AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ನಿಲ್ದಾಣಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಲಭ್ಯ; ಉಚಿತ ಬಳಕೆಗೆ ಎಷ್ಟು ವೈಫೈ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

How To Use Free Wi-Fi at Railway Stations: ಭಾರತದಲ್ಲಿ 6,000ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ರೂಪಿಸಲಾಗಿದೆ. ಇಂಡಿಯನ್ ರೈಲ್ವೇಸ್​ನ ರೇಲ್​ಟೆಲ್ ಹಾಗೂ ಗೂಗಲ್ ಸಂಸ್ಥೆ ಸಹಯೋಗದಲ್ಲಿ ವೈಫೈ ಇಂಟರ್ನೆಟ್ ಸೌಲಭ್ಯ ಸಿಗುತ್ತದೆ. ಒಂದು ಎಂಬಿಪಿಎಸ್​ನಷ್ಟು ವೇಗದ ಇಂಟರ್ನೆಟ್ ಅನ್ನು 30 ನಿಮಿಷ ಕಾಲ ಉಚಿತವಾಗಿ ಬಳಸಬಹುದು. ಹೆಚ್ಚು ಇಂಟರ್ನೆಟ್ ಬೇಕೆಂದರೆ ಪ್ಯಾಕೇಜ್ ಖರೀದಿಸಬಹುದು. ರೈಲು ನಿಲ್ದಾಣಗಳಲ್ಲಿ ಉಚಿತ ಇಂಟರ್ನೆಟ್ ಬಳಸುವ ವಿಧಾನ ಇಲ್ಲಿದೆ.

ರೈಲ್ವೆ ನಿಲ್ದಾಣಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಲಭ್ಯ; ಉಚಿತ ಬಳಕೆಗೆ ಎಷ್ಟು ವೈಫೈ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್
ರೈಲು ನಿಲ್ದಾಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2023 | 2:34 PM

Share

ಭಾರತದ ವಿವಿಧ ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ ಒದಗಿಸಲಾಗುತ್ತಿದೆ. ದೇಶಾದ್ಯಂತ ಆರು ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ವೈಫೈ ಸರ್ವಿಸ್ ಸಿಗುತ್ತದೆ. ಭಾರತೀಯ ರೈಲ್ವೇಸ್​ಗೆ ಸೇರಿದ ರೀಟೇಲ್ ಬ್ರಾಡ್​ಬ್ಯಾಂಡ್ ಸೇವೆ ಒದಗಿಸುವ ರೇಲ್​ಟೆಲ್ (RailTel) ಎಂಬ ಸಂಸ್ಥೆ ರೇಲ್​ವೈರ್ (RailWire) ಎಂಬ ವೈಫೈ ಇಂಟರ್ನೆಟ್ ಸೌಲಭ್ಯ ಒದಗಿಸುತ್ತದೆ. ರೈಲ್ವೆ ನಿಲ್ದಾಣದ ಅಂಗಣದಲ್ಲೊಳಗೆ ಮಾತ್ರವೇ ಈ ವೈಫೈ ಸರ್ವಿಸ್ ಸಿಗುವುದು. ರೈಲಿನಲ್ಲಿ ಪ್ರಯಾಣಿಸುವಾಗ ವೈಫೈ ಬಳಕೆ ಸಾಧ್ಯವಿಲ್ಲ.

ರೈಲ್ವೆ ಸ್ಟೇಷನ್​ನೊಳಗೆ ಅರ್ಧಗಂಟೆ ಕಾಲ ವೈಫೈ ಅನ್ನು ಉಚಿತವಾಗಿ ಬಳಸಬಹುದು. ಹೆಚ್ಚಿನ ಇಂಟರ್ನೆಟ್ ಬಳಕೆ ಬೇಕೆಂದರೆ ರೈಲ್​ವೈರ್​ನ ವಿವಿಧ ಇಂಟರ್ನೆಟ್ ಪ್ಲಾನ್​ಗಳನ್ನು ಖರೀದಿಸಬೇಕಾಗುತ್ತದೆ. ಉಚಿತವಾಗಿ ಸಿಗುವ ವೈಫೈ ಇಂಟರ್ನೆಟ್​ನ ವೇಗ 1 ಎಂಬಿಪಿಎಸ್​ವರೆಗೂ ಇರುತ್ತದೆ. ಹೆಚ್ಚುವರಿ ಡಾಟಾ ಬೇಕೆಂದರೆ 10 ರೂನಿಂದ ಪ್ಯಾಕೇಜ್ ಶುರುವಾಗುತ್ತದೆ. 10 ರೂಗೆ ಬರೋಬ್ಬರಿ 5ಜಿಬಿಯಷ್ಟು ಡಾಟಾ ಸಿಗುತ್ತದೆ. ಇದರ ಇಂಟರ್ನೆಟ್ ವೇಗ 34 ಎಂಬಿಪಿಎಸ್​ವರೆಗೂ ಇರುತ್ತದೆ. ರೈಲ್​ಟೆಲ್​ನ ಬಹುತೇಕ ಪ್ಲಾನ್​ಗಳು ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ಅದರ ಅಧಿಕೃತ ವೆಬ್​ಸೈಟ್​ಗೆ ಹೋಗಿ ಪ್ಲಾನ್ ಪಡೆಯಬಹುದು. ವೆಬ್ ವಿಳಾಸ ಇಂತಿದೆ: Railwire.co.in

ಇದನ್ನೂ ಓದಿ: ಗ್ಯಾಸ್ ಬೆಲೆ ಇಳಿಕೆ ಎಲ್ಲರಿಗೂ ಅನ್ವಯ ಅಗುತ್ತಾ? ಉಜ್ವಲ ಯೋಜನೆ ಫಲಾನುಭವಿಗಳಿಗೆ ಮಾತ್ರವಾ? ಈ ಯೋಜನೆಗೆ ಯಾರು ಅರ್ಹರು? ಇಲ್ಲಿದೆ ಡೀಟೇಲ್ಸ್

ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಬಳಸುವುದು ಹೇಗೆ?

  • ನಿಮ್ಮ ಫೋನ್​ನ ವೈಫೈ ಸೆಟ್ಟಿಂಗ್ ತೆರೆಯಿರಿ
  • ಲಭ್ಯ ಇರುವ ನೆಟ್ವರ್ಕ್​ಗಳನ್ನು ಹುಡುಕಿ
  • ಪಟ್ಟಿಯಿಂದ ರೈಲ್​ವೈರ್ ನೆಟ್ವವರ್ಕ್ ಅನ್ನು ಆಯ್ಕೆ ಮಾಡಿ
  • ಈಗ ಮೊಬೈಲ್ ಬ್ರೌಸರ್​ನಲ್ಲಿ Railwire.co.in ವೆಬ್​ಗೆ ಹೋಗಿ.
  • ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ
  • ಫೋನ್​ಗೆ ಬರುವ ಒಟಿಪಿ ನಂಬರ್ ಅನ್ನು ಪಾಸ್ವರ್ಡ್​ನತೆ ಬಳಸಿ ರೈಲ್​ವೈರ್​​ಗೆ ಕನೆಕ್ಟ್ ಅಗಿ

ಈಗ ರೈಲ್​ವೈರ್​ನ ಉಚಿತ ಇಂಟರ್ನೆಟ್ ಸೇವೆಯನ್ನು ಅರ್ಧ ಗಂಟೆ ಕಾಲ ನೀವು ಪಡೆಯಬಹುದು. ಹೆಚ್ಚಿನ ಇಂಟರ್ನೆಟ್ ಬೇಕೆಂದರೆ ವೆಬ್​ಸೈಟ್​ನಲ್ಲಿ ಪ್ಯಾಕೇಜ್​ಗಳನ್ನು ಖರೀದಿಸಬೇಕು.

ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್​ನಲ್ಲಿದೆ ಹೊಸ ಫೀಚರ್

ಕರ್ನಾಟಕದಲ್ಲಿ ಎಂಟು ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ ಸದ್ಯಕ್ಕೆ ಸಿಗುತ್ತಿದೆ. ಮಂಗಳೂರು, ಬೆಂಗಳೂರು, ಯಶವಂತಪುರ, ಮೈಸೂರು, ಕೆಂಗೇರಿ, ದಾವಣಗೆರೆ, ಹೊಸಪೇಟೆ, ಹಾಸನ ರೈಲು ನಿಲ್ದಾಣಗಳಲ್ಲಿ ನೀವು ಉಚಿತವಾಗಿ ವೈಫೈ ಬಳಸಬಹುದು.

ರೇಲ್​ಟೆಲ್ ಸಂಸ್ಥೆ ಫೈಬರ್ ಮೂಲಕ ನೆಟ್ವರ್ಕ್ ಕನೆಕ್ಟಿವಿಟಿ ವ್ಯವಸ್ಥೆ ಮಾಡಿದೆ. ಗೂಗಲ್ ಸಂಸ್ಥೆ ರೇಡಿಯೋ ಅಕ್ಸೆಸ್ ನೆಟ್ವರ್ಕ್ ಸೇರಿದಂತೆ ತಂತ್ರಜ್ಞಾನ ನೆರವು ಒದಗಿಸುತ್ತಿದೆ.

ಗಮನಿಸಿ…

ಸಾರ್ವಜನಿಕ ವೈಫೈಗಳನ್ನು ಬಳಸುವಾಗ ಎಚ್ಚರ ಇರಲಿ. ಇಂಟರ್ನೆಟ್ ಬ್ಯಾಂಕಿಂಗ್, ಹಣದ ವಹಿವಾಟು ಇತ್ಯಾದಿ ಬಳಸುವುದನ್ನು ಸಾಧ್ಯವಾದಷ್ಟೂ ತಪ್ಪಿಸಿ. ನಿಮ್ಮ ದತ್ತಾಂಶವನ್ನು ಕದಿಯುವ ಅವಕಾಶ ಇರುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಒದಗಿಸುವ ವೈಫೈ ಸುರಕ್ಷಿತ ಎನಿಸಿದರೂ ಸೂಕ್ಷ್ಮ ವಹಿವಾಟುಗಳನ್ನು ಮಾಡದಿರುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?