ಕೇರಳ ಬಸ್ನಲ್ಲಿ ನಟಿಗೆ ಗುಪ್ತಾಂಗ ತೋರಿಸಿ ಜೈಲು ಪಾಲಾದ ಯುವಕ ಜಾಮೀನಿನ ಮೇಲೆ ಬಿಡುಗಡೆ, ಹೂವಿನ ಮಾಲೆ ಹಾಕಿ ಸ್ವಾಗತ
ಕೇರಳ ಬಸ್ ಒಂದರಲ್ಲಿ ಮಲಯಾಳಂ ನಟಿಗೆ ಗುಪ್ತಾಂಗ ತೋರಿ ಜೈಲು ಪಾಲಾಗಿದ್ದ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತನಿಗೆ ಹೂವಿನ ಮಾಲೆ ಹಾಕಿ ಸ್ನೇಹಿತರು ಸ್ವಾಗತಿಸಿದ್ದಾರೆ.
ಕೇರಳ ಬಸ್ ಒಂದರಲ್ಲಿ ಮಲಯಾಳಂ ನಟಿಗೆ ಗುಪ್ತಾಂಗ ತೋರಿ ಜೈಲು ಪಾಲಾಗಿದ್ದ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತನಿಗೆ ಹೂವಿನ ಮಾಲೆ ಹಾಕಿ ಸ್ನೇಹಿತರು ಸ್ವಾಗತಿಸಿದ್ದಾರೆ. ಈ ವ್ಯಕ್ತಿ ಏನು ಮಹಾ ಕಾರ್ಯ ಮಾಡಿದ್ದಾನೆಂದು ಅರ್ಥವಾಗುತ್ತಿಲ್ಲ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ. ಮಾಡೆಲ್ ಒಬ್ಬರು ಬಸ್ನಲ್ಲಿ ನಡೆದ ಘಟನೆಯ ವಿಡಿಯೋವನ್ನು ಶೇರ್ ಮಾಡಿ ಭಾರೀ ವಿವಾದ ಸೃಷ್ಟಿಸಿದ್ದರು. ಕೇರಳದ ರೂಪದರ್ಶಿ ಹಾಗೂ ನಟಿ ನಂದಿತಾ ಶಂಕರ್ಗೆ ಯುವಕನೊಬ್ಬ ಗುಪ್ತಾಂಗ ತೋರಿಸಿದ್ದಾಗಿ ನಟಿ ಆರೋಪ ಮಾಡಿದ್ದರು, ನಟಿ ತ್ರಿಶೂರ್ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿರುವಾಗ ಕೆಎಸ್ಆರ್ಟಿಸಿ (KSRTC) ಬಸ್ನಲ್ಲಿ ಈ ಘಟನೆ ನಡೆದಿದೆ.
ಯುವಕ ಅಂಗಮಾಲಿಯಲ್ಲಿ ಬಸ್ ಹತ್ತಿದ್ದಾಗಿ ನಟಿ ತಿಳಿಸಿದ್ದಾರೆ. ಮೂವರು ಕುಳಿತುಕೊಳ್ಳುವ ಸೀಟ್ ಆಗಿತ್ತು. ಯುವಕ ಮಾಡೆಲ್ ಹಾಗೂ ಇನ್ನೊಂದು ಯುವತಿಯ ಮಧ್ಯೆ ಕುಳಿತಿದ್ದರು, ಯುವಕನ ಖಾಸಗಿ ಅಂಗವನ್ನು ತೋರಿಸಿದ್ದಾಗಿ ನಟಿ ಆರೋಪ ಮಾಡಿದ್ದಾರೆ. ಸೆಲ್ಫಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ನಟಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಬಸ್ ಹತ್ತಿದ ಬಳಿಕ ಯುವಕ ತನ್ನ ದೇಹ ಸ್ಪರ್ಶಿಸಿದ್ದ, ಅಂಗಾಗ ಪ್ರದರ್ಶಿಸಿ ಕೆಲವು ಲೈಂಗಿಕ ಭಾಗಗಳನ್ನು ತೋರಿಸಿದ್ದಾರೆ. ನಾನು ಕಿಟಿಕಿ ಪಕ್ಕ ಕುಳಿತಿದ್ದೆ. ಅವನು ನಾನೆಲ್ಲಿಗೆ ಹೋಗುತ್ತೇನೆ ಎಂದು ಕೇಳಿದ. ಅದಕ್ಕೆ ಉತ್ತರಿಸಿದ್ದೆ.
ನಂತರ ನನಗೆ ನನ್ನ ದೇಹವನ್ನು ಟಚ್ ಮಾಡಿದ ಅನುಭವವಾಗಿದೆ. ನಾನು ಅವನನ್ನು ನೋಡಿದಾಗ ಆತ ಇನ್ನೊಂದು ಕೈಯಲ್ಲಿ ಆತನ ಗುಪ್ತಾಂಗವನ್ನು ಸ್ಪರ್ಶಿಸಿದ್ದು ಕಾಣಿಸಿದೆ. ನಂತರ ಆತ ತನ್ನ ಪ್ಯಾಂಟ್ ಬಿಚ್ಚಿದ್ದಾನೆ. ನಾನು ಏನು ಮಾಡಬೇಕೆಂದು ತಿಳಿಯದೆ ವಿಡಿಯೋ ಮಾಡಿದೆ. ನಂತರ ಆತನ ಸಮಸ್ಯೆ ಏನು ಎಂದು ಪ್ರಶ್ನೆ ಮಾಡಿದೆ. ಆತ ತಟ್ಟನೆ ತನ್ನ ಪ್ಯಾಂಟ್ ಜಿಪ್ ಹಾಕಿ ಅಲ್ಲಿಂದ ಎದ್ದಿದ್ದ ಎಂದಿದ್ದಾರೆ.
ಮತ್ತಷ್ಟು ಓದಿ: ಕಾಲೇಜು ಪ್ರೇಮಿಗಳಾಗಿದ್ದರು! ವರ್ಷದ ಹಿಂದೆ ಮದುವೆಯಾದರು -ಆತ ಪಿಎಸ್ಐ, ಆದರೆ IAS ಪರೀಕ್ಷೆ ತಯಾರಿಯಲ್ಲಿದ್ದ ಹೆಂಡತಿ ಅನುಮಾನಾಸ್ಪದ ಸಾವು
ಈ ಎಲ್ಲ ಬೆಳವಣಿಗಳನ್ನು ನೋಡಿ ಕಂಡಕ್ಟರ್ ಆಕೆ ದೂರು ಕೊಡ್ತೀರಾ ಎಂದು ಕೇಳಿದ್ದರು, ಆಕೆ ಹೌದು ಎಂದಿದ್ದರು, ಏರ್ಪೋರ್ಟ್ ತಲುಪಿದಾಗ ಆತ ಓಡಿಹೋಗಲು ಪ್ರಯತ್ನಿಸಿದ್ದ, ಡ್ರೈವರ್ ಹಾಗೂ ಕಂಡಕ್ಟರ್ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದೇನೆ ಎಂದು ತಿಳಿಸಿದ್ದರು, ಬಸ್ನಲ್ಲಿದ್ದವರು ಹಾಗೂ ಪೊಲೀಸರು ತುಂಬಾ ಸಹಾಯ ಮಾಡಿದರು ಎಂದು ಹೇಳಿದ್ದರು.
ಕೇರಳದ ಕೆಎಸ್ಆರ್ಟಿಸಿ ಬಸ್ನಲ್ಲಿ ಮಲಯಾಳಂ ನಟಿ ಹಾಗೂ ಮಾಡೆಲ್ಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪದ ಮೇಲೆ 27 ವರ್ಷದ ಯುವಕನನ್ನು ಕೇರಳ ಪೊಲೀಸರು ಬಂಧಿಸಿದ್ದರು ಇದೀಗ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದ್ದು, ಆತನನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಂಧಿತ ಯುವಕನನ್ನು ಸಾವದ್ ಎಂದು ಗುರುತಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸವಾದ್ ಅವರಿಗೆ ಸ್ವಾಗತ ಕೋರಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ