ಏಮ್ಸ್​ ವೈದ್ಯರು ವಿಮಾನದಲ್ಲಿ ಜೀವ ಉಳಿಸಿದ್ದ ಮಗುವಿನ ಸ್ಥಿತಿ ಚಿಂತಾಜನಕ

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ಏರ್‌ಲೈನ್ಸ್ ಯುಕೆ-814 ವಿಮಾನದಲ್ಲಿ ಎರಡು ವರ್ಷದ ಮಗುವಿನ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಉಸಿರೇ ನಿಂತಿತ್ತು, ಅಲ್ಲಿದ್ದ ಐವರು ವೈದ್ಯರು ಬಾಲಕಿಯ ಉಸಿರನ್ನು ಮರಳಿಸುವಲ್ಲಿ ಸಫಲರಾಗಿದ್ದರು, ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶಿಸಲಾಯಿತು, ಮಗುವನ್ನು ನಾಗ್ಪುರದ ರವಾನಿಸಲಾಗಿತ್ತು. ಮಗುವನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಹಾರಾಟದ ಸಮಯದಲ್ಲಿ, ಮಗು ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಳು.

ವೈದ್ಯರು
Follow us
ನಯನಾ ರಾಜೀವ್
|

Updated on: Aug 29, 2023 | 9:13 AM

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ಏರ್‌ಲೈನ್ಸ್ ಯುಕೆ-814 ವಿಮಾನದಲ್ಲಿ ಎರಡು ವರ್ಷದ ಮಗುವಿನ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಉಸಿರೇ ನಿಂತಿತ್ತು, ಅಲ್ಲಿದ್ದ ಐವರು ವೈದ್ಯರು ಬಾಲಕಿಯ ಉಸಿರನ್ನು ಮರಳಿಸುವಲ್ಲಿ ಸಫಲರಾಗಿದ್ದರು, ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶಿಸಲಾಯಿತು, ಮಗುವನ್ನು ನಾಗ್ಪುರದ ರವಾನಿಸಲಾಗಿತ್ತು. ಮಗುವನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಹಾರಾಟದ ಸಮಯದಲ್ಲಿ, ಮಗು ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಳು.

ಎನ್‌ಡಿಟಿವಿ ಪ್ರಕಾರ, ಮಗು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು ಮತ್ತು ಸೈನೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಳು. ದೆಹಲಿ ಏಮ್ಸ್ ನ 5 ವೈದ್ಯರು ಕೂಡ ವಿಮಾನದಲ್ಲಿದ್ದದ್ದು ಸಮಾಧಾನ ತಂದಿದೆ. ತಕ್ಷಣವೇ ವೈದ್ಯರು ಆರೈಕೆ ಮಾಡಿದ್ದರು. ನಾಗ್ಪುರ ಮೂಲದ ಕಿಮ್ಸ್-ಕಿಂಗ್ಸ್‌ವೇ ಆಸ್ಪತ್ರೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ (ಕಮ್ಯುನಿಕೇಷನ್ಸ್) ಐಜಾಜ್ ಶಮಿ ಪ್ರಕಾರ, ಆಗಸ್ಟ್ 27 ರಂದು ತಡರಾತ್ರಿ, ವಿಸ್ತಾರಾ ಏರ್‌ಲೈನ್ಸ್ ಫ್ಲೈಟ್ UK814 ನಲ್ಲಿ ಪ್ರಯಾಣಿಸುತ್ತಿದ್ದ ಹೆಣ್ಣು ಮಗುವಿಗೆ ಗಂಭೀರ ಸಮಸ್ಯೆ ಕಾಣಿಸಿಕೊಂಡಿತ್ತು.ವೈದ್ಯಕೀಯ ಹಿನ್ನೆಲೆಯ ಸಹ ಪ್ರಯಾಣಿಕರು ತಕ್ಷಣವೇ CPR (ಹೃದಯ ಶ್ವಾಸಕೋಶದ ಪುನರುಜ್ಜೀವನ) ನೀಡುವ ಮೂಲಕ ಮಗುವನ್ನು ಉಳಿಸಲು ಕ್ರಮಗಳನ್ನು ಪ್ರಾರಂಭಿಸಿದರು.

ಮಗುವಿನ ಸ್ಥಿತಿ ಗಂಭೀರವಾದ ತಕ್ಷಣ, ವಿಮಾನ ತಂಡವು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಮಗುವನ್ನು ಕಿಮ್ಸ್-ಕಿಂಗ್ಸ್‌ವೇ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಜ್ಞಾಹೀನಳಾಗಿದ್ದು, ವೆಂಟಿಲೇಟರ್‌ನಲ್ಲಿದ್ದಾಳೆ ಎಂದು ತಿಳಿಸಿದರು, ಸ್ಥಿತಿ ಚಿಂತಾಜನಕವಾಗಿದೆ.

ಮತ್ತಷ್ಟು ಓದಿ: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರ ವಿಮಾನದಲ್ಲಿ 2 ವರ್ಷದ ಮಗು ಏಕಾಏಕಿ ಉಸಿರಾಟ ನಿಲ್ಲಿಸಿಬಿಡ್ತು, ಮುಂದೇನಾಯ್ತು, ವಿವರ ಇಲ್ಲಿದೆ

ಕಾರ್ಡಿಯೋಪಲ್ಮನರಿ ಎನ್ನುವುದು ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಾಗದಿದ್ದಾಗ ಅಥವಾ ಅವನ ಹೃದಯ ಬಡಿತವನ್ನು ನಿಲ್ಲಿಸಿದಾಗ ಬಳಸಲಾಗುವ ಒಂದು ತಂತ್ರವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್