ದಾರಿ ತಪ್ಪಿಸಿದ ಮೊಬೈಲ್! ಗೂಗಲ್ ಮ್ಯಾಪ್ ನಂಬಿಕೊಂಡು ಹೋಗಿದ್ದಕ್ಕೆ ಇಳಿದಿದ್ದು ನೀರಿಗೆ! ಎಲ್ಲಿ?
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದೆ ಎಂದು ಅಲ್ಲಿಗೂ ಆ ಇಬ್ಬರೂ ಅಂದುಕೊಂಡಿದ್ದಾರೆ! ಆದರೆ ಮುಂದಕ್ಕೆ ಹೋಗುತ್ತಿದ್ದಂತೆ ನೀರಿನ ಆಳ ಹೆಚ್ಚಾಗುತ್ತಿದ್ದರಿಂದ ಅನುಮಾನಗೊಂಡು ಲಾರಿ ನಿಲ್ಲಿಸಿದ್ದಾರೆ. ಅಷ್ಟರಲ್ಲೇ ನೀರು ಲಾರಿಯ ಕ್ಯಾಬಿನ್ ವರೆಗೂ ತಲುಪಿದೆ. ಎಲ್ಲೋ ಯಡವಟ್ಟಾಗಿದೆ ಎಂದು ಅರಿತ ಇಬ್ಬರೂ ನಿಧಾನವಾಗಿ ಕೆಳಗಿಳಿದ್ದಾರೆ.
ಹುಸ್ನಾಬಾದ್, ಸೆಪ್ಟೆಂಬರ್ 8: ಗೂಗಲ್ ಮ್ಯಾಪ್ (Google map) ಅನ್ನು ನಂಬಿ ಎಲ್ಲಿಗಾದರೂ ಹೋದರೆ ನಿಜ ಜೀವನದಲ್ಲಿ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿ ಸಿಕ್ಕಿದೆ. ಲಾರಿ ಚಾಲಕನೊಬ್ಬ ಗೂಗಲ್ ಮಾರ್ಗ ನಕ್ಷೆಯನ್ನು ಆಧರಿಸಿ ತನ್ನ ನಿರ್ದಿಷ್ಟ ಸ್ಥಳಕ್ಕೆ ಹೋಗಲು ನಿರ್ಧರಿಸಿದ್ದಾನೆ. ಆದರೆ ಕಥೆ ಉಲ್ಟಾ ಆಗಿದೆ. ಗಮ್ಯಸ್ಥಳ ತಲುಪಿದಾಗ ನಕ್ಷೆಯಲ್ಲಿ ಯಾವುದೇ ರಸ್ತೆ ಇರಲಿಲ್ಲ (Misguide), ಆದರೆ ಕಣ್ಣುಗಳ ಮುಂದೆ ದೊಡ್ಡ ಅಪಾಯ ಕಾಣಿಸಿಕೊಂಡಿದೆ. ನಿಜವಾಗಿ ಏನಾಯಿತು..
ಮಂಗಳವಾರ (ಸೆಪ್ಟೆಂಬರ್ 5) ರಾತ್ರಿ ಲಾರಿ ಚಾಲಕನೊಬ್ಬ ತಮಿಳುನಾಡಿನಿಂದ ಚೆರ್ಯಾಲ ಮಾರ್ಗವಾಗಿ ಹುಸ್ನಾಬಾದ್‌ಗೆ ಲೋಡ್‌ನೊಂದಿಗೆ ಹೊರಟಿದ್ದ. ಲಾರಿಯಲ್ಲಿ ಚಾಲಕ ಶಿವ ಮತ್ತು ಕ್ಲೀನರ್ ಮೊಂಡಯ್ಯ ಸಹ ಇದ್ದರು. ಆದರೆ ಕತ್ತಲಲ್ಲಿ ದಾರಿ ಅರ್ಥವಾಗದೆ ತಬ್ಬಿಬ್ಬಾದರು. ಹಾಗಾಗಿ ಮೊಬೈಲ್ನಲ್ಲಿದ್ದ ಗೂಗಲ್ ಮ್ಯಾಪ್‌ನ ಸಹಾಯ ಪಡೆದರು. ಆದರೆ ಅವರಿಗೆ ಮಾರ್ಗವನ್ನು ತೋರಿಸುವಲ್ಲಿ ಗೂಗಲ್ ಅವರನ್ನು ‘ದಾರಿ ತಪ್ಪಿಸಿ’ ಅಪಾಯಕ್ಕೆ ಸಿಲುಕಿಸಿದೆ. ಸಿದ್ದಿಪೇಟೆ ಜಿಲ್ಲೆ ಅಕ್ಕಣ್ಣಪೇಟೆ ಮಂಡಲದ ಗುಡತಿಪಲ್ಲಿಯ ಗೌರವೆಲ್ಲಿ ಬಳಿಯಿರುವ ಜಲಾಶಯಕ್ಕೆ ಗೂಗಲ್ ಮ್ಯಾಪ್ ಕರೆದುಕೊಂಡು ಹೋಗಿದೆ. ಹಾಗಾಗಿ ಲಾರಿ ನೀರಿನಲ್ಲಿ ಸಿಲುಕಿಕೊಂಡಿತು.
ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಂದಾರಾಮ್ ಸ್ಟೇಜ್ ದಾಟಿದ ತಕ್ಷಣ ನೇರ ರಸ್ತೆ ಇದೆ ಎಂದು ಡ್ರೈವರ್ ಶಿವ ಮತ್ತು ಕ್ಲೀನರ್ ಮೊಂಡಯ್ಯಗೆ ಗೂಗಲ್ ತೋರಿಸಿದೆ. ಕತ್ತಲಲ್ಲಿ ನಕ್ಷೆಯಲ್ಲಿ ತೋರಿಸಿರುವಂತೆ ಲಾರಿಯನ್ನು ಓಡಿಸಿದ್ದಾರೆ. ಇದರಿಂದ ಲಾರಿ ಒಂದು ಕಡೆ ನೀರಿಗೆ ಇಳಿದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದೆ ಎಂದು ಅಲ್ಲಿಗೂ ಆ ಇಬ್ಬರೂ ಅಂದುಕೊಂಡಿದ್ದಾರೆ!
Also read: ರೈಲ್ವೆ ನಿಲ್ದಾಣಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಲಭ್ಯ; ಉಚಿತ ಬಳಕೆಗೆ ಎಷ್ಟು ವೈಫೈ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್
ಆದರೆ ಮುಂದಕ್ಕೆ ಹೋಗುತ್ತಿದ್ದಂತೆ ನೀರಿನ ಆಳ ಹೆಚ್ಚಾಗುತ್ತಿದ್ದರಿಂದ ಅನುಮಾನಗೊಂಡು ಲಾರಿ ನಿಲ್ಲಿಸಿದ್ದಾರೆ. ಅಷ್ಟರಲ್ಲೇ ನೀರು ಲಾರಿಯ ಕ್ಯಾಬಿನ್ ವರೆಗೂ ತಲುಪಿದೆ. ಎಲ್ಲೋ ಯಡವಟ್ಟಾಗಿದೆ ಎಂದು ಅರಿತ ಇಬ್ಬರೂ ನಿಧಾನವಾಗಿ ಕೆಳಗಿಳಿದು, ಸಾಹಸಪಟ್ಟು ಸಮೀಪದಲ್ಲಿದ್ದ ಸ್ಥಳೀಯರ ಬಳಿ ಹೋಗಿದ್ದಾರೆ. ಘಟನೆ ಕುರಿತು ಸಮೀಪದ ರಾಮಾವರಂ ಗ್ರಾಮಸ್ಥರಿಗೆ ವಿವರಿಸಿದ್ದಾರೆ.
ಪರಿಸ್ಥಿತಿ ಅರ್ಥ ಮಾಡಿಕೊಂಡ ಸ್ಥಳೀಯರು ಲಾರಿಗೆ ಹಗ್ಗ ಬಿಗಿದು ಕಷ್ಟಪಟ್ಟು ರಸ್ತೆಗೆ ತಂದು ಬಿಟ್ಟಿದ್ದಾರೆ. ನಂದರಾಮ್ ಸ್ಟೇಜ್ ನಲ್ಲಿ ರಸ್ತೆ ತಡೆಗಳನ್ನು ಏರ್ಪಡಿಸಿ ಅಲ್ಲಿಂದ ಬೈಪಾಸ್ ರಸ್ತೆ ಮೂಲಕ ಲಾರಿಯನ್ನು ತಿರುಗಿಸಿ ಅನಾಹುತ ತಪ್ಪಿಸಲಾಗಿದೆ. ಇಲ್ಲವಾದರೆ ಅದೇ ದಾರಿಯಲ್ಲಿ ಸಾಗಿ ಮೃತ್ಯುವನ್ನು ಹುಡುಕಿಕೊಂಡು ಸ್ವತಃ ನದಿಗೆ ಇಳಿಯುತ್ತಿದ್ದರು ಅವರೆಲ್ಲಾ!
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ