Odisha Train: ಒಡಿಶಾದಲ್ಲಿ ಹಳಿ ತಪ್ಪಿದ ಖಾಸಗಿ ರೈಲು

ಒಡಿಶಾದಲ್ಲಿ ಖಾಸಗಿ ಗೂಡ್ಸ್​ ರೈಲೊಂದು ಹಳಿ ತಪ್ಪಿದೆ.  ಯಾವುದೇ ಸಾವು ನೋವಿನ ಕುರಿತು ವರದಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಒಡಿಶಾದಲ್ಲಿ ತ್ರಿವಳಿ ರೈಲುಗಳ ಅಪಘಾತ ಸಂಭವಿಸಿ 275 ಮಂದಿ ಮೃತಪಟ್ಟು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Odisha Train: ಒಡಿಶಾದಲ್ಲಿ ಹಳಿ ತಪ್ಪಿದ ಖಾಸಗಿ ರೈಲು
ಗೂಡ್ಸ್​ ರೈಲುImage Credit source: Odisha TV
Follow us
ನಯನಾ ರಾಜೀವ್
|

Updated on:Jun 05, 2023 | 12:02 PM

ಒಡಿಶಾದಲ್ಲಿ ಖಾಸಗಿ ಗೂಡ್ಸ್​ ರೈಲೊಂದು ಹಳಿ ತಪ್ಪಿದೆ.  ಯಾವುದೇ ಸಾವು ನೋವಿನ ಕುರಿತು ವರದಿಯಾಗಿದೆ. ಖಾಸಗಿ ಕಾರ್ಖಾನೆಯೊಂದರ ರೈಲು ಇದಾಗಿದ್ದು, ಸುಣ್ಣದ ಕಲ್ಲುಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ.ಈ ರೈಲು ಹಾಗೂ ರೈಲ್ವೆ ಇಲಾಖೆಗೆ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ.

DUNGRI ಲೈಮ್‌ಸ್ಟೋನ್ ಮೈನ್ಸ್ ಮತ್ತು ACC BARGARH (ಈಗ ಅದಾನಿ ಗ್ರೂಪ್‌) ಸಿಮೆಂಟ್ ಪ್ಲಾಂಟ್ ನಡುವೆ ಖಾಸಗಿ ನ್ಯಾರೋ ಗೇಜ್ ರೈಲು ಮಾರ್ಗವಿದೆ ಅಲ್ಲಿ ಈ ರೈಲು ಸಂಚರಿಸುತ್ತಿತ್ತು, ಲೈನ್, ವ್ಯಾಗನ್, ಲೊಕೊ ಎಲ್ಲವೂ ಖಾಸಗಿಯಾಗಿದ್ದು ಇದು ಭಾರತೀಯ ರೈಲ್ವೆ ವ್ಯವಸ್ಥೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ಆ ರೈಲು ಮಾರ್ಗದಲ್ಲಿ ಇಂದು ಮುಂಜಾನೆ ಹಳಿ ತಪ್ಪಿದೆ.

ಕಳೆದ ಎರಡು ದಿನಗಳ ಹಿಂದೆ ಒಡಿಶಾದಲ್ಲಿ ತ್ರಿವಳಿ ರೈಲುಗಳ ಅಪಘಾತ ಸಂಭವಿಸಿ 275 ಮಂದಿ ಮೃತಪಟ್ಟು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಖಾಸಗಿ ಗೂಡ್ಸ್​ ರೈಲೊಂದು ಹಳಿ ತಪ್ಪಿರುವ ಘಟನೆ ಬರ್ಘಾ ಜಿಲ್ಲೆಯಲ್ಲಿ ನಡೆದಿದೆ. ಐದು ಬೋಗಿಗಳು ಹಳಿ ತಪ್ಪಿವೆ. ಸಾವು ನೋವಿನ ಬಗ್ಗೆ ಇನ್ನೂ ವರದಿಯಾಗಿಲ್ಲ ಜೂ.2ರಂದು ಬಹನಾಗದಲ್ಲಿ 3 ರೈಲುಗಳ ನಡುವೆ ಡಿಕ್ಕಿಯಾಗಿತ್ತು.

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದಲ್ಲಿ 3 ರೈಲುಗಳ ನಡುವೆ ಡಿಕ್ಕಿಯಾಗಿ 257 ಮಂದಿ ಸಾವನ್ನಪ್ಪಿದ್ದರು. ಖಾಸಗಿ ಕಾರ್ಖಾನೆಯೊಂದರ ರೈಲು ಇದಾಗಿದ್ದು, ಸುಣ್ಣದ ಕಲ್ಲುಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ.

ಸೋಮವಾರ, ಮೂರು ರೈಲುಗಳ ಘರ್ಷಣೆಯಿಂದ ಹಾನಿಗೊಳಗಾದ ಹಳಿಗಳನ್ನು ಸರಿಪಡಿಸಿದ ನಂತರ ಬಗನಗಾ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲು ಸೇವೆಗಳು ಪುನರಾರಂಭಗೊಂಡವು. ಭಾರೀ ಘರ್ಷಣೆಯ ಸುಮಾರು 51 ಗಂಟೆಗಳ ನಂತರ, ಮುಖ್ಯ ಮಾರ್ಗದ ಎರಡೂ ಟ್ರ್ಯಾಕ್‌ಗಳಲ್ಲಿ ಸೇವೆಗಳು ಪುನರಾರಂಭಗೊಂಡವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:21 am, Mon, 5 June 23