Asia cup 2023 PAK vs SL Live Score: ರೋಚಕ ಜಯದೊಂದಿಗೆ ಫೈನಲ್​ಗೆ ಪ್ರವೇಶಿಸಿದ ಶ್ರೀಲಂಕಾ

TV9 Web
| Updated By: ಝಾಹಿರ್ ಯೂಸುಫ್

Updated on:Sep 15, 2023 | 1:17 AM

Asia cup 2023 Pakistan vs Sri Lanka Live Score in Kannada: ಸೂಪರ್ ಫೋರ್ ಹಂತದ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಈಗಾಗಲೇ ಫೈನಲ್​ಗೆ ಪ್ರವೇಶಿಸಿದೆ. ಇದೀಗ ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸುವ ತಂಡದೊಡನೆ ಭಾರತ ಫೈನಲ್ ಆಡಬೇಕಿದೆ. ಇತ್ತ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗುತ್ತಿದ್ದು, ಈ ತಂಡಗಳಲ್ಲಿ ಒಂದರ ವಿರುದ್ಧ ಟೀಮ್ ಇಂಡಿಯಾ ಫೈನಲ್ ಆಡುವುದು ಖಚಿತ.

Asia cup 2023 PAK vs SL Live Score: ರೋಚಕ ಜಯದೊಂದಿಗೆ ಫೈನಲ್​ಗೆ ಪ್ರವೇಶಿಸಿದ ಶ್ರೀಲಂಕಾ
Asia cup 2023 PAK vs SL

ಏಷ್ಯಾಕಪ್​ನ ಸೂಪರ್ ಫೋರ್ ಹಂತದ 5ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಶ್ರೀಲಂಕಾ ತಂಡವು 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಮಳೆಯಿಂದಾಗಿ 42 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 7 ವಿಕೆಟ್ ನಷ್ಟಕ್ಕೆ 252 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು ಅಂತಿಮ ಹಂತದಲ್ಲಿ ದಿಢೀರ್ ಕುಸಿತಕ್ಕೊಳಗಾಯಿತು. ಪರಿಣಾಮ ಕೊನೆಯ ಓವರ್​ನಲ್ಲಿ 8 ರನ್​ಗಳ ಗುರಿ ಪಡೆಯಿತು. ಈ ಹಂತದಲ್ಲಿ ಫೋರ್ ಬಾರಿಸಿದ ಚರಿತ್ ಅಸಲಂಕಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಲ್ಲದೆ ಅಂತಿಮ ಎಸೆತದಲ್ಲಿ 2 ರನ್ ಓಡುವ ಮೂಲಕ ಅಸಲಂಕಾ ಶ್ರೀಲಂಕಾ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಏಷ್ಯಾಕಪ್​ ಫೈನಲ್​ಗೆ ಪ್ರವೇಶಿಸಿದೆ. ಸೆಪ್ಟೆಂಬರ್ 17 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾಗಲಿದೆ.

ಪಾಕಿಸ್ತಾನ್– 252/7 (42)

ಶ್ರೀಲಂಕಾ– 252/8 (42)

ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಝಮಾನ್ ಖಾನ್

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಮತೀಶ ಪತಿರಾಣ.

ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.

ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್, ಝಮಾನ್ ಖಾನ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).

LIVE Cricket Score & Updates

The liveblog has ended.
  • 15 Sep 2023 01:06 AM (IST)

    Asia cup 2023 PAK vs SL Live Score: ಶ್ರೀಲಂಕಾ ತಂಡಕ್ಕೆ ರೋಚಕ ಜಯ

    PAK 252/7 (42)

    SL 252/8 (42)

    ಕೊನೆಯ ಓವರ್​ನಲ್ಲಿ 8 ರನ್​ಗಳ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಜಯ ತಂದುಕೊಟ್ಟ ಚರಿತ್ ಅಸಲಂಕಾ.

    ಅಂತಿಮ ಎಸೆತದಲ್ಲಿ 2 ರನ್ ಗಳಿಸಿ ಪಂದ್ಯ ಗೆದ್ದ ಶ್ರೀಲಂಕಾ. ಈ ಗೆಲುವಿನೊಂದಿಗೆ ಏಷ್ಯಾಕಪ್​ ಫೈನಲ್​ಗೆ ಪ್ರವೇಶಿಸಿದ ಶ್ರೀಲಂಕಾ.

    ಸೆಪ್ಟೆಂಬರ್ 17 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ – ಪಾಕಿಸ್ತಾನ್ ಮುಖಾಮುಖಿ.

     
  • 15 Sep 2023 12:57 AM (IST)

    Asia cup 2023 PAK vs SL Live Score: ಫೈನಲ್ ಓವರ್​ ರೋಚಕತೆ

    ಕೊನೆಯ ಓವರ್​ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 8 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಪ್ರಮೋದ್ ಮಧುಶಂಕ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.

    ಅಂತಿಮ ಓವರ್ ಎಸೆಯಲು ಝಮಾನ್ ಖಾನ್ ಸಜ್ಜು.

    PAK 252/7 (42)

    SL 244/7 (41)

      

  • 15 Sep 2023 12:55 AM (IST)

    Asia cup 2023 PAK vs SL Live Score: ಬ್ಯಾಕ್ ಟು ಬ್ಯಾಕ್ ವಿಕೆಟ್- ಶಾಹೀನ್ ಅಫ್ರಿದಿ

    ಶಾಹೀನ್ ಶಾ ಅಫ್ರಿದಿ ಎಸೆದ 41ನೇ ಓವರ್​ನ 4ನೇ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಧನಂಜಯ ಡಿ ಸಿಲ್ವಾ.

    5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತ ದುನಿತ್ ವೆಲ್ಲಾಲಗೆ

    PAK 252/7 (42)

    SL 243/7 (40.5)

    ಶ್ರೀಲಂಕಾಗೆ 7 ಎಸೆತಗಳಲ್ಲಿ 9 ರನ್​ಗಳ ಅವಶ್ಯಕತೆ

      

  • 15 Sep 2023 12:50 AM (IST)

    Asia cup 2023 PAK vs SL Live Score: ಕೊನೆಯ 2 ಓವರ್​ಗಳು ಬಾಕಿ

    12 ಎಸೆತಗಳಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 12 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಧನಂಜಯ ಡಿ ಸಿಲ್ವಾ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್

    PAK 252/7 (42)

    SL 240/5 (40)

     

  • 15 Sep 2023 12:36 AM (IST)

    Asia cup 2023 PAK vs SL Live Score: ಶ್ರೀಲಂಕಾ ತಂಡದ 5ನೇ ವಿಕೆಟ್ ಪತನ

    ಇಫ್ತಿಕರ್ ಅಹ್ಮದ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ದಸುನ್ ಶಾನಕ.

    4 ಎಸೆತಗಳಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ.

    PAK 252/7 (42)

    SL 222/5 (37.4)

     

     42 ಓವರ್​ಗಳ ಪಂದ್ಯ

  • 15 Sep 2023 12:23 AM (IST)

    Asia cup 2023 PAK vs SL Live Score: ಹ್ಯಾರಿಸ್ ಅದ್ಭುತ ಡೈವಿಂಗ್ ಕ್ಯಾಚ್

    ಇಫ್ತಿಕರ್ ಅಹ್ಮದ್ ಎಸೆತದಲ್ಲಿ ಕುಸಾಲ್ ಮೆಂಡಿಸ್​ ಬ್ಯಾಟ್ ಎಡ್ಜ್​ ಆಗಿ ಗಾಳಿಯಲ್ಲಿ ಚಿಮ್ಮಿದ ಚೆಂಡು…ಫ್ರಂಟ್ ಫೀಲ್ಡರ್ ಹ್ಯಾರಿಸ್ ಅದ್ಭುತ ಡೈವಿಂಗ್ ಕ್ಯಾಚ್…ಔಟ್.

    87 ಎಸೆತಗಳಲ್ಲಿ 91 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಮೆಂಡಿಸ್.

    SL 210/4 (35.1)

     42 ಓವರ್​ಗಳ ಪಂದ್ಯ

  • 15 Sep 2023 12:16 AM (IST)

    Asia cup 2023 PAK vs SL Live Score: ಮೆಂಡಿಸ್ ಅಬ್ಬರ ಶುರು

    ಇಫ್ತಿಕರ್ ಅಹ್ಮದ್ ಎಸೆದ 34ನೇ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.

    ಶ್ರೀಲಂಕಾ ತಂಡಕ್ಕೆ ಗಲ್ಲಲು 48 ಎಸೆತಗಳಲ್ಲಿ 43 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.

    SL 208/3 (34)

     

  • 14 Sep 2023 11:58 PM (IST)

    Asia cup 2023 PAK vs SL Live Score: ಶ್ರೀಲಂಕಾ ತಂಡದ 3ನೇ ವಿಕೆಟ್ ಪತನ

    ಇಫ್ತಿಕರ್ ಅಹ್ಮದ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದ ಸದೀರ ಸಮರ ವಿಕ್ರಮ.

    51 ಎಸೆತಗಳಲ್ಲಿ 48 ರನ್ ಬಾರಿಸಿ ಅರ್ಧಶತಕ ವಂಚಿತರಾಗಿ ಹೊರ ನಡೆದ ಸದೀರ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.

    SL 177/3 (29.4)

     

  • 14 Sep 2023 11:47 PM (IST)

    Asia cup 2023 PAK vs SL Live Score: ಶ್ರೀಲಂಕಾ ತಂಡದ ಉತ್ತಮ ಬ್ಯಾಟಿಂಗ್

    28 ಓವರ್​ಗಳ ಮುಕ್ತಾಯದ ವೇಳೆಗೆ 167 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ (72) ಹಾಗೂ ಸದೀರ ಸಮರ ವಿಕ್ರಮ (41) ಬ್ಯಾಟಿಂಗ್.

    ಶ್ರೀಲಂಕಾ ತಂಡಕ್ಕೆ ಗೆಲ್ಲಲು 84 ಎಸೆತಗಳಲ್ಲಿ 85 ರನ್ ​ಗಳ ಅವಶ್ಯಕತೆ.

    SL 167/2 (28)

     42 ಓವರ್ ​ಗಳ ಪಂದ್ಯ

  • 14 Sep 2023 11:15 PM (IST)

    Asia cup 2023 PAK vs SL Live Score: ಅರ್ಧಶತಕ ಪೂರೈಸಿದ ಕುಸಾಲ್ ಮೆಂಡಿಸ್

    47 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಕುಸಾಲ್ ಮೆಂಡಿಸ್.

    ಶ್ರೀಲಂಕಾಗೆ ಗೆಲ್ಲಲು 120 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್.

    SL 132/2 (21)

     

  • 14 Sep 2023 11:00 PM (IST)

    Asia cup 2023 PAK vs SL Live Score: ಶತಕ ಪೂರೈಸಿದ ಶ್ರೀಲಂಕಾ

    ಶಾದಾಬ್ ಖಾನ್ ಎಸೆತದಲ್ಲಿ ಪಾಯಿಂಟ್ ಫೀಲ್ಡರ್​ ಮೂಲಕ ಫೋರ್ ಬಾರಿಸಿದ ಸದೀರ ಸಮರ ವಿಕ್ರಮ.

    ಈ ಫೋರ್​ನೊಂದಿಗೆ ಶತಕ ಪೂರೈಸಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್.

    SL 102/2 (17.3)

     42 ಓವರ್​ಗಳ ಪಂದ್ಯ

  • 14 Sep 2023 10:46 PM (IST)

    Asia cup 2023 PAK vs SL Live Score: ಶ್ರೀಲಂಕಾ ತಂಡದ 2ನೇ ವಿಕೆಟ್ ಪತನ

    15 ಓವರ್​ ಮುಕ್ತಾಯದ ವೇಳೆ 2 ವಿಕೆಟ್ ಕಳೆದುಕೊಂಡು 89 ರನ್​ ಕಲೆಹಾಕಿದ ಶ್ರೀಲಂಕಾ.

    ಶಾದಾಬ್​ ಖಾನ್ ಎಸೆತದಲ್ಲಿ ಬೌಲರ್​ಗೆ ನೇರವಾಗಿ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.

    44 ಎಸೆತಗಳಲ್ಲಿ 29 ರನ್​ ಗಳಿಸಿ ನಿರ್ಗಮಿಸಿದ ಪಾತುಮ್ ನಿಸ್ಸಂಕಾ.

    SL 89/2 (15)

      42 ಓವರ್​ಗಳ ಪಂದ್ಯ.

  • 14 Sep 2023 10:30 PM (IST)

    Asia cup 2023 PAK vs SL Live Score: ಶ್ರೀಲಂಕಾ ತಂಡದ ಉತ್ತಮ ಆರಂಭ

    10 ಓವರ್​ಗಳು ಮುಕ್ತಾಯದ ವೇಳೆ 62 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.

    ಕುಸಾಲ್ ಪೆರೇರಾರನ್ನು ರನೌಟ್ ಮಾಡಿ ಪಾಕ್​ಗೆ ಮೊದಲ ಯಶಸ್ಸು ತಂದುಕೊಟ್ಟ ಶಾದಾಬ್ ಖಾನ್

    SL 64/1 (10.4)

      42 ಓವರ್​ಗಳ ಪಂದ್ಯ.

  • 14 Sep 2023 09:31 PM (IST)

    Asia cup 2023 PAK vs SL Live Score: ಪಾಕಿಸ್ತಾನ್ ಇನಿಂಗ್ಸ್ ಅಂತ್ಯ

    42 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿದ ಪಾಕಿಸ್ತಾನ್.

    ಪಾಕ್ ಪರ ಮೊಹಮ್ಮದ್ ರಿಝ್ವಾನ್ (86) ಗರಿಷ್ಠ ಸ್ಕೋರರ್.

    PAK 252/7 (42)

      

  • 14 Sep 2023 08:58 PM (IST)

    Asia cup 2023 PAK vs SL Live Score: ಆಕರ್ಷಕ ಫೋರ್ ಬಾರಿಸಿದ ಇಫ್ತಿಕರ್

    ಮಥೀಶ ಪತಿರಾಣ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಇಫ್ತಿಕರ್ ಅಹ್ಮದ್.

    ದ್ವಿಶತಕ ಪೂರೈಸಿದ ಪಾಕಿಸ್ತಾನ್.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್.

    PAK 209/5 (38)

      42 ಓವರ್​ಗಳ ಪಂದ್ಯ

  • 14 Sep 2023 08:49 PM (IST)

    Asia cup 2023 PAK vs SL Live Score: ಪಾಕಿಸ್ತಾನ್ ತಂಡದ ಉತ್ತಮ ಬ್ಯಾಟಿಂಗ್

    36 ಓವರ್​ಗಳ ಮುಕ್ತಾಯದ ವೇಳೆಗೆ 192 ರನ್​ ಕಲೆಹಾಕಿದ ಪಾಕಿಸ್ತಾನ್ ತಂಡ.

    ಕ್ರೀಸ್​ನಲ್ಲಿ 56 ಎಸೆತಗಳಲ್ಲಿ 57 ರನ್ ಬಾರಿಸಿದ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ (23) ಬ್ಯಾಟಿಂಗ್.

    PAK 192/5 (36)

      42 ಓವರ್​ಗಳ ಪಂದ್ಯ.

  • 14 Sep 2023 07:33 PM (IST)

    Asia cup 2023 PAK vs SL Live Score: ಶ್ರೀಲಂಕಾ ತಂಡಕ್ಕೆ 5ನೇ ಯಶಸ್ಸು

    ಮಹೀಶ್ ತೀಕ್ಷಣ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಮೊಹಮ್ಮದ್ ನವಾಝ್.

    12 ಎಸೆತಗಳಲ್ಲಿ 12 ರನ್ ಬಾರಿಸಿ ಹೊರ ನಡೆದ ಎಡಗೈ ದಾಂಡಿಗ ಮೊಹಮ್ಮದ್ ನವಾಝ್.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್.

    PAK 130/5 (27.4)

      45 ಓವರ್​ಗಳ ಪಂದ್ಯ…ಮಳೆಯ ಕಾರಣ ಪಂದ್ಯ ಸ್ಥಗಿತ.

  • 14 Sep 2023 07:12 PM (IST)

    Asia cup 2023 PAK vs SL Live Score: ಪಾಕಿಸ್ತಾನ್ ತಂಡದ 4ನೇ ವಿಕೆಟ್ ಪತನ

    ಮಥೀಶ ಪತಿರಾಣ ಎಸೆತದಲ್ಲಿ ನೇರವಾಗಿ ಬೌಲರ್​ಗೆ ಕ್ಯಾಚ್ ನೀಡಿದ ಮೊಹಮ್ಮದ್ ಹ್ಯಾರಿಸ್.

    9 ಎಸೆತಗಳಲ್ಲಿ ಕೇವಲ 3 ರನ್​ಗಳಿಸಿ ನಿರ್ಗಮಿಸಿದ ಹ್ಯಾರಿಸ್. ಶ್ರೀಲಂಕಾ ತಂಡಕ್ಕೆ 4ನೇ ಯಶಸ್ಸು.

    ಕ್ರೀಸ್​ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಮೊಹಮ್ಮದ್ ನವಾಝ್ ಬ್ಯಾಟಿಂಗ್.

    PAK 108/4 (24)

      

  • 14 Sep 2023 06:59 PM (IST)

    Asia cup 2023 PAK vs SL Live Score: ಪಾಕಿಸ್ತಾನ್ ತಂಡದ 3ನೇ ವಿಕೆಟ್ ಪತನ

    ಮಥೀಶ ಪತಿರಾಣ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಅಬ್ದುಲ್ಲ ಶಫೀಕ್.

    69 ಎಸೆತಗಳಲ್ಲಿ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್.

    PAK 100/3 (21.4)

      45 ಓವರ್ ​ಗಳ ಪಂದ್ಯ

  • 14 Sep 2023 06:54 PM (IST)

    Asia cup 2023 PAK vs SL Live Score: ಶಫೀಕ್ ಭರ್ಜರಿ ಬ್ಯಾಟಿಂಗ್

    ಧನಂಜಯ ಡಿ ಸಿಲ್ವಾ ಎಸೆದ 21ನೇ ಓವರ್​ನ 2ನೇ ಎಸೆತದಲ್ಲಿ ಮುನ್ನುಗ್ಗಿ ಬಂದು ಲಾಂಗ್ ಆನ್​ನತ್ತ ಸಿಕ್ಸ್ ಸಿಡಿಸಿದ ಅಬ್ದುಲ್ಲ ಶಫೀಕ್.

    65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಬ್ದುಲ್ಲ ಶಫೀಕ್.

    ಕ್ರೀಸ್​ನಲ್ಲಿ ರಿಝ್ವಾನ್-ಶಫೀಕ್ ಬ್ಯಾಟಿಂಗ್.

    PAK 95/2 (20.2)

      

  • 14 Sep 2023 06:52 PM (IST)

    Asia cup 2023 PAK vs SL Live Score: 20 ಓವರ್ ಮುಕ್ತಾಯ: ಲಂಕಾ ಉತ್ತಮ ಬೌಲಿಂಗ್

    20 ಓವರ್​ಗಳ ಮುಕ್ತಾಯದ ವೇಳೆಗೆ 88 ರನ್ ಕಲೆಹಾಕಿದ ಪಾಕಿಸ್ತಾನ್.

    ಶ್ರೀಲಂಕಾ ತಂಡಕ್ಕೆ 2 ಯಶಸ್ಸು. ಮೊದಲ ವಿಕೆಟ್ ಪಡೆದ ಪ್ರಮೋದ್ ಮಧುಶಂಕ. 2ನೇ ವಿಕೆಟ್ ದುನಿತ್ ವೆಲ್ಲಾಲಗೆಗೆ.

    ಕ್ರೀಸ್​ನಲ್ಲಿ ಅಬ್ದುಲ್ಲ ಶಫೀಕ್ (43) ಹಾಗೂ ಮೊಹಮ್ಮದ್ ರಿಝ್ವಾನ್ (9) ಬ್ಯಾಟಿಂಗ್.

    PAK 88/2 (20)

     45 ಓವರ್​ಗಳ ಪಂದ್ಯ.

  • 14 Sep 2023 06:36 PM (IST)

    Asia cup 2023 PAK vs SL Live Score: ಪಾಕಿಸ್ತಾನ್ ತಂಡದ 2ನೇ ವಿಕೆಟ್ ಪತನ

    ದುನಿಲ್ ವೆಲ್ಲಾಲಗೆ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರ ನಡೆದ ಬಾಬರ್ ಆಝಂ.

    35 ಎಸೆತಗಳಲ್ಲಿ 29 ರನ್ ಬಾರಿಸಿದ ವಿಕೆಟ್ ಒಪ್ಪಿಸಿದ ಪಾಕ್ ತಂಡದ ನಾಯಕ ಬಾಬರ್.

    ಕ್ರೀಸ್​ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.

    PAK 73/2 (16)

      45 ಓವರ್​ಗಳ ಪಂದ್ಯ

  • 14 Sep 2023 06:21 PM (IST)

    Asia cup 2023 PAK vs SL Live Score: ಅರ್ಧಶತಕದ ಜೊತೆಯಾಟ

    ಮಥೀಶ ಪತಿರಾಣ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್

    53 ಎಸೆತಗಳಲ್ಲಿ ಅರ್ಧ ಶತಕದ ಜೊತೆಯಾಟವಾಡಿದ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್.

    ಪಾಕ್ ಬ್ಯಾಟರ್​ಗಳಿಂದ ಉತ್ತಮ ಪ್ರದರ್ಶನ.

    PAK 63/1 (13.2)

    45 ಓವರ್​ ಗಳ ಪಂದ್ಯ.

      

  • 14 Sep 2023 06:10 PM (IST)

    Asia cup 2023 PAK vs SL Live Score: ಭರ್ಜರಿ ಹೊಡೆತ: ಸಿಕ್ಸರ್ ಶಫೀಕ್

    ದುನಿತ್ ವೆಲ್ಲಾಲಗೆ ಎಸೆದ 11ನೇ ಓವರ್​ನ 3ನೇ ಎಸೆತದಲ್ಲಿ ಮುನ್ನುಗ್ಗಿ ಬಂದು ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಬ್ದುಲ್ಲ ಶಫೀಕ್.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 48/1 (11)

    45 ಓವರ್​ಗಳ ಪಂದ್ಯ

  • 14 Sep 2023 06:05 PM (IST)

    Asia cup 2023 PAK vs SL Live Score: 10 ಓವರ್​ಗಳು ಮುಕ್ತಾಯ

    10 ಓವರ್ ​ಗಳಲ್ಲಿ 40 ರನ್​ ಕಲೆಹಾಕಿದ ಪಾಕಿಸ್ತಾನ್ ತಂಡ.

    ಕ್ರೀಸ್​ ನಲ್ಲಿ ಬಾಬರ್ ಆಝಂ (18) ಹಾಗೂ ಅಬ್ದುಲ್ಲ ಶಫೀಕ್ (16) ಬ್ಯಾಟಿಂಗ್.

    ಒಂದು ವಿಕೆಟ್ ಪಡೆದ ಶ್ರೀಲಂಕಾ ವೇಗಿ ಪ್ರಮೋದ್ ಮಧುಶನ್.

    PAK 40/1 (10)

    ಇದು 45 ಓವರ್​ಗಳ ಪಂದ್ಯ.

      

  • 14 Sep 2023 05:55 PM (IST)

    Asia cup 2023 PAK vs SL Live Score: ಬ್ಯೂಟಿಫುಲ್ ಬೌಂಡರಿ ಬಾರಿಸಿದ ಬಾಬರ್

    ದಸುನ್ ಶಾನಕ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಬಾಬರ್ ಆಝಂ.

    ಕ್ರೀಸ್​ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಬಾಬರ್ ಆಝಂ ಬ್ಯಾಟಿಂಗ್.

    ಮಧುಶಂಕ ಓವರ್ ​ನಲ್ಲಿ ವಿಕೆಟ್ ಒಪ್ಪಿಸಿದ ಫಖರ್ ಝಮಾನ್.

    PAK 33/1 (7.4)

      

  • 14 Sep 2023 05:36 PM (IST)

    Asia cup 2023 PAK vs SL Live Score: ಪಾಕಿಸ್ತಾನ್ ತಂಡದ ಮೊದಲ ವಿಕೆಟ್ ಪತನ

    ಪ್ರಮೋದ್ ಮಧುಶನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಫಖರ್ ಝಮಾನ್.

    11 ಎಸೆತಗಳಲ್ಲಿ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ಫಖರ್ ಝಮಾನ್.

    ಕ್ರೀಸ್​ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಬಾಬರ್ ಆಝಂ ಬ್ಯಾಟಿಂಗ್

    PAK 9/1 (4.2)

      

  • 14 Sep 2023 05:10 PM (IST)

    Asia cup 2023 PAK vs SL Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

    ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಮತೀಥ ಪತಿರಾಣ.

  • 14 Sep 2023 05:08 PM (IST)

    Asia cup 2023 PAK vs SL Live Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್

    ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಝಮಾನ್ ಖಾನ್

  • 14 Sep 2023 05:08 PM (IST)

    Asia cup 2023 PAK vs SL Live Score: ಟಾಸ್ ಗೆದ್ದ ಪಾಕಿಸ್ತಾನ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • 14 Sep 2023 04:55 PM (IST)

    Asia cup 2023 PAK vs SL Live Score: ಶೀಘ್ರದಲ್ಲೇ ಪಾಕ್-ಲಂಕಾ ಪಂದ್ಯ ಶುರು

    ಸಂಜೆ 5 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 5.15 ರಿಂದ ಮ್ಯಾಚ್ ಆರಂಭವಾಗಲಿದೆ.

    ಇನ್ನು ಮಳೆಯಿಂದ ತಡವಾಗಿರುವ ಕಾರಣ 45 ಓವರ್​ಗಳ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

  • 14 Sep 2023 04:16 PM (IST)

    Asia cup 2023 PAK vs SL Live Score: ನಿರಂತರ ಮಳೆ: ಪಂದ್ಯದ ಮೇಲೆ ಕಾರ್ಮೋಡ

    ಕೊಲಂಬೊದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವಣ ಪಂದ್ಯ ಆರಂಭವಾಗುವುದು ಮತ್ತಷ್ಟು ತಡವಾಗಲಿದೆ. ಸಂಜೆ  4.30 ರಿಂದ ಓವರ್​ ಕಡಿತ ಪ್ರಾರಂಭವಾಗಲಿದ್ದು, ಹೀಗಾಗಿ 50 ಓವರ್​ಗಳ ಮ್ಯಾಚ್ ನಡೆಯುವುದು ಅನುಮಾನ.

    ಇನ್ನು ಕಟ್​ ಆಫ್ ಟೈಮ್ ರಾತ್ರಿ 9.02 ಗಂಟೆ. ಈ ವೇಳೆಗೆ ಪಂದ್ಯ ಆಯೋಜಿಸಲು ಮೈದಾನ ಸೂಕ್ತವಾಗಿದ್ದರೆ ಮಾತ್ರ 20 ಓವರ್​ಗಳ ಮ್ಯಾಚ್ ನಡೆಯಲಿದೆ.

  • 14 Sep 2023 02:32 PM (IST)

    Asia cup 2023 PAK vs SL Live Score: ಪಾಕ್ – ಲಂಕಾ ಪಂದ್ಯಕ್ಕೆ ಮಳೆ ಭೀತಿ

    ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಪ್ರೇಮದಾಸ ಮೈದಾನವನ್ನು ಟರ್ಪಲ್​ಗಳಿಂದ ಕವರ್​ ಮಾಡಲಾಗಿದೆ. ಹೀಗಾಗಿ ಇಂದಿನ ಪಂದ್ಯ ತಡವಾಗಿ ಶುರುವಾಗಲಿದೆ.  ಒಂದು ವೇಳೆ ಈ ಪಂದ್ಯವು ಮಳೆಯಿಂದ ರದ್ದಾದರೆ ಶ್ರೀಲಂಕಾ ತಂಡವು ಫೈನಲ್​ಗೆ ಅರ್ಹತೆ ಪಡೆಯಲಿದೆ.

  • 14 Sep 2023 02:28 PM (IST)

    Asia cup 2023 PAK vs SL Live Score: ಮಾಡು ಇಲ್ಲವೇ ಮಡಿ ಪಂದ್ಯ

    ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್​ಗೆ ಎಂಟ್ರಿಯಾಗಲಿದೆ. ಹೀಗಾಗಿ ಕೊಲಂಬೊ ಮೈದಾನದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

  • Published On - Sep 14,2023 2:26 PM

    Follow us
    ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
    ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
    ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
    ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
    ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
    ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
    ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
    ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
    ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
    ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
    ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
    ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
    ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
    ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
    ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
    ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
    ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
    ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
    ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
    ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ