ವ್ಯಾಪಾರ ಸಮ್ಮೇಳನಗಳಲ್ಲಿ ಭಾಗವಹಿಸಲು ದುಬೈ ಮತ್ತು ಸ್ಪೇನ್‌ಗೆ 11 ದಿನಗಳ ಪ್ರವಾಸ ಹೊರಟ ಮಮತಾ ಬ್ಯಾನರ್ಜಿ
ನಾಳೆ (ಬುಧವಾರ) ಸ್ಪೇನ್‌ನ ಮ್ಯಾಡ್ರಿಡ್‌ಗೆ ತೆರಳುವ ಮುನ್ನ ಮಮತಾ ಅವರು ಸಂಪರ್ಕ ವಿಮಾನಗಳ ಅಲಭ್ಯತೆಯಿಂದಾಗಿ ದುಬೈನಲ್ಲಿ ರಾತ್ರಿ ಕಳೆಯಲಿದ್ದಾರೆ. ನಾವು ವಿದೇಶಕ್ಕೆ ಹೋಗಿ ಐದು ವರ್ಷಗಳಾಗಿವೆ. ಸ್ಪೇನ್ ಈ ವರ್ಷದ ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದ ಥೀಮ್ ದೇಶವಾಗಿತ್ತು. ಅವರು ಉತ್ಪಾದನೆ ಮತ್ತು ಇತರ ಕೈಗಾರಿಕೆಗಳಲ್ಲಿ ಉತ್ತಮರಾಗಿದ್ದಾರೆ. ನಾವು ಅಲ್ಲಿ ವ್ಯಾಪಾರ ಸಮ್ಮೇಳನಗಳಲ್ಲಿ ಭಾಗವಹಿಸುತ್ತೇವೆ ಎಂದು ಮಮತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ದೆಹಲಿ ಸೆಪ್ಟೆಂಬರ್ 12: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು (Mamata Banerjee) ಪ್ರಯಾಣಿಸಬೇಕಿದ್ದ ದುಬೈ (Dubai) ವಿಮಾನವು ತಾಂತ್ರಿಕ ದೋಷದಿಂದಾಗಿ ಸುಮಾರು ಮೂರು ಗಂಟೆಗಳ ಕಾಲ ವಿಳಂಬವಾಗಿದೆ ಎಂದು ಮಂಗಳವಾರ (ಸೆಪ್ಟೆಂಬರ್ 12) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಮತಾ ಅವರು ತಮ್ಮ ತಂಡದೊಂದಿಗೆ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೇನ್ ಮತ್ತು ದುಬೈಗೆ 11 ದಿನಗಳ ಪ್ರವಾಸಕ್ಕಾಗಿ ಇಂದು (ಮಂಗಳವಾರ) ಬೆಳಿಗ್ಗೆ 8.30 ಕ್ಕೆ ಹೊರಡಬೇಕಿತ್ತು. ಆದರೆ ವಿಮಾನ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ಮಮತಾ ಬ್ಯಾನರ್ಜಿ ವ್ಯಾಪಾರ ಶೃಂಗಸಭೆಗಳಲ್ಲಿ ಭಾಗವಹಿಸುತ್ತಾರೆ.
“ತಾಂತ್ರಿಕ ದೋಷಗಳಿಂದ ಆಕೆಯ ವಿಮಾನ ಕನಿಷ್ಠ ಮೂರು ಗಂಟೆಗಳ ಕಾಲ ವಿಳಂಬವಾಗಿದೆ” ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಮಮತಾ ಮತ್ತು ಅವರ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಬೇಕಿದ್ದ ವಿಮಾನ ದುಬೈನಿಂದ ತಡವಾಗಿ ಆಗಮಿಸಿತು ಎಂದು ಹಿರಿಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಳೆ (ಬುಧವಾರ) ಸ್ಪೇನ್‌ನ ಮ್ಯಾಡ್ರಿಡ್‌ಗೆ ತೆರಳುವ ಮುನ್ನ ಮಮತಾ ಅವರು ಸಂಪರ್ಕ ವಿಮಾನಗಳ ಅಲಭ್ಯತೆಯಿಂದಾಗಿ ದುಬೈನಲ್ಲಿ ರಾತ್ರಿ ಕಳೆಯಲಿದ್ದಾರೆ. ನಾವು ವಿದೇಶಕ್ಕೆ ಹೋಗಿ ಐದು ವರ್ಷಗಳಾಗಿವೆ. ಸ್ಪೇನ್ ಈ ವರ್ಷದ ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದ ಥೀಮ್ ದೇಶವಾಗಿತ್ತು. ಅವರು ಉತ್ಪಾದನೆ ಮತ್ತು ಇತರ ಕೈಗಾರಿಕೆಗಳಲ್ಲಿ ಉತ್ತಮರಾಗಿದ್ದಾರೆ. ನಾವು ಅಲ್ಲಿ ವ್ಯಾಪಾರ ಸಮ್ಮೇಳನಗಳಲ್ಲಿ ಭಾಗವಹಿಸುತ್ತೇವೆ ಎಂದು ಮಮತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ವಿದೇಶಿ ಪ್ರತಿನಿಧಿಗಳು ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ಆದರೆ ನಾವು ಹೋಗುವುದಿಲ್ಲ. ಅದಕ್ಕಾಗಿಯೇ ನಾವು ಈಗ ಹೋಗುತ್ತಿದ್ದೇವೆ. ದುಬೈನಲ್ಲಿ ವ್ಯಾಪಾರ ಸಮ್ಮೇಳನವನ್ನು ಸಹ ನಿಗದಿಪಡಿಸಲಾಗಿದೆ. ನಾನು ಕಾಲಕಾಲಕ್ಕೆ ನಿಮಗೆ ತಿಳಿಸುತ್ತೇನೆ ಎಂದು ಮಮತಾ ಹೇಳಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮ್ಯಾಡ್ರಿಡ್‌ನಲ್ಲಿ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ.
ನಾವು ಮೂರು ದಿನಗಳ ಕಾಲ ಮ್ಯಾಡ್ರಿಡ್‌ನಲ್ಲಿ ಇರುತ್ತೇವೆ, ಈ ಸಮಯದಲ್ಲಿ ನಾವು ವ್ಯಾಪಾರ ಶೃಂಗಸಭೆಯಲ್ಲಿ ಭಾಗವಹಿಸುತ್ತೇವೆ ಮತ್ತು ಅನಿವಾಸಿ ಬೆಂಗಾಲಿಗಳನ್ನು ಭೇಟಿ ಮಾಡುತ್ತೇವೆ. ಅಲ್ಲಿಂದ ನಾವು ರೈಲಿನಲ್ಲಿ ಬಾರ್ಸಿಲೋನಾಗೆ ಹೋಗುತ್ತೇವೆ. ಅಲ್ಲಿ ನಾವು ಬೆಂಗಾಲ್ ಗ್ಲೋಬಲ್‌ಗಾಗಿ ಎರಡು ದಿನಗಳ ವ್ಯಾಪಾರ ಶೃಂಗಸಭೆ (ಬಿಜಿಬಿಎಸ್)ಯ್ಲ್ಲಿ ಭಾಗವಹಿಸುತ್ತೇವೆ ಎಂದು ನಬನ್ನಾದಲ್ಲಿ ಮಾತನಾಡಿದ ಮಮತಾ ಹೇಳಿದ್ದಾರೆ.
ಐದು ವರ್ಷಗಳಲ್ಲಿ ಇದು ಅವರ ಮೊದಲ ವಿದೇಶಿ ಭೇಟಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಏಕೆಂದರೆ ಕೇಂದ್ರವು “ಈ ಹಿಂದೆ ಅವರಿಗೆ ಅಗತ್ಯ ಅನುಮತಿಯನ್ನು ನೀಡಿರಲಿಲ್ಲ. ಮಮತಾ ಅವರು ದುಬೈಗೆ ಹಿಂತಿರುಗಿ ಅಲ್ಲಿ ಬಿಜಿಬಿಎಸ್ ಮತ್ತು ಇತರ ಕೆಲವು ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬಂಗಾಲಿಯಲ್ಲಿ ಹುಟ್ಟುಹಬ್ಬಕ್ಕೆ ಶುಭಕೋರುವ ಹಾಡು ರಚಿಸುತ್ತಿದ್ದಾರೆ ಮಮತಾ ಬ್ಯಾನರ್ಜಿ, ದುರ್ಗಾ ಪೂಜೆ ವೇಳೆಗೆ ಬಿಡುಗಡೆ
“ನಾವು ಸೆಪ್ಟೆಂಬರ್ 23 ರಂದು ಕೋಲ್ಕತ್ತಾಗೆ ಹಿಂದಿರುಗುವ ಮೊದಲು ನಾವು ಒಂದೂವರೆ ದಿನಗಳ ಕಾಲ ದುಬೈನಲ್ಲಿ ಇರುತ್ತೇವೆ” ಎಂದು ಅವರು ಹೇಳಿದರು.
ಹಲವಾರು ವಿಶ್ವ-ಪ್ರಸಿದ್ಧ ಫುಟ್‌ಬಾಲ್ ಕ್ಲಬ್‌ಗಳ ತವರು ಎಂದು ಕರೆಯಲ್ಪಡುವ ಬಾರ್ಸಿಲೋನಾದಲ್ಲಿ ತಂಗಿರುವ ಸಮಯದಲ್ಲಿ ಅ ಫುಟ್‌ಬಾಲ್ ಕ್ಲಬ್‌ನ ಪದಾಧಿಕಾರಿಯನ್ನು ಭೇಟಿಯಾಗುತ್ತಾರೆಯೇ ಎಂದು ಕೇಳಿದಾಗ ನಾನು ಅಲ್ಲಿಗೆ ಹೋಗುತ್ತಿರುವಾಗ, ನಾನು ಬಂಗಾಳಕ್ಕಾಗಿ ಏನನ್ನಾದರೂ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.ಅಂದಹಾಗೆ ಬಾರ್ಸಿಲೋನಾದಲ್ಲಿ ಇರುವಾಗ ಲಾ ಲಿಗಾ ಅಧ್ಯಕ್ಷ ಜೇವಿಯರ್ ಟೆಬಾಸ್ ಅವರನ್ನು ಬ್ಯಾನರ್ಜಿ ಭೇಟಿಯಾಗಬಹುದು ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ