ಟ್ರಾವೆಲ್ ಏಜೆಂಟ್ನಿಂದ ಮೋಸ, ಮಲೇಷ್ಯಾದಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ಯುವಕ ಆತ್ಮಹತ್ಯೆ
ಯುವಕನ್ನು ವಿದೇಶದಿಂದ ಗಡೀಪಾರು ಮಾಡಲಾಯಿತು. ಇದರಿಂದಾಗಿ ನೊಂದ ಯುವಕ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾನೆ. ಇದೀಗ ಆತನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುವವರೆಗೆ ಶವಸಂಸ್ಕಾರ ಮಾಡುವುದಿಲ್ಲ ಎಂದು ಸಂತ್ರಸ್ತರ ಕುಟುಂಬಸ್ಥರು ತಿಳಿಸಿದ್ದಾರೆ.
ಅಮೃತಸರ ಸೆಪ್ಟೆಂಬರ್ 12: ವಿದೇಶದಿಂದ ಬಂದ ಯುವಕರ ಸಾವಿನ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಇದೀಗ ಅಮೃತಸರ (Amritsar) ಸಾಹಿಬ್‌ನ ಸಂಗ್ರೂರ್‌ನ ಖೋಖರ್ ಗ್ರಾಮದ ಬಡ ಕುಟುಂಬದ ಬಾಲಕನೊಬ್ಬ ವಿದೇಶದಿಂದ ವಾಪಸಾಗುವಾಗ ವಿಷ ಸೇವಿಸಿ ಸಾವನ್ನಪ್ಪಿದ ಪ್ರಕರಣವೊಂದು ವರದಿ ಆಗಿದೆ. ಟ್ರಾವೆಲ್ ಏಜೆಂಟ್ (Travel Agent) ಮೋಸ ಮಾಡಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಯುವಕನ್ನು ವಿದೇಶದಿಂದ ಗಡೀಪಾರು ಮಾಡಲಾಯಿತು. ಇದರಿಂದಾಗಿ ನೊಂದ ಯುವಕ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾನೆ. ಇದೀಗ ಆತನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುವವರೆಗೆ ಶವಸಂಸ್ಕಾರ ಮಾಡುವುದಿಲ್ಲ ಎಂದು ಸಂತ್ರಸ್ತರ ಕುಟುಂಬಸ್ಥರು ತಿಳಿಸಿದ್ದಾರೆ.
ಮೃತ ಲಖ್ವಿಂದರ್ ಬಡಕುಟುಂಬದವರು.ಈ ಕುಟುಂಬ ಜನರಿಂದ ಸಾಲ ಪಡೆದು ಹುಡುಗನನ್ನು ಮಲೇಷ್ಯಾಕ್ಕೆ ಕಳುಹಿಸಿದ್ದಾರೆ. ಆದರೆ ಟ್ರಾವೆಲ್ ಏಜೆಂಟ್ ಲಖ್ವಿಂದರ್ ಗೆ ಮೋಸ ಮಾಡಿದ್ದಾನೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ಅಮ್ಮ ಹೇಳಿದ್ದಾರೆ.
ಇದನ್ನೂ ಓದಿ: ವ್ಯಾಪಾರ ಸಮ್ಮೇಳನಗಳಲ್ಲಿ ಭಾಗವಹಿಸಲು ದುಬೈ ಮತ್ತು ಸ್ಪೇನ್‌ಗೆ 11 ದಿನಗಳ ಪ್ರವಾಸ ಹೊರಟ ಮಮತಾ ಬ್ಯಾನರ್ಜಿ
ಮೃತ ಲಖ್ವಿಂದರ್ ಅವರ ತಂದೆ ಸುಮಾರು 9 ಲಕ್ಷ ರೂಪಾಯಿ ಖರ್ಚು ಮಾಡಿ ಮಲೇಷ್ಯಾಕ್ಕೆ ಕಳುಹಿಸಿದ್ದಾರೆ ಎಂದು ಸ್ನೇಹಿತರು ಹೇಳುತ್ತಾರೆ. ಟ್ರಾವೆಲ್ ಏಜೆಂಟ್ ಅವರಿಗೆ ಕೆಲಸದ ಪರವಾನಗಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನೀಡಿದ್ದು ಪ್ರವಾಸಿ ವೀಸಾ. ಹೀಗಾಗಿ ಮನನೊಂದ ಲಖ್ವಿಂದರ್ ಈ ಕೃತ್ಯವೆಸಗಿದ್ದಾರೆ ಎಂದು ಸ್ನೇಹಿತರು ಹೇಳಿರುವುದಾಗಿ ಟಿವಿ9 ವಂಜಾಬಿ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ