- Kannada News Photo gallery Cricket photos Happy Birthday Suryakumar Yadav Mumbai Indians batters top records and love story with wife Devisha Shetty
Suryakumar Yadav: ಸೂರ್ಯಕುಮಾರ್ ಯಾದವ್ಗೆ ಹುಟ್ಟುಹಬ್ಬದ ಸಂಭ್ರಮ: ಮಂಗಳೂರಿನ ಹುಡುಗಿಗೆ ಪ್ರಪೋಸ್ ಮಾಡಿದ್ದರು ಸ್ಕೈ
Happy Birthday Suryakumar Yadav: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ಹುಟ್ಟುಹಬ್ಬದ ಸಂಭ್ರಮ. 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸೂರ್ಯನಿಗೆ ಶುಭಾಶಯಗಳ ಮಹಾಪೂರನೇ ಹರಿದುಬರುತ್ತಿದೆ. ಇಲ್ಲಿದೆ ನೋಡಿ ಸೂರ್ಯನ ಕೆಲ ಕುತೂಹಲಕಾರಿ ಮಾಹಿತಿ.
Updated on: Sep 14, 2023 | 11:29 AM

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಸೂರ್ಯಕುಮಾರ್ ಯಾದವ್ ಇಂದು (ಸೆ. 14) ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಿ20ಐ ಕ್ರಿಕೆಟ್ನಲ್ಲಿ ನಂಬರ್ ಒನ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರನೇ ಹರಿದುಬರುತ್ತಿದೆ. ಇಲ್ಲಿದೆ ನೋಡಿ ಸೂರ್ಯನ ಕೆಲ ಕುತೂಹಲಕಾರಿ ಮಾಹಿತಿ.

ಸೂರ್ಯಕುಮಾರ್ ಯಾದವ್ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ 200-ಪ್ಲಸ್ ಸ್ಟ್ರೈಕ್ ರೇಟ್‌ನೊಂದಿಗೆ ನಾಲ್ಕು ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. ಅವರು ಮುಂಬೈ ಇಂಡಿಯನ್ಸ್‌ಗಾಗಿ 2023 ರಲ್ಲಿ ಈ ಸಾಧನೆ ಮಾಡಿದ್ದರು.

ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಪಿಎಲ್ 2023 ರ ಸೀಸನ್‌ನಲ್ಲಿ 180 ಪ್ಲಸ್ ಸ್ಟ್ರೈಕ್ ರೇಟ್‌ನೊಂದಿಗೆ 600 ಪ್ಲಸ್ ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಓಪನರ್ ಆಗಿ ಅಲ್ಲದೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2022 ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ T20I ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 'SKY' ಅತ್ಯುತ್ತಮ 117 ರನ್ ಗಳಿಸಿದ್ದರು.

ಸೂರ್ಯಕುಮಾರ್ ಯಾದವ್ 2022 ರ ಒಂದು ವರ್ಷದಲ್ಲಿ 1,000 ಪ್ಲಸ್ ಅಂತರರಾಷ್ಟ್ರೀಯ ಟಿ20 ರನ್‌ಗಳನ್ನು ಗಳಿಸಿದ ಏಕೈಕ ಭಾರತೀಯರಾಗಿದ್ದಾರೆ. ಅವರು ಒಂದು ವರ್ಷದಲ್ಲಿ ಹೆಚ್ಚಿನ ಟಿ20 ಅಂತರರಾಷ್ಟ್ರೀಯ ಸಿಕ್ಸರ್‌ಗಳನ್ನು ಸಹ ಸಿಡಿಸಿದ್ದಾರೆ. ಒಟ್ಟು 68 ಸಿಕ್ಸರ್ ಬಾರಿಸಿದ್ದಾರೆ.

ಸೂರ್ಯ ಲವ್ಸ್ಟೋರಿ ವಿಚಾರಕ್ಕೆ ಬಂದರೆ, ಇವರು ಜುಲೈ 2016 ರಲ್ಲಿ ದೇವಿಶಾ ಶೆಟ್ಟಿ ಅವರನ್ನು ವಿವಾಹವಾದರು. ವಿಶೇಷ ಎಂದರೆ ಇಬ್ಬರೂ ಕಾಲೇಜಿನಲ್ಲಿ ಪ್ರೇಮಿಗಳಾಗಿದ್ದು, ಸೂರ್ಯ ಇವರಿಗೆ ಪ್ರಪೋಸ್ ಮಾಡಿದ್ದರಂತೆ. ಆ ಬಳಿಕ ತನ್ನ ಪ್ರೇಯಸಿಯನ್ನೇ ವಿವಾಹವಾಗಿ ಸೂರ್ಯಕುಮಾರ್ ದಾಂಪತ್ಯ ಜೀವನವನ್ನು ಆರಂಭಿಸಿದ್ದರು. ದೇವಿಶಾ ಮೂಲತಃ ಮಂಗಳೂರಿನವರಾಗಿದ್ದಾರೆ.
























