ಚಾಮರಾಜನಗರ: ಕಾಡಂಚಿನ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ ಹಿಡಿದ ಕೂಂಬಿಂಗ್ ಕಿಂಗ್ ಬಲರಾಮ ತಂಡ

ಒಂಟಿ ಕಾಡಾನೆ ಬೆಳೆ ನಾಶ ಮಾಡುತ್ತಿದ್ದ ಹಿನ್ನಲೆ ಪುಂಡಾನೆಯನ್ನ ಸೆರೆ ಹಿಡಿದು ನಮ್ಮ ಬೆಳೆಗಳನ್ನ ರಕ್ಷಿಸಿ ಎಂದು ರೈತರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅದೇ ರೀತಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೂನ್ನಾಚಿಯಲ್ಲಿ ನಿನ್ನೆಆ.18) ಅರಣ್ಯಾಧಿಕಾರಿಗಳು ಕೂಂಬಿಂಗ್ ಎಸ್ಕ್ಪರ್ಟ್ ಬಲರಾಮ ನೇತೃತ್ವದ 6 ಸಾಕಾನೆಗಳೊಂದಿಗೆ ಕೂಂಬಿಂಗ್ ಕಾರ್ಯಚರಣೆ ನಡೆಸಿ ಆನೆ ಸೆರೆ ಹಿಡಿಯಲಾಗಿದೆ.

Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಆಯೇಷಾ ಬಾನು

Updated on:Aug 19, 2023 | 12:22 PM

ಚಾಮರಾಜನಗರ, ಆ. 19: ಗಡಿನಾಡು ಚಾಮರಾಜನಗರ(Chamarajanagar ) ಜಿಲ್ಲೆ ಅತಿ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಚಾಮರಾಜನಗರ ಸುತ್ತ ಮುತ್ತ ಬಂಡಿಪುರ, ಬಿಆರ್​ಟಿ ಹಾಗೂ ಮಲೆಮಹದೇಶ್ವರ ಬೆಟ್ಟವಿದ್ದು ಕೇರಳ ಹಾಗೂ ತಮಿಳುನಾಡಿನ ಗಡಿ ಭಾಗವನ್ನ ಹಂಚಿಕೊಂಡಿದೆ. ರಾಜ್ಯದಲ್ಲಿ ಅತಿ ಹೆಚ್ಚು ಆನೆ ಹಾಗೂ ಚಿರತೆ ಹೊಂದಿರುವ ಜಿಲ್ಲೆಯೆಂಬ ಖ್ಯಾತಿ ಕೂಡ ಚಾಮರಾಜನಗರಕ್ಕಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಒಂಟಿ ಸಲಗವೊಂದು(Wild Elephant) ಪದೇ ಪದೇ ಜಮೀನುಗಳಿಗೆ ನುಗ್ಗಿ ಬೆಳೆದ ಬೆಳೆಗಳನ್ನ ತಿಂದು ತೇಗುತ್ತಿತ್ತು. ಸದ್ಯ ಈಗ ಕೂಂಬಿಂಗ್ ಕಿಂಗ್ ಬಲರಾಮ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಕಾಡಂಚಿನ ಜನರಿಗೆ ಉಪಟಳ ನೀಡ್ತಿದ್ದ ಪುಂಡಾನೆಯನ್ನು ಸೆರೆ ಹಿಡಿದಿದೆ.

ಒಂಟಿ ಕಾಡಾನೆ ಬೆಳೆ ನಾಶ ಮಾಡುತ್ತಿದ್ದ ಹಿನ್ನಲೆ ಪುಂಡಾನೆಯನ್ನ ಸೆರೆ ಹಿಡಿದು ನಮ್ಮ ಬೆಳೆಗಳನ್ನ ರಕ್ಷಿಸಿ ಎಂದು ರೈತರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅದೇ ರೀತಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೂನ್ನಾಚಿಯಲ್ಲಿ ನಿನ್ನೆಆ.18) ಅರಣ್ಯಾಧಿಕಾರಿಗಳು ಕೂಂಬಿಂಗ್ ಎಸ್ಕ್ಪರ್ಟ್ ಬಲರಾಮ ನೇತೃತ್ವದ 6 ಸಾಕಾನೆಗಳೊಂದಿಗೆ ಕೂಂಬಿಂಗ್ ಕಾರ್ಯಚರಣೆ ಆರಂಭಿಸಿ ನಿನ್ನೆ ರಾತ್ರಿ 9.30 ರ ವೇಳೆಗೆ ಕೂನೆಗೂ ಪುಂಡಾನೆಯನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಶು ವೈದ್ಯಾಧಿಕಾರಿ ರಮೇಶ್ ಕಾಡಾನೆಗೆ ಮತ್ತು ಬರುವ ಅರವಳಿಕೆಯನ್ನ ನೀಡುವ ಮೂಲಕ ಸೆರೆ ಹಿಡಿಯಲಾಗಿದೆ. ಹೀಗೆ ಸೆರೆ ಹಿಡಿದ ಕಾಡಾನೆಯನ್ನ ಮಲೆಹದೇಶ್ವರ ವನ್ಯಧಾಮದ ಆನೆ ಬಿಡಾರದಲ್ಲಿ 3 ತಿಂಗಳುಗಳ ಕಾಲ ಪ್ರತ್ಯೇಕವಾಗಿಟ್ಟು ಬಳಿಕ ತರಬೇತಿ ನೀಡಲಾಗುತ್ತೆ. ಸದ್ಯ ಪುಂಡಾನೆ ಸೆರೆ ಹಿಡಿದ ಪರಿಣಾಮ ಕಾಡಂಚಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಇದೇನಿದು ಬಂದೂಕು ಹಿಡಿದು ದಾಳಿಂಬೆ ತೋಟ ಕಾಯುವ ಪರಿಸ್ಥಿತಿ ಬಂದುಬಿಟ್ಟಿತೇ ರೈತನಿಗೆ!? ದಾಳಿಂಬೆಗೆ ಬಂದಿದೆ ಚಿನ್ನದ ಬೆಲೆ

ಬೀದಿ ನಾಯಿಗಳ ದಾಳಿಗೆ ಐದು ಮೇಕೆಗಳು ಬಲಿ

ಬೆಳಗಾವಿ ‌ಜಿಲ್ಲೆ ಚಿಕ್ಕೋಡಿ ತಾಲೂಕಿನ‌ ಬೇಡಕಿಹಾಳ‌ ಗ್ರಾಮದ ಹೊರವಲಯದ ತೋಟದಲ್ಲಿ ಬೀದಿ ನಾಯಿಗಳ ದಾಳಿಗೆ 5 ಮೇಕೆಗಳು ಬಲಿಯಾಗಿವೆ. ಮಹಾದೇವ ಮೋಹಿತೆ ಎಂಬುವವರಿಗೆ ಸೇರಿದ ಐದು‌ ಮೇಕೆಗಳು ಮೃತಪಟ್ಟಿದ್ದು ರೈತ ಕಂಗಾಲಾಗಿದ್ದಾರೆ. ತೋಟದ ವಸತಿಯ ಜನ ಬಿಡಾಡಿ ನಾಯಿಗಳ ಹಾವಳಿಗೆ ಬೇಸತ್ತಿದ್ದು ಈ ಹಿಂದೆಯೂ ಸಹ ದನ ಕರುಗಳ ಮೇಲೆ‌ ದಾಳಿ ನಡೆದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 10:35 am, Sat, 19 August 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್