Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಗಾಲಿಯಲ್ಲಿ ಹುಟ್ಟುಹಬ್ಬಕ್ಕೆ ಶುಭಕೋರುವ ಹಾಡು ರಚಿಸುತ್ತಿದ್ದಾರೆ ಮಮತಾ ಬ್ಯಾನರ್ಜಿ, ದುರ್ಗಾ ಪೂಜೆ ವೇಳೆಗೆ ಬಿಡುಗಡೆ

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಸಾಹಿತ್ಯ ಮತ್ತು ಸಂಗೀತದತ್ತ ಒಲವು ಹೊಂದಿದ್ದಾರೆ. ಕಳೆದ ವರ್ಷದ ಪೂಜೆ ವೇಳೆ ಮುಖ್ಯಮಂತ್ರಿಗಳು ಬರೆದ ಎಂಟು ಹಾಡುಗಳನ್ನೂ ಬಿಡುಗಡೆ ಮಾಡಲಾಗಿತ್ತು. ಈ ಬಾರಿಯೂ ಮಹಾನವಮಿ ಪೂಜಾ ದಿನಗಳಲ್ಲಿ ಆರು ಹಾಡುಗಳು ಬಿಡುಗಡೆಯಾಗಲಿವೆ.

ಬಂಗಾಲಿಯಲ್ಲಿ ಹುಟ್ಟುಹಬ್ಬಕ್ಕೆ ಶುಭಕೋರುವ ಹಾಡು ರಚಿಸುತ್ತಿದ್ದಾರೆ ಮಮತಾ ಬ್ಯಾನರ್ಜಿ, ದುರ್ಗಾ ಪೂಜೆ ವೇಳೆಗೆ ಬಿಡುಗಡೆ
ಮಮತಾ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 08, 2023 | 2:26 PM

ಕೋಲ್ಕತ್ತಾ ಸೆಪ್ಟೆಂಬರ್ 08: ಕಳೆದ ಕೆಲವು ವರ್ಷಗಳಂತೆ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)  ಅವರ ಹಲವಾರು ಹಾಡುಗಳು ದುರ್ಗಾ ಪೂಜೆ (ದಸರಾ) ಹೊತ್ತಲ್ಲಿ ಬಿಡುಗಡೆಯಾಗಲಿವೆ. ಮೂಲಗಳ ಪ್ರಕಾರ, ಮಮತಾ, ಈಗಾಗಲೇ ಅರ್ಧ ಡಜನ್ ಹಾಡುಗಳನ್ನು ಬರೆದಿದ್ದಾರೆ, ಈ ವರ್ಷದ ಪೂಜೆಯಂದು (Durga puja) ಇದು ಬಿಡುಗಡೆಯಾಗಲಿದೆ. ಇದಲ್ಲದೇ ‘ಬೆಂಗಾಲಿ ಭಾಷೆಯಲ್ಲೂ ಮುಖ್ಯಮಂತ್ರಿ ಹುಟ್ಟುಹಬ್ಬಕ್ಕೆ ಶುಭಕೋರುವ ಹಾಡು ಬರೆಯುತ್ತಿದ್ದಾರೆ. ಈ ಹಾಡು ಕೂಡ ಪೂಜಾ ಸಮಯದಲ್ಲಿ ಬಿಡುಗಡೆಯಾಗಬಹುದು ಎಂದು ವರದಿಯಾಗಿದೆ. ಇದರ ಕೆಲಸ ಭರದಿಂದ ಸಾಗಿದೆ ಎಂದು ಮೂಲಗಳು ಹೇಳಿವೆ.

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಸಾಹಿತ್ಯ ಮತ್ತು ಸಂಗೀತದತ್ತ ಒಲವು ಹೊಂದಿದ್ದಾರೆ. ಕಳೆದ ವರ್ಷದ ಪೂಜೆ ವೇಳೆ ಮುಖ್ಯಮಂತ್ರಿಗಳು ಬರೆದ ಎಂಟು ಹಾಡುಗಳನ್ನೂ ಬಿಡುಗಡೆ ಮಾಡಲಾಗಿತ್ತು. ಈ ಬಾರಿಯೂ ಮಹಾನವಮಿ ಪೂಜಾ ದಿನಗಳಲ್ಲಿ ಆರು ಹಾಡುಗಳು ಬಿಡುಗಡೆಯಾಗಲಿದ್ದು, ಇದರ ಕೆಲಸ ನಡೆಯುತ್ತಿದೆ ಎಂದು ಮೂಲಗಳು ಹೇಳಿರುವುದಾಗಿ ಟಿವಿ9 ಬಾಂಗ್ಲಾ ವರದಿ ಮಾಡಿದೆ.

ಮೂಲಗಳ ಪ್ರಕಾರ, ಈ ವರ್ಷದ ಬಿಡುಗಡೆಯಾಗಲಿರುವ ಹಾಡುಗಳ ಪೈಕಿ ಮಮತಾ ಬ್ಯಾನರ್ಜಿ ಅವರ ಹಲವು ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ರಾಜ್ಯದ ತಾಂತ್ರಿಕ ಶಿಕ್ಷಣ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರು ಮತ್ತು ಸಂಗೀತಗಾರ ಇಂದ್ರನೀಲ್ ಸೇನ್ ಅವರು ಈ ಒಟ್ಟಾರೆ ನಿರ್ವಹಣೆಯಲ್ಲಿ ಮುಖ್ಯಮಂತ್ರಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಮಮತಾ ಅವರು ಶೀಘ್ರದಲ್ಲೇ ಸ್ಪೇನ್‌ಗೆ ಭೇಟಿ ನೀಡಲಿದ್ದಾರೆ. 11 ದಿನಗಳ ವಿದೇಶಿ ಪ್ರವಾಸದ ನಂತರ, ಅವರು ಕೋಲ್ಕತ್ತಾಗೆ ಹಿಂದಿರುಗಿದ ನಂತರ ಉಳಿದ ಹಾಡುಗಳ ಕೆಲಸ ಪೂರ್ಣಗೊಳಿಸಲಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಈಗಾಗಲೇ ಎಲ್ಲಾ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಿದೆ: ಮಮತಾ ಬ್ಯಾನರ್ಜಿ

ಕಳೆದ ಹಲವು ವರ್ಷಗಳಿಂದ ಪೂಜೆ ವೇಳೆ ಮುಖ್ಯಮಂತ್ರಿಗಳು ಬರೆದ ಹಾಡುಗಳು ಬಿಡುಗಡೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿ. ಅವರು ಹಲವಾರು ವರ್ಷಗಳಿಂದ ಕೋಲ್ಕತ್ತಾದ ದೊಡ್ಡ ದುರ್ಗಾ ಪೂಜಾ ಸಮಿತಿಗೆ ಥೀಮ್ ಹಾಡುಗಳನ್ನು ಬರೆಯುತ್ತಿದ್ದಾರೆ. ಕಳೆದ ವರ್ಷ ಇಂದ್ರನೀಲ್ ಸೇನ್, ಅದಿತಿ ಮುನ್ಷಿ, ಜೀತ್ ಗಂಗೂಲಿ, ಬಾಬುಲ್ ಸುಪ್ರಿಯೋರಾ ಮುಖ್ಯಮಂತ್ರಿಗಳು ಬರೆದಿರುವ ಪೂಜಾ ಗೀತೆಗಳ ಆಲ್ಬಂನಲ್ಲಿ ಹಾಡಿದ್ದರು. ಕಳೆದ ವರ್ಷದ ಆಲ್ಬಂನ ಹಾಡೊಂದರಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಅವರೇ ಹಾಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ