪಡೆಯಲು ಯಾವುದೇ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಾ ಲಿಗಾ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಸದ್ಯ ಸ್ಪೇನ್ ಪ್ರವಾಸದಲ್ಲಿದ್ದಾರೆ. ಇಲ್ಲಿ ಲಾ ಲಿಗಾ ಅಧಿಕಾರಿಗಳನ್ನು ಭೇಟಿ ಮಾಡಿ ಫುಟ್ಬಾಲ್ ತರಬೇತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಕೋಲ್ಕತ್ತಾದ ಫುಟ್ಬಾಲ್ ಮೈದಾನ ಪ್ರತಿನಿಧಿಗಳೂಂದಿಗೆ ಮಮತಾ ಲಾ ಲಿಗಾ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಬಂಗಾಳದ ಜನತೆ ಫುಟ್‌ಬಾಲ್ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಲಾ ಲಿಗಾ ಫುಟ್ಬಾಲ್ ಅಕಾಡೆಮಿ ನಿರ್ಮಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮುಂದಿನ ಪೀಳಿಗೆಯ ಬೆಂಗಾಲಿ ಆಟಗಾರರು ರೊನಾಲ್ಡೊ ಮತ್ತು ಮೆಸ್ಸಿಯಂತಹ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂಬ ಕಾರಣಕ್ಕೆ ಈ ಭೇಟಿ ನಡೆದಿದೆ. ಸಭೆಯಲ್ಲಿ ಲಾ ಲಿಗಾದೊಂದಿಗೆ ಎಂಒಯು ಒಪ್ಪಂದಕ್ಕೂ ಸಹಿ ಹಾಕಲಾಯಿತು. ಈ ಮೂಲಕ ಲಾ ಲಿಗಾ ಶೀಘ್ರದಲ್ಲೇ ಬಂಗಾಳದಲ್ಲಿ ಫುಟ್ಬಾಲ್ ತರಬೇತಿ ಕೇಂದ್ರವನ್ನು ತೆರೆಯಲಿದೆ.
Asia Cup 2023: ಭಾರತ vs ಶ್ರೀಲಂಕಾ ನಡುವೆ ಫೈನಲ್ ಫೈಟ್
ಸ್ಪೇನ್‌ನಂತೆ, ಬಂಗಾಳದಲ್ಲಿ ಫುಟ್‌ಬಾಲ್ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಪ್ರತಿ ದಿನ ಫುಟ್ಬಾಲ್ ಕುರಿತ ಚರ್ಚೆಯೂ ನಡೆಯುತ್ತದೆ. ಬಂಗಾಳದಲ್ಲಿ ಫುಟ್ಬಾಲ್ ಅಕಾಡೆಮಿ ತೆರೆಯಲು ಅಗತ್ಯವಿರುವ ಭೂಮಿಯನ್ನು ಪಡೆಯಲು ಯಾವುದೇ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಾ ಲಿಗಾ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಫುಟ್ಬಾಲ್ ಅಕಾಡೆಮಿಯನ್ನು ತೆರೆಯಲು ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಅವರು ಲಾ ಲಿಗಾ ಅಧ್ಯಕ್ಷರಿಗೆ ಭರವಸೆ ನೀಡಿದರು. ಮೆಸ್ಸಿ-ರೊನಾಲ್ಡೊ ಅವರಂತಹ ಫುಟ್ಬಾಲ್ ಆಟಗಾರರು ಬಂಗಾಳದಿಂದ ಹುಟ್ಟಬೇಕು ಎಂದು ಅವರು ಹೇಳಿದ್ದಾರೆ.
ಐದು ವರ್ಷಗಳಲ್ಲಿ ಇದು ಮಮತಾ ಅವರ ಮೊದಲ ವಿದೇಶಿ ಭೇಟಿಯಾಗಿದೆ. ಬಂಗಾಳದ ಕ್ರೀಡಾ ಕ್ಷೇತ್ರವನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಇವರು ಈ ಪ್ರವಾಸದಲ್ಲಿ ಚರ್ಚಿಸಲಿದ್ದಾರೆ. ಲಾ ಲಿಗಾ ವಿಶ್ವದ ಪ್ರಮುಖ ಕ್ಲಬ್ ಫುಟ್‌ಬಾಲ್ ಲೀಗ್‌ಗಳಲ್ಲಿ ಒಂದಾಗಿದೆ. ಲಾ ಲಿಗಾ ಅಧಿಕಾರಿಗಳೊಂದಿಗಿನ ಈ ಸಭೆಗೆ ಬಂಗಾಳದಿಂದ ಸೌರವ್ ಗಂಗೋಪಾಧ್ಯಾಯ ಮತ್ತು ಮೂವರು ಫುಟ್ಬಾಲ್ ಕ್ಲಬ್ ಅಧಿಕಾರಿಗಳು ಕೂಡ ತೆರಳಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:51 pm, Fri, 15 September 23