ವಿಮಾನದ ಸಮಯ ಬದಲಾವಣೆಯಾಗಿದ್ದರಿಂದ ಈ ಜೋಡಿಯ ಪ್ರಾಣವೇ ಹೋಯ್ತು

ಈ ಜೋಡಿ ಮದುವೆಯಾಗಿ ಎಲ್ಲರಂತೆ ಖುಷಿಯಾಗಿರುವ ಕನಸ ಹೊತ್ತಿತ್ತು, ನೈರೋಬಿಗೆ ತೆರಳಿ ಮದುವೆಯಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಸಂತೋಷದಲ್ಲಿದ್ದರು. ವಿಮಾನ ಸಮಯ ಬದಲಾವಣೆಯು ಅವರಿಬ್ಬರ ಸಾವಿಗೆ ಕಾರಣವಾಯಿತು. ಮುಂಬೈನ ಹೋಟೆಲ್​ ಒಂದರಲ್ಲಿ ಈ ಜೋಡಿ ಉಳಿದುಕೊಂಡಿದ್ದರು, ನೈರೋಬಿಗೆ ಪ್ರಯಾಣ ಬೆಳೆಸುವುದರಲ್ಲಿದ್ದರು, ಆದರೆ ವಿಧಿ ಬೇರೆಯೇ ಇತ್ತು. ವಿಮಾನ ಸಮಯ ಬದಲಾಗಿತ್ತು, ಹೋಟೆಲ್​ನಿಂದ ಸ್ವಲ್ಪ ತಡವಾಗಿ ಹೊರಟರಾಯಿತು ಎಂದುಕೊಂಡಿದ್ದರು. ಆದರೆ ಅಷ್ಟರಲ್ಲೇ ಹೋಟೆಲ್​ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ.

ವಿಮಾನದ ಸಮಯ ಬದಲಾವಣೆಯಾಗಿದ್ದರಿಂದ ಈ ಜೋಡಿಯ ಪ್ರಾಣವೇ ಹೋಯ್ತು
ಹೋಟೆಲ್Image Credit source: NDTV
Follow us
ನಯನಾ ರಾಜೀವ್
|

Updated on: Aug 29, 2023 | 8:37 AM

ಈ ಜೋಡಿ ಮದುವೆಯಾಗಿ ಎಲ್ಲರಂತೆ ಖುಷಿಯಾಗಿರುವ ಕನಸ ಹೊತ್ತಿತ್ತು, ನೈರೋಬಿಗೆ ತೆರಳಿ ಮದುವೆಯಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಸಂತೋಷದಲ್ಲಿದ್ದರು. ವಿಮಾನ ಸಮಯ ಬದಲಾವಣೆಯು ಅವರಿಬ್ಬರ ಸಾವಿಗೆ ಕಾರಣವಾಯಿತು. ಮುಂಬೈನ ಹೋಟೆಲ್​ ಒಂದರಲ್ಲಿ ಈ ಜೋಡಿ ಉಳಿದುಕೊಂಡಿದ್ದರು, ನೈರೋಬಿಗೆ ಪ್ರಯಾಣ ಬೆಳೆಸುವುದರಲ್ಲಿದ್ದರು, ಆದರೆ ವಿಧಿ ಬೇರೆಯೇ ಇತ್ತು. ವಿಮಾನ ಸಮಯ ಬದಲಾಗಿತ್ತು, ಹೋಟೆಲ್​ನಿಂದ ಸ್ವಲ್ಪ ತಡವಾಗಿ ಹೊರಟರಾಯಿತು ಎಂದುಕೊಂಡಿದ್ದರು. ಆದರೆ ಅಷ್ಟರಲ್ಲೇ ಹೋಟೆಲ್​ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ.

ಗುಜರಾತ್​ನ ಕಚ್ ಜಿಲ್ಲೆಯ ಸರ್​ಪಂಚ್ ಸುರೇಶ್ ರಾಕಾ ಅವರು ಕಿಶನ್ , ರೂಪಲ್ ಹಾಗೂ ಅವರ ತಾಯಿ ಮತ್ತು ಸಹೋದರಿಯೊಂದಿಗೆ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಮಧ್ಯಾಹ್ನ ಹೋಟೆಲ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಶನ್ ಹಲೈ (28), ರೂಪಲ್ ವಕಾರಿಯಾ (25) ಮತ್ತು ಇನ್ನೊಬ್ಬ ವ್ಯಕ್ತಿ ಕಾಂತಿಲಾಲ್ ವರ (50) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ರೂಪಲ್ ಅವರ ತಾಯಿ ಮಂಜುಳಾಬೆನ್ (49), ಸಹೋದರಿ ಅಲ್ಪಾ (19) ಮತ್ತು ಅಸ್ಲಂ ಶೇಖ್ (48) ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಶನ್ ಹಲೈ ಮತ್ತು ಅವರ ಪ್ರೇಯಸಿ ರೂಪಲ್ ವಕಾರಿಯಾ ಹಲವು ವರ್ಷಗಳಿಂದ ನೈರೋಬಿಯಲ್ಲಿ ವಾಸಿಸುತ್ತಿದ್ದರು. ಕಿಶನ್ ಮತ್ತು ರೂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ನೈರೋಬಿಗೆ ಬಂದ ನಂತರ ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದರು. ಅಲ್ಲಿ ಅವರು ಹಲವಾರು ವರ್ಷಗಳಿಂದ ತಮ್ಮ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದರು.

ಮತ್ತಷ್ಟು ಓದಿ: ಮುಂಬೈನ ಗ್ಯಾಲಕ್ಸಿ ಹೋಟೆಲ್​ನಲ್ಲಿ ಅಗ್ನಿ ಅವಘಡ, 3 ಮಂದಿ ಸಾವು

ಕಿಶನ್, ರೂಪಲ್ ಮತ್ತು ಅವರ ಕುಟುಂಬ ಸುಮಾರು ಒಂದು ತಿಂಗಳ ಹಿಂದೆ ಕಿಶನ್ ಅವರ ಕಿರಿಯ ಸಹೋದರನ ಮದುವೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು. ಕಿಶನ್ ಸ್ವಲ್ಪ ವರ್ಷಗಳ ಕಾಲ ರಾಂಪರ್ ಗ್ರಾಮದಲ್ಲಿದ್ದ , ಕಿಶನ್ 13 ವರ್ಷದವನಿದ್ದಾಗ ಹೆತ್ತವರ ಜತೆ ನೈರೋಬಿಗೆ ತೆರಳಿದ್ದ. ಗುಜರಾತ್‌ನಲ್ಲಿ ಶಾಪಿಂಗ್ ಮುಗಿಸಿ ಸಂಬಂಧಿಕರನ್ನು ಭೇಟಿ ಮಾಡಿದ ನಂತರ ಕಿಶನ್, ರೂಪಲ್, ಆಕೆಯ ಪೋಷಕರು ಮತ್ತು ಸಹೋದರಿ ಶನಿವಾರ ಭಾರತದಿಂದ ನೈರೋಬಿಗೆ ತೆರಳಬೇಕಿತ್ತು.

ಅಹಮದಾಬಾದ್​ನಿಂದ ವಿಮಾನದಲ್ಲಿ ಮುಂಬೈ ತಲುಪಿದ್ದರು, ವಿಮಾನ ತಡವಾಗುತ್ತದೆ ಎಂದ ಕಾರಣ ವಿಮಾನಯಾನ ಸಂಸ್ಥೆಯು ಅವರಿಗೆ ಸಾಂತಾಕ್ರೂಜ್ ಬಳಿಯ ಹೋಟೆಲ್​ನಲ್ಲಿ ವಸತಿ ಕಲ್ಪಿಸಿತ್ತು.

ಪ್ರಭಾತ್ ಕಾಲೋನಿಯ ನಾಲ್ಕು ಅಂತಸ್ತಿನ ಗ್ಯಾಲಕ್ಸಿ ಹೋಟೆಲ್‌ನ ಮೂರನೇ ಮಹಡಿಯಲ್ಲಿ ಭಾನುವಾರ ಮಧ್ಯಾಹ್ನ 1.10ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ ರೂಪಲ್ ವಕಾರಿಯಾ (25), ಕಿಶನ್ (28) ಮತ್ತು ಕಾಂತಿಲಾಲ್ ಗೋರ್ಧನ್ (48) ಮೃತಪಟ್ಟಿದ್ದಾರೆ. ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳು, ಅಷ್ಟೇ ಸಂಖ್ಯೆಯ ನೀರಿನ ಟ್ಯಾಂಕರ್‌ಗಳು ಮತ್ತು ಇತರ ಉಪಕರಣಗಳ ಸಹಾಯವನ್ನು ತೆಗೆದುಕೊಳ್ಳಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?