Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್​ನಲ್ಲಿದೆ ಹೊಸ ಫೀಚರ್

Google Flights New Features: ಗೂಗಲ್ ಫ್ಲೈಟ್ಸ್ 3 ಫೀಚರ್​ಗಳನ್ನು ಪರಿಚಯಿಸಿದ್ದು, ಇವು ನಿಮಗೆ ವಿಮಾನ ಟಿಕೆಟ್ ಬುಕ್ ಮಾಡಲು ಸಹಾಯ ಮಾಡುತ್ತವೆ. ಯಾವ ದಿನ ಅಥವಾ ಸಮಯದಲ್ಲಿ ವಿಮಾನ ಟಿಕೆಟ್ ಬೆಲೆ ಅತಿಕಡಿಮೆ ಇರುತ್ತದೆ ಎಂಬುದನ್ನು ಇದು ಪತ್ತೆ ಮಾಡಿ ನಿಮಗೆ ಅಲರ್ಟ್ ಕೊಡುತ್ತದೆ. ಇರುವುದರಲ್ಲೇ ಕಡಿಮೆ ಬೆಲೆಗೆ ನೀವು ವಿಮಾನ ಟಿಕೆಟ್ ಖರೀದಿಸಿ ನಿಶ್ಚಿಂತೆಯಿಂದ ಪ್ರಯಾಣ ಬೆಳೆಸಲು ಇದು ಅನುಕೂಲವಾಗಿದೆ.

ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್​ನಲ್ಲಿದೆ ಹೊಸ ಫೀಚರ್
ವಿಮಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2023 | 11:28 AM

ನವದೆಹಲಿ, ಆಗಸ್ಟ್ 30: ಅತಿಹೆಚ್ಚು ಬೇಡಿಕೆ ಇದ್ದ ಸಂದರ್ಭದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಲು ಹೋದರೆ ಬೆಲೆ ತೀರಾ ಹೆಚ್ಚಿರುತ್ತದೆ ಎಂಬುದು ಗೊತ್ತಿರಬಹುದು. ಕೆಲವೊಮ್ಮೆ ಮಾಮೂಲಿಗಿಂತ ಎರಡು ಅಥವಾ ಮೂರು ಪಟ್ಟು ಬೆಲೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ಗೂಗಲ್ ಫ್ಲೈಟ್ಸ್ (Google Flights) ಹೊಸ ಫೀಚರ್ ಪರಿಚಯಿಸಿದೆ. ಯಾವ ಸಮಯದಲ್ಲಿ ಫ್ಲೈಟ್ ಟಿಕೆಟ್ ಬೆಲೆ ಕಡಿಮೆ ಇರುತ್ತದೆ ಎಂಬುದನ್ನು ತಿಳಿಯಲು ಈ ಹೊಸ ಫೀಚರ್ ಸಹಾಯ ಮಾಡುತ್ತದೆ. ಗೂಗಲ್ ಸಂಸ್ಥೆ ತನ್ನ ಬ್ಲಾಗ್​ನಲ್ಲಿ ಈ ಬಗ್ಗೆ ವಿವರ ನೀಡಿದೆ.

ಗೂಗಲ್ ಫ್ಲೈಟ್ಸ್​ನಲ್ಲಿ ಇಂಥದ್ದೇ ಎರಡು ಬೇರೆ ಫೀಚರ್​ಗಳಿವೆ. ಫ್ಲೈಟ್ ಬೆಲೆ ಏರಿಳಿತದ ಬಗ್ಗೆ ಅಲರ್ಟ್ ಮಾಡುತ್ತದೆ ಒಂದು ಫೀಚರ್. ಹಾಗೆಯೇ, ಬೆಲೆ ಖಾತ್ರಿ ಆಯ್ಕೆ ಇನ್ನೊಂದು ಫೀಚರ್. ಅದರ ಜೊತೆಗೆ ಈಗ ಅತ್ಯಂತ ಕಡಿಮೆ ಫ್ಲೈಟ್ ಟಿಕೆಟ್ ಬೆಲೆ ಇರುವ ಸಮಯ ಯಾವುದು ಎಂಬುದನ್ನು ತಿಳಿಸುವ ಹೆಚ್ಚುವರಿ ಫೀಚರ್ ಅನ್ನು ಗೂಗಲ್ ಪರಿಚಯಿಸಿದೆ.

ಹೇಗೆ ಕೆಲಸ ಮಾಡುತ್ತೆ ಈ ಫೀಚರ್?

ನೀವು ಪ್ರಯಾಣಿಸಬೇಕೆಂದಿರುವ ಸಮಯ ಮತ್ತು ಸ್ಥಳದ ವಿವರ ಕೊಟ್ಟರೆ ಗೂಗಲ್ ಫ್ಲೈಟ್ಸ್ ನೀವು ಎಷ್ಟು ದಿನ ಮುನ್ನ ಟಿಕೆಟ್ ಬುಕ್ ಮಾಡಿದರೆ ಬೆಲೆ ಕಡಿಮೆ ಇರುತ್ತದೆ ಎಂಬುದನ್ನು ಸಜೆಸ್ಟ್ ಮಾಡಬಹುದು. ಹಿಂದಿನ ಬೆಲೆ ಇತಿಹಾಸವನ್ನು ಗ್ರಹಿಸಿ ಗೂಗಲ್ ಫ್ಲೈಟ್ಸ್​ನ ಈ ಹೊಸ ಫೀಚರ್, ಸೂಕ್ತ ಬುಕಿಂಗ್ ದಿನ ಯಾವುದು ಎಂದು ಸಲಹೆ ನೀಡುತ್ತದೆ.

ಇದನ್ನೂ ಓದಿ: Maternity Insurance: ಮಾತೃತ್ವದ ವಿಮೆ ಎಷ್ಟು ಲಾಭದಾಯಕ? ಯಾವುದು ಅತ್ಯುತ್ತಮ ಆಯ್ಕೆ?

ಬೆಲೆ ಖಾತ್ರಿ ಆಯ್ಕೆ ಎಂಬ ಫೀಚರ್

ಪ್ರೈಸ್ ಗ್ಯಾರಂಟಿ ಆಪ್ಷನ್ ಎಂಬುದು ಗೂಗಲ್ ಫ್ಲೈಟ್ಸ್​ನಲ್ಲಿ ಕುತೂಹಲಕಾರಿ ಎನಿಸುವ ಫೀಚರ್. ಇದು ನೀಡುವ ಸಲಹೆ ಪ್ರಕಾರ ನೀವು ಫ್ಲೈಟ್ ಬುಕ್ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆ ಬಳಿಕ ಟಿಕೆಟ್ ಬೆಲೆ ಇಳಿದರೆ ಹೆಚ್ಚುವರಿ ಹಣವನ್ನು ಗೂಗಲ್ ಪೇ ಮೂಲಕ ನಿಮಗೆ ರೀಫಂಡ್ ಮಾಡಲಾಗುತ್ತದೆ.

ಪ್ರೈಸ್ ಟ್ರ್ಯಾಕಿಂಗ್ ಫೀಚರ್

ಇದು ಬಹಳ ಉಪಯೋಗ ಎನಿಸುವ ಫೀಚರ್. ನಿಮ್ಮ ಯೋಜಿತ ಮಾರ್ಗದಲ್ಲಿ ಫ್ಲೈಟ್ ಟಿಕೆಟ್ ಬೆಲೆಯ ಏರಿಳಿತವಾಗುತ್ತಿದ್ದಲ್ಲಿ ಇದು ಅಲರ್ಟ್ ಮಾಡುತ್ತದೆ.

ಇದನ್ನೂ ಓದಿ: ಉಗಾಂಡ ದೇಶದಲ್ಲಿ ಐಪಿಒ ದಾಖಲೆ ಬರೆಯಹೊರಟಿರುವ ಏರ್​ಟೆಲ್; ಅತಿದೊಡ್ಡ ಷೇರುಮಾರಾಟಕ್ಕೆ ಮುಂದು

ಈ ಮೂರು ಫೀಚರ್​ಗಳನ್ನು ಗೂಗಲ್ ಪ್ರಾಯೋಗಿಕವಾಗಿ ಪರಿಚಯಿಸಿದೆ. ನಿಮಗೆ ಈ ಫೀಚರ್​ನಿಂದ ಅಲರ್ಟ್ ಸಿಗಬೇಕಾದರೆ ಗೂಗಲ್ ಲಾಗಿನ್ ಆಗಿದ್ದಿರಬೇಕು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ