ಇಸ್ರೋ ತಂಡ ಭಾರತಕ್ಕೆ ಸೇರಿದ್ದು, ಯಾವುದೇ ರಾಜಕೀಯ ಘಟಕವಲ್ಲ: ಚಂದ್ರಯಾನ-3 ಬಗ್ಗೆ ಮಮತಾ ಬ್ಯಾನರ್ಜಿ

Chandrayaan-3: ತನ್ನ ರಾಜ್ಯ ಬಂಗಾಳ ಸೇರಿದಂತೆ ದೇಶದಾದ್ಯಂತದ ವಿಜ್ಞಾನಿಗಳು ಈ ಕಾರ್ಯಾಚರಣೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಭಾರತದ ಚಂದ್ರನ ಅನ್ವೇಷಣೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಿದ ಎಲ್ಲರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವವನ್ನು ತಲುಪಲು ಹತ್ತಿರವಾಗಿರುವುದರಿಂದ, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಮತ್ತು ಅದರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಹುರಿದುಂಬಿಸಬೇಕು ಎಂದು ಟಿಎಂಸಿ ಮುಖ್ಯಸ್ಥರು ಹೇಳಿದ್ದಾರೆ.

ಇಸ್ರೋ ತಂಡ ಭಾರತಕ್ಕೆ ಸೇರಿದ್ದು, ಯಾವುದೇ ರಾಜಕೀಯ ಘಟಕವಲ್ಲ: ಚಂದ್ರಯಾನ-3 ಬಗ್ಗೆ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on: Aug 22, 2023 | 9:36 PM

ಕೊಲ್ಕತ್ತಾ ಆಗಸ್ಟ್ 22: ಚಂದ್ರಯಾನ- 3 (Chandrayaan 3) “ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯ”. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಂಡವು ಭಾರತಕ್ಕೆ ಸೇರಿದೆ ಮತ್ತು ಅದರ ಕಠಿಣ ಪರಿಶ್ರಮ ವಿಜ್ಞಾನಿಗಳಿಂದ ಬಂದಿದೆ. ಅದು ರಾಜಕೀಯ ಘಟಕವಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಂಗಳವಾರ ಹೇಳಿದ್ದಾರೆ. “ಚಂದ್ರಯಾನ-3 ಮಿಷನ್ ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ! ಇಸ್ರೋ ತಂಡವು ಭಾರತಕ್ಕೆ ಸೇರಿದೆ. ಅವರ ಕಠಿಣ ಪರಿಶ್ರಮವು ದೇಶದ ಪ್ರಗತಿಗೆ ಸಾಕ್ಷಿಯಾಗಿದೆ, ಇದು ಜನರು, ವಿಜ್ಞಾನಿಗಳು ಮತ್ತು ಅರ್ಥಶಾಸ್ತ್ರಜ್ಞರಿಂದ ಬಂದಿದೆಯೇ ಹೊರತು ಯಾವುದೇ ರಾಜಕೀಯ ಘಟಕದಿಂದಲ್ಲ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ತನ್ನ ರಾಜ್ಯ ಬಂಗಾಳ ಸೇರಿದಂತೆ ದೇಶದಾದ್ಯಂತದ ವಿಜ್ಞಾನಿಗಳು ಈ ಕಾರ್ಯಾಚರಣೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಭಾರತದ ಚಂದ್ರನ ಅನ್ವೇಷಣೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಿದ ಎಲ್ಲರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವವನ್ನು ತಲುಪಲು ಹತ್ತಿರವಾಗಿರುವುದರಿಂದ, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಮತ್ತು ಅದರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಹುರಿದುಂಬಿಸಬೇಕು ಎಂದು ಟಿಎಂಸಿ ಮುಖ್ಯಸ್ಥರು ಹೇಳಿದ್ದಾರೆ.

ಚಂದ್ರಯಾನ 3, ಭಾರತದ ಮೂರನೇ ಚಂದ್ರನ ಮಿಷನ್ ನಾಳೆ ಸಂಜೆ 6:04 ರ ಸುಮಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧವಾಗಿದೆ. ಇದು ಯಶಸ್ವಿಯಾದರೆ, ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಮೈಲಿಗಲ್ಲು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.

ಈಗಾಗಲೇ ಇಸ್ರೋ 70 ಕಿಲೋಮೀಟರ್ ಎತ್ತರದಲ್ಲಿ ಲ್ಯಾಂಡರ್ ಮಾಡ್ಯೂಲ್‌ನ ಕ್ಯಾಮೆರಾದಿಂದ ಚಂದ್ರನ ಚಿತ್ರಗಳನ್ನು ಹಂಚಿಕೊಂಡಿದೆ. ಮಿಷನ್ ನಿಗದಿತ ಹಂತದಲ್ಲಿದೆ ಮತ್ತು ವ್ಯವಸ್ಥಿತ ತಪಾಸಣೆ ನಡೆಸಲಾಗುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಕಾರ್ಯ ಸುಗಮವಾಗಿ ಮುಂದುವರಿಯುತ್ತಿದೆ, ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (ಇಸ್ರೋದಲ್ಲಿ) ಶಕ್ತಿ ಮತ್ತು ಉತ್ಸಾಹ ಕಂಡುಬಂದಿದೆ ಎಂದು ಎಂದು ಇಸ್ರೋ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಹಂತಗಳನ್ನು ವಿವರಿಸಿದ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ

ಬಾಹ್ಯಾಕಾಶ ನೌಕೆಯ ‘ವಿಕ್ರಮ್’ ಲ್ಯಾಂಡರ್ ಮಾಡ್ಯೂಲ್ ಗುರುವಾರ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು ಮತ್ತು ತರುವಾಯ ನಿರ್ಣಾಯಕ ಡೀಬೂಸ್ಟಿಂಗ್ ಆಗಿ ಹತ್ತಿರದ ಕಕ್ಷೆಗೆ ಇಳಿಯಿತು. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್, ಚಂದ್ರನ ಮೇಲ್ಮೈಯಲ್ಲಿ ಚಲಿಸುವ ರೋವರ್ ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳು ಈ ಚಂದ್ರಯಾನದ ಉದ್ದೇಶವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ