- TV9 Kannada Kannada News Photos Cricket Photos Virat Kohli completes 300 wins in international cricket
ಗೆದ್ದ ಟೀಮ್ ಇಂಡಿಯಾ: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Virat Kohli Records: ವಿಶೆಷ ಎಂದರೆ ಈ ಪಟ್ಟಿಯಲ್ಲಿರುವುದು ಇಬ್ಬರೇ ಇಬ್ಬರು ಭಾರತೀಯರು. ಅದರಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರು. ವಿರಾಟ್ ಕೊಹ್ಲಿಗೂ ಮುಂಚಿತವಾಗಿ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಪಂದ್ಯಗಳಲ್ಲಿ ಜಯದ ಭಾಗವಾಗಿದ್ದರು.
Updated on: Sep 13, 2023 | 6:57 PM

ಈ ಬಾರಿಯ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಆಡಿದ 3 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ. ಭಾರತ ತಂಡದ ಈ ಮೂರು ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ.

ಅಂದರೆ ಶ್ರೀಲಂಕಾ ವಿರುದ್ಧದ ಜಯವು ವಿರಾಟ್ ಕೊಹ್ಲಿ ಪಾಲಿನ 300ನೇ ಗೆಲುವಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಿದ ವಿಶ್ವದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಕಿಂಗ್ ಕೊಹ್ಲಿ ಕೂಡ ಸೇರ್ಪಡೆಯಾಗಿದ್ದಾರೆ.

ವಿಶೆಷ ಎಂದರೆ ಈ ಪಟ್ಟಿಯಲ್ಲಿರುವುದು ಇಬ್ಬರೇ ಇಬ್ಬರು ಭಾರತೀಯರು. ಅದರಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರು. ವಿರಾಟ್ ಕೊಹ್ಲಿಗೂ ಮುಂಚಿತವಾಗಿ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಪಂದ್ಯಗಳಲ್ಲಿ ಜಯದ ಭಾಗವಾಗಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 664 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 307 ಪಂದ್ಯಗಳನ್ನು ಗೆದ್ದಿದ್ದಾರೆ. ಇದೀಗ ಈ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ ಕಿಂಗ್ ಕೊಹ್ಲಿ.

ಏಕೆಂದರೆ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 505 ಪಂದ್ಯಗಳನ್ನು ಆಡಿದ್ದು, ಈ ವೇಳೆ ಭಾರತ ತಂಡವು 300 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ 300 ವಿಜಯಗಳ ಭಾಗವಾಗಿರುವ ವಿಶ್ವದ 6ನೇ ಆಟಗಾರ ಎಂಬ ವಿಶ್ವ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 8 ಬಾರಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಕಿಂಗ್ ಕೊಹ್ಲಿ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಪಾಂಟಿಂಗ್ 560 ಇಂಟರ್ನ್ಯಾಷನಲ್ ಮ್ಯಾಚ್ಗಳನ್ನು ಆಡಿದ್ದು, ಈ ವೇಳೆ 377 ಗೆದ್ದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300+ ಪಂದ್ಯಗಳನ್ನು ಗೆದ್ದ ಆಟಗಾರರ ಪಟ್ಟಿ ಹೀಗಿದೆ- ರಿಕಿ ಪಾಂಟಿಂಗ್ (377), ಮಹೇಲಾ ಜಯವರ್ಧನೆ (336), ಸಚಿನ್ ತೆಂಡೂಲ್ಕರ್ (307), ಜಾಕ್ಸ್ ಕಾಲಿಸ್ (305), ಕುಮಾರ ಸಂಗಕ್ಕಾರ (305), ವಿರಾಟ್ ಕೊಹ್ಲಿ (300).

TV9 Kannada
Read More