Asia Cup 2023: ಕೊನೆಯ ಒಂದು ಎಸೆತದಲ್ಲಿ 2 ರನ್: ಶ್ರೀಲಂಕಾ ರೋಚಕ ಜಯ ಸಾಧಿಸಿದ ವಿಡಿಯೋ ನೋಡಿ

Pakistan vs Sri Lanka, Asia Cup Super 4: ಏಷ್ಯಾಕಪ್ 2023 ಸೂಪರ್-4ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿಗೆ ಕೊನೆಯ ಓವರ್​ನಲ್ಲಿ 8 ರನ್ ಬೇಕಾಯಿತು. ಬೌಲಿಂಗ್ ಮಾಡಿದ್ದು ಝಮಾನ್ ಖಾನ್. ಕೊನೆಯ ಎಸೆತದಲ್ಲಿ 2 ರನ್ ಬೇಕಾಗಿದ್ದಾಗ ಚರಿತಾ ಅಸಲಂಕ ವಿನ್ನಿಂಗ್ ಶಾಟ್ ಹೊಡೆದು ರೋಚಕ ಗೆಲುವು ತಂದುಕೊಟ್ಟರು. ಇಲ್ಲಿದೆ ನೋಡಿ ವಿಡಿಯೋ.

Asia Cup 2023: ಕೊನೆಯ ಒಂದು ಎಸೆತದಲ್ಲಿ 2 ರನ್: ಶ್ರೀಲಂಕಾ ರೋಚಕ ಜಯ ಸಾಧಿಸಿದ ವಿಡಿಯೋ ನೋಡಿ
PAK vs SL Final Over
Follow us
Vinay Bhat
|

Updated on: Sep 15, 2023 | 8:15 AM

ಗುರುವಾರ ಏಷ್ಯಾಕಪ್ 2023 ಸೂಪರ್-4ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ (Pakistan vs Sri Lanka) ತಂಡಗಳು ಮುಖಾಮುಖಿ ಆಗಿದ್ದವು. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಶ್ರೀಲಂಕಾ ಎರಡು ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಶನಕಾ ಪಡೆ ಏಷ್ಯಾಕಪ್ 2023 ಫೈನಲ್​ಗೆ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಭಾರತ ವಿರುದ್ಧ ಕಾದಾಡಲಿದೆ. ಮಳೆ ಬಾಧಿತ ಪಂದ್ಯದಲ್ಲಿ ಲಂಕಾಗೆ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಯ ಹಂತದಲ್ಲಿ ದೊಡ್ಡ ಡ್ರಾಮವೇ ನಡೆದು ಹೋಯಿತು.

ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಉಭಯ ತಂಡಗಳಿಗೆ ತಲಾ 42 ಓವರ್ ಅನ್ನು ನಿಗದಿ ಪಡಿಸಲಾಗಿತ್ತು. ಶ್ರೀಲಂಕಾ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 12 ರನ್ ಬೇಕಾಗಿದ್ದವು. 5 ವಿಕೆಟ್ ಕಳೆದುಕೊಂಡಿತ್ತು. 41ನೇ ಓವರ್​ನ ಶಾಹೀನ್ ಶಾ ಅಫ್ರಿದಿ ಬೌಲಿಂಗ್​ನಲ್ಲಿ ಲಂಕಾ 2 ವಿಕೆಟ್ ಕಳೆದುಕೊಳ್ಳುವ ಜೊತೆಗೆ ಕಲೆಹಾಕಿದ್ದು ಕೇವಲ 4 ರನ್. ಹೀಗಾಗಿ ಕೊನೆಯ ಓವರ್​ನಲ್ಲಿ 8 ರನ್ ಬೇಕಾಯಿತು. ಬೌಲಿಂಗ್ ಮಾಡಿದ್ದು ಝಮಾನ್ ಖಾನ್.

ಇದನ್ನೂ ಓದಿ
Image
ಏಷ್ಯಾಕಪ್​ನಲ್ಲಿಂದು ಭಾರತ-ಬಾಂಗ್ಲಾದೇಶ ಮುಖಾಮುಖಿ
Image
Asia Cup 2023: ಭಾರತ vs ಶ್ರೀಲಂಕಾ ನಡುವೆ ಫೈನಲ್ ಫೈಟ್
Image
ಟೀಮ್ ಇಂಡಿಯಾ ಪ್ಲೇಯಿಂಗ್ XI ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ
Image
ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿ ಕನ್ನಡಿಗ, ಟ್ರಾಫಿಕ್ ಪೊಲೀಸ್, ಡ್ರೈವರ್..!

ಶ್ರೀಲಂಕಾ ಕೊನೆಯ ಎಸೆತದಲ್ಲಿ ಜಯ ಸಾಧಿಸಿದ ವಿಡಿಯೋ:

ಮೊದಲ ಎಸೆತದಲ್ಲಿ ಪ್ರಮೋದ್ ಒಂದು ರನ್ ಗಳಿಸಿದರೆ, ಎರಡನೇ ಎಸೆತವನ್ನು ಅಸಲಂಕ ಡಾಟ್ ಮಾಡಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತಷ್ಟೆ. ನಾಲ್ಕನೇ ಎಸೆತದಲ್ಲಿ ಪ್ರಮೋದ್ ರನೌಟ್​ಗೆ ಬಲಿಯಾದರು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ 6 ರನ್ ಬೇಕಾಯಿತು. ಐದನೇ ಎಸೆತದಲ್ಲಿ ಅಸಲಂಕ ಚೆಂಡನ್ನು ಬೌಂಡರಿಗೆ ಅಟ್ಟಿದರು. 6ನೇ ಎಸೆತದಲ್ಲಿ ಎರಡು ರನ್ ಕಲೆಹಾಕುವ ಮೂಲಕ ಲಂಕಾ ರೋಚಕ ಜಯ ಕಂಡಿತು.

Team India: ಬಲಿಷ್ಠ ಬ್ಯಾಟಿಂಗ್ ಪಡೆಗೆ ಬಲ ತುಂಬಿದ ಬೌಲರ್​ಗಳು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 42 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತು. ಶಫಿಕ್ 69 ಎಸೆತಗಳಲ್ಲಿ 52 ರನ್ ಗಳಿಸಿದರು. ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಮೊಹಮ್ಮದ್ ರಿಝ್ವಾನ್ 73 ಎಸೆತಗಳಲ್ಲಿ ಅಜೇಯ 86 ರನ್ ಸಿಡಿಸಿದರು. ಇಫ್ತಿಖರ್ ಅಹ್ಮದ್ 40 ಎಸೆತಗಳಲ್ಲಿ 47 ರನ್ ಗಳಿಸಿದರು. ಶ್ರೀಲಂಕಾ ಪರ ಮಥೀಶಾ ಪಥಿರನಾ 3 ಹಾಗೂ ಪ್ರಮೋದ್ 2 ವಿಕೆಟ್ ಪಡೆದರು.

ಡಕ್ವರ್ತ್ ಲುಯಿಸ್ ನಿಯಮದ ಪ್ರಕಾರ, ಲಂಕಾಕ್ಕೆ ಗೆಲ್ಲಲು 42 ಓವರ್​ಗಳಲ್ಲಿ 252 ರನ್​ಗಳ ಟಾರ್ಗೆಟ್ ನೀಡಲಾಯಿತು. ಉತ್ತಮ ಆರಂಭ ಪಡೆದುಕೊಳ್ಳದಿದ್ದರೂ ಕುಸಲ್ ಮೆಂಡಿಸ್ 87 ಎಸೆತಗಳಲ್ಲಿ 91 ರನ್ ಸಿಡಿಸಿ ತಂಡದ ಜಯಕ್ಕೆ ಹೋರಾಡಿದರು. ಸದೀರಾ ಸಮರವಿಕ್ರಮ 51 ಎಸೆತಗಳಲ್ಲಿ 48 ಬಾರಿಸಿದರು. ಕೊನೆಯ ವರೆಗೂ ಬ್ಯಾಟಿಂಗ್ ಮಾಡಿದ ಚರಿತಾ ಅಸಲಂಕ 47 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಗೆಲುವು ತಂದುಕೊಟ್ಟರು. ಪಾಕ್ ಪರ ಇಫ್ತಿಖರ್ 3 ಹಾಗೂ ಶಾಹೀನ್ ಅಫ್ರಿದಿ 2 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ