ತನ್ನದೇ ತಂಡದ ಆಟಗಾರನಿಗೆ ಬೈದಾ ಬಾಬರ್ ಅಜಮ್: ಕಣ್ಣೀರಿಟ್ಟ ಪಾಕ್ ಆಟಗಾರರು
Pakistan Cricketers Crying, PAK vs SL Asia Cup: ಏಷ್ಯಾಕಪ್ ಸೂಪರ್ 4 ಪಂದ್ಯದ ಶ್ರೀಲಂಕಾದ ಬ್ಯಾಟಿಂಗ್ ಇನ್ನಿಂಗ್ಸ್‌ನ ಸಮಯದಲ್ಲಿ, ಪಾಕಿಸ್ತಾನವು ಅನೇಕ ಕ್ಯಾಚ್‌ಗಳನ್ನು ಕೈಬಿಟ್ಟಿತು. ಇದು ಬಾಬರ್ ಅಜಮ್ಗೆ ಸಿಟ್ಟು ತರಿಸಿ ಮೈದಾನದಲ್ಲೇ ಆಟಗಾರನ ಮೇಲೆ ರೇಗಾಡಿದರು. ಸೋತ ಬಳಿಕ ಪಾಕಿಸ್ತಾನದ ಕೆಲ ಆಟಗಾರರು ಕಣ್ಣೀರಿಟ್ಟ ಘಟನೆ ಕೂಡ ನಡೆಯಿತು.
ಏಷ್ಯಾಕಪ್ 2023 ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದಿದೆ. ಗುರುವಾರ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ (Pakistan vs Sri Lanka) ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಎರಡು ವಿಕೆಟ್ಗಳ ಆಘಾತಕಾರಿ ಸೋಲು ಅನುಭವಿಸಿತು. ಸೂಪರ್-4 ನಲ್ಲಿ ಭಾರತ ವಿರುದ್ಧ ಸೋಲು ಅನುಭವಿಸಿದ ಬಳಿಕ ಬಾಬರ್ ಪಡೆಗೆ ಲಂಕಾ ವಿರುದ್ಧದ ಪಂದ್ಯ ಗೆಲ್ಲಲೇ ಬೇಕಿತ್ತು. ಆದರೆ, ಅಂತಿಮ ಹಂತದಲ್ಲಿ ಫೀಲ್ಡಿಂಗ್ನಲ್ಲಿ ಮಾಡಿದ ಎಡವಟ್ಟು ಸೋಲಿಗೆ ಪ್ರಮುಖ ಕಾರಣವಾಯಿತು.
ಈ ಪಂದ್ಯದಲ್ಲಿ, ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಹೊರತುಪಡಿಸಿ ಇತರೆ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಬೌಲರ್‌ಗಳು ಸಹ ನಿರಾಶಾದಾಯಕ ಪ್ರದರ್ಶನವನ್ನು ತೋರಿದರು. ಇದರ ಜೊತೆಗೆ ಕಳಪೆ ಫೀಲ್ಡಿಂಗ್ ಕೂಡ ತಂಡ ಸೋಲಲು ಕಾರಣವಾಯಿತು. ಶ್ರೀಲಂಕಾದ ಬ್ಯಾಟಿಂಗ್ ಇನ್ನಿಂಗ್ಸ್‌ನ ಸಮಯದಲ್ಲಿ, ಪಾಕಿಸ್ತಾನವು ಅನೇಕ ಕ್ಯಾಚ್‌ಗಳನ್ನು ಕೈಬಿಟ್ಟಿತು ಮತ್ತು ಓವರ್‌ಥ್ರೋಗಳಲ್ಲಿ ಕೆಲವು ರನ್‌ಗಳನ್ನು ನೀಡಿತು. ಇದು ನಾಯಕನಿಗೆ ಸಿಟ್ಟು ತರಿಸಿ ಮೈದಾನದಲ್ಲೇ ಆಟಗಾರನ ಮೇಲೆ ರೇಗಾಡಿದರು.
ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿ ಕನ್ನಡಿಗ, ಟ್ರಾಫಿಕ್ ಪೊಲೀಸ್, ಡ್ರೈವರ್..!
ಇಲ್ಲಿದೆ ನೋಡಿ ಬಾಬರ್ ಅಜಮ್ ಕೋಪಗೊಂಡ ವಿಡಿಯೋ:
— No-No-Crix (@Hanji_CricDekho) September 14, 2023
ಶ್ರೀಲಂಕಾ ಗೆಲುವಿಗೆ ಕೊನೆಯ ಓವರ್ನಲ್ಲಿ 8 ರನ್ ಬೇಕಾಯಿತು. ಬೌಲಿಂಗ್ ಮಾಡಿದ್ದು ಝಮಾನ್ ಖಾನ್. ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಅದನ್ನೂ ತಡೆಯಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ಸುಲಭವಾಗಿ ಡಬಲ್ ತೆಗೆದುಕೊಂಡು ಲಂಕಾ ಜಯ ಸಾಧಿಸಿತು. ಈ ಸಂದರ್ಭ ಪಾಕಿಸ್ತಾನ ಆಟಗಾರರು ಬೇಸರಗೊಂಡರು. ಕೆಲ ಪ್ಲೇಯರ್ಸ್ ಮೈದಾನದಲ್ಲೇ ಕಣ್ಣೀರಿಟ್ಟರು.
ಸೋತ ನಂತರ ಬೇಸರಗೊಂಡ ಪಾಕಿಸ್ತಾನ ಆಟಗಾರರು:
We Lost a Match but found a Star 🌟 ZAMAN khan. Well Played Boys. Better Luck Next time#PAKvsSL #ZamanKhan #AsiaCup23 #BBNaija #Iphone15 #Pakistan #BabarAzam #SLvsPak pic.twitter.com/oDfRjZAjNf
— Аrмаап кнап ІҮІ (@veerkhan99) September 14, 2023
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 42 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತು. ಶಫಿಕ್ 69 ಎಸೆತಗಳಲ್ಲಿ 52 ರನ್ ಗಳಿಸಿದರು. ರಿಝ್ವಾನ್ 73 ಎಸೆತಗಳಲ್ಲಿ ಅಜೇಯ 86 ರನ್ ಸಿಡಿಸಿದರು. ಡಕ್ವರ್ತ್ ಲುಯಿಸ್ ನಿಯಮದ ಪ್ರಕಾರ, ಲಂಕಾಕ್ಕೆ ಗೆಲ್ಲಲು 42 ಓವರ್ಗಳಲ್ಲಿ 252 ರನ್ಗಳ ಟಾರ್ಗೆಟ್ ನೀಡಲಾಯಿತು. ಕುಸಲ್ ಮೆಂಡಿಸ್ 87 ಎಸೆತಗಳಲ್ಲಿ 91 ರನ್ ಸಿಡಿಸಿ ತಂಡದ ಜಯಕ್ಕೆ ಹೋರಾಡಿದರು. ಸದೀರಾ 51 ಎಸೆತಗಳಲ್ಲಿ 48 ಬಾರಿಸಿದರು. ಕೊನೆಯ ವರೆಗೂ ಬ್ಯಾಟಿಂಗ್ ಮಾಡಿದ ಚರಿತಾ ಅಸಲಂಕ 47 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಗೆಲುವು ತಂದುಕೊಟ್ಟರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ