ಇಂದಿರಾ ಗಾಂಧಿಯನ್ನು ಗಗನಯಾತ್ರಿ ಎಂದು ಕರೆದು ಮತ್ತೆ ನಗೆಪಾಟಲಿಗೀಡಾದ ಮಮತಾ ಬ್ಯಾನರ್ಜಿ
ಭಾರತದ ಮೊದಲ ಯಾತ್ರಿ ರಾಕೇಶ್ ಶರ್ಮಾ ಎನ್ನುವ ಬದಲು ರಾಕೇಶ್ ರೋಷನ್ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇತ್ತೀಚೆಗಷ್ಟೇ ನಗೆಪಾಟಲಿಗೀಡಾಗಿದ್ದರು.. ಇದೀಗ ಇಂದಿರಾ ಗಾಂಧಿಯವರನ್ನು ಗಗನಯಾತ್ರಿ ಎಂದು ಹೇಳುವ ಮೂಲಕ ಮತ್ತೊಂದು ತಪ್ಪು ಮಾಡಿದ್ದಾರೆ. ರಾಕೇಶ್ ಶರ್ಮಾ ಚಂದ್ರನಲ್ಲಿಗೆ ಹೋಗಿದ್ದಾಗ ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಇಂದಿರಾ ಗಾಂಧಿ ಕೇಳಿದ್ದರು ಎನ್ನುವ ಬದಲು ಇಂದಿರಾ ಗಾಂಧಿ ಗಗನಯಾತ್ರಿ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಚಂದ್ರನತ್ತ ಜನರನ್ನು ಕಳುಹಿಸಿದ್ದರು, ಆಗ ನಾನು ತುಂಬಾ ಚಿಕ್ಕವಳಿದ್ದೆ, ನಾಣು ದಿನ ಪತ್ರಿಕೆ ಓದುತ್ತಿದ್ದೆ, ಆಗ ಒಂದು ಕಥೆ ಬಂದಿತ್ತು, ಅದರಲ್ಲಿ ಇಂದಿರಾ ಗಾಂಧಿ ಚಂದ್ರನನ್ನು ತಲುಪಿದಾಗ ರಾಕೇಶ್ನನ್ನು ಕೇಳಿದ್ದರು, ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು, ಆಗ ರಾಕೇಶ್ ಶರ್ಮಾ ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಎಂದಿದ್ದರು ಎಂದು ಭಾಷಣದಲ್ಲಿ ಹೇಳಿರುವುದು ಇದೀಗ ವೈರಲ್ ಆಗಿದೆ.
ಮಮತಾ ವಿಡಿಯೋ
“When Indira Gandhi reached to Moon, She asked Rakesh how does India look from Moon”
1st Rakesh Roshan, now Indira Gandhi reached to Moon.
Didi 🙏🏻🤣🤣🤣🤣🤣 pic.twitter.com/Hm2WMkA41w
— Facts (@BefittingFacts) August 28, 2023
ಚಂದ್ರಯಾನ 3 ರಲ್ಲಿ ಕೆಲಸ ಮಾಡಿದವರಲ್ಲಿ 28 ವಿಜ್ಞಾನಿಗಳು ಪಶ್ಚಿಮ ಬಂಗಾಳದವರಿದ್ದಾರೆ, ನನಗೆ ಅವಕಾಶ ಸಿಕ್ಕರೆ ಅವರನ್ನು ಗೌರವಿಸಲು ಬಯಸುತ್ತೇನೆ ಎಂದರು.
ಮತ್ತಷ್ಟು ಓದಿ: ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಮಮತಾ ಬ್ಯಾನರ್ಜಿ
ಅಷ್ಟೇ ಅಲ್ಲ, ಚಂದ್ರಯಾನ 3 ರ ಸಾಫ್ಟ್ ಲ್ಯಾಂಡಿಂಗ್ನ್ನು ನಾನು ನೋಡಬೇಕೆಂದು ಬಯಸಿದ್ದೆ ಆದರೆ ಸರಿಯಾಗಿ ನೋಡಲು ಸಾಧ್ಯವಾಗಿಲ್ಲ, ಪರದೆಯ ಮೇಲೆ ಯಾರದ್ದೋ ಮುಖ ಕಾಣಿಸುತ್ತಿತ್ತು ಹಾಗಾಗಿ ಟಿವಿಯನ್ನು ಸ್ವಿಚ್ಡ್ ಆಫ್ ಮಾಡಬೇಕಾಯಿತು ಎಂದರು. ವಾಸ್ತವವಾಗಿ ಮಮತಾ ಬ್ಯಾನರ್ಜಿ ಉಲ್ಲೇಖವು ಪ್ರಧಾನಿ ಮೋದಿಯವರ ಬಗ್ಗೆ ಆಗಿತ್ತು. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಕೂಡಲೇ ಮೋದಿ ತ್ರಿವರ್ಣ ಧ್ವಜ ಬೀಸಿದ್ದರು. ಎಲ್ಲಾ ವಿಜ್ಞಾನಿಗಳು ಹಾಗೂ ದೇಶವಾಸಿಗಳಿಗೆ ಶುಭ ಕೋರಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ