Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆಗಳು ಹೊಲವನ್ನು ಹಾಳು ಮಾಡಿದ್ದಕ್ಕೆ, ಪಕ್ಕದ ಮನೆಯವನ ಗುಪ್ತಾಂಗವನ್ನು ಕಚ್ಚಿದ ವ್ಯಕ್ತಿ

ಮೇಕೆಗಳು ಹೊಲವನ್ನು ಹಾಳು ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಗುಪ್ತಾಂಗವನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಷಹಜಹಾನ್​ಪುರದ ರೋಜಾದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಖಾಸಗಿ ಅಂಗವನ್ನು ಕಚ್ಚಿದ್ದಾನೆ. ರಾತ್ರಿ ಹೊತ್ತು ಪಕ್ಕದ ಮನೆಯವರ ಮೇಕೆಗಳು ಈತನ ಹೊಲದಲ್ಲಿ ಓಡಾಡಿ ಬೆಳೆಯನ್ನು ನಾಶಪಡಿಸಿದ್ದವು.

ಮೇಕೆಗಳು ಹೊಲವನ್ನು ಹಾಳು ಮಾಡಿದ್ದಕ್ಕೆ, ಪಕ್ಕದ ಮನೆಯವನ ಗುಪ್ತಾಂಗವನ್ನು ಕಚ್ಚಿದ ವ್ಯಕ್ತಿ
ಮೇಕೆಗಳು
Follow us
ನಯನಾ ರಾಜೀವ್
|

Updated on: Aug 29, 2023 | 12:02 PM

ಮೇಕೆಗಳು ಹೊಲವನ್ನು ಹಾಳು ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಗುಪ್ತಾಂಗವನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಷಹಜಹಾನ್​ಪುರದ ರೋಜಾದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಖಾಸಗಿ ಅಂಗವನ್ನು ಕಚ್ಚಿದ್ದಾನೆ. ರಾತ್ರಿ ಹೊತ್ತು ಪಕ್ಕದ ಮನೆಯವರ ಮೇಕೆಗಳು ಈತನ ಹೊಲದಲ್ಲಿ ಓಡಾಡಿ ಬೆಳೆಯನ್ನು ನಾಶಪಡಿಸಿದ್ದವು. ಗಾಯಗೊಂಡಿರುವ ಕುರಿ ಮಾಲೀಕನಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರನ್ನು ಶಹಜಹಾನ್​ಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರ ಸ್ಥಿತಿ ಸ್ಥಿರವಾಗಿದೆ.

ಮೇಕೆಗಳ ವಿಚಾರವಾಗಿ ಗಂಗಾರಾಮ್ ಸಿಂಗ್ ಜತೆಗೆ ಪದೇ ಪದೇ ಜಗಳವಾಗುತ್ತಿತ್ತು, ಈ ಬಾರಿ ಕೋಪ ತಾರಕಕ್ಕೇರಿತ್ತು, ಕೋಪದಲ್ಲಿ ತನ್ನನ್ನು ಕೆಳಗೆ ಒದ್ದು ಬೀಳಿಸಿ ಗುಪ್ತಾಂಗವನ್ನು ಕಚ್ಚಿದ್ದಾನೆ ಎಂದಿದ್ದಾರೆ. ಪೊಲೀಸರು ಮೊದಲು ಅವರನ್ನು ಸಂಪರ್ಕಿಸಿದಾಗ ಎಫ್​ಐಆರ್ ದಾಖಲಿಸಲು ಒಪ್ಪಿಗೆ ನೀಡಿರಲಿಲ್ಲ, ಬಳಿಕ ಒಪ್ಪಿಗೆ ಸೂಚಿಸಿದ್ದಾರೆ.

ಮತ್ತಷ್ಟು ಓದಿ: ಕೇರಳ ಬಸ್​ನಲ್ಲಿ ನಟಿಗೆ ಗುಪ್ತಾಂಗ ತೋರಿಸಿ ಜೈಲು ಪಾಲಾದ ಯುವಕ ಜಾಮೀನಿನ ಮೇಲೆ ಬಿಡುಗಡೆ, ಹೂವಿನ ಮಾಲೆ ಹಾಕಿ ಸ್ವಾಗತ

ವೈದ್ಯರ ಪ್ರಕಾರ ಮೇಲ್ಮೈ ಗಾಯಗಳಷ್ಟೇ ಆಗಿದೆ, ಆಂತರಿಕ ನಾಳಗಳಿಗೆ ಯಾವುದೇ ಹಾನಿಯಾಗಿಲ್ಲ, ಕಾಲಾನಂತರದಲ್ಲಿ ರೋಗಿ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ. ಗಂಗಾರಾಮ್​ಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2017ರಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು, ಶಹಜಹಾನ್​ ಪುರದಲ್ಲಿ ವ್ಯಕ್ತಿಯೊಬ್ಬ ಗೋಡೆಯೊಂದನ್ನು ನಿರ್ಮಿಸುತ್ತಿದ್ದ ಅದಕ್ಕೆ ಪಕ್ಕದ ಮನೆಯಲ್ಲೇ ವಾಸವಿದ್ದ ದಂಪತಿ ವಿರೋಧಿಸಿದ್ದರು, ಮಾತಿಗೆ ಮಾತು ಬೆಳದು ಕೊನೆಗೆ ಮಹಿಳೆ ಪಕ್ಕದ ಮನೆಯ ವ್ಯಕ್ತಿಯ ಗುಪ್ತಾಂಗವನ್ನು ಕಚ್ಚಿದ್ದ ನಾಚಿಕೆಗೇಡಿನ ಘಟನೆ ನಡೆದಿತ್ತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹನುಮ ಜಯಂತಿ: ಹನುಮಾನ್ ತೇರು ಎಳೆದ ಪ್ರಲ್ಹಾದ್ ಜೋಶಿ
ಹನುಮ ಜಯಂತಿ: ಹನುಮಾನ್ ತೇರು ಎಳೆದ ಪ್ರಲ್ಹಾದ್ ಜೋಶಿ
ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ: ರೋಗ ರುಜಿನ ಹೆಚ್ಚಾಗೋ ಸಾಧ್ಯತೆ, ಎಚ್ಚರ
ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ: ರೋಗ ರುಜಿನ ಹೆಚ್ಚಾಗೋ ಸಾಧ್ಯತೆ, ಎಚ್ಚರ
ಎಕ್ಸ್​ಪೋ ಉದ್ಘಾಟಿಸಿದ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್​ಡಿ
ಎಕ್ಸ್​ಪೋ ಉದ್ಘಾಟಿಸಿದ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್​ಡಿ
ವಕ್ಫ್ ಪ್ರತಿಭಟನೆ;ಬಂಗಾಳದ ಮುರ್ಷಿದಾಬಾದ್‌ನಲ್ಲಿ 110ಕ್ಕೂ ಹೆಚ್ಚು ಜನರ ಬಂಧನ
ವಕ್ಫ್ ಪ್ರತಿಭಟನೆ;ಬಂಗಾಳದ ಮುರ್ಷಿದಾಬಾದ್‌ನಲ್ಲಿ 110ಕ್ಕೂ ಹೆಚ್ಚು ಜನರ ಬಂಧನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್