AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandrayaan-3: ಚಂದ್ರನ ಕುಳಿ ಕೆನ್ನೆಗೆ ವಿಕ್ರಮ್ ಲ್ಯಾಂಡರ್ ಮುತ್ತಿಕ್ಕಲು ಕೌಂಟ್​ಡೌನ್, ಪ್ರಗ್ಯಾನ್​ ರೋವರ್ ಮೇಲೆ ಎಲ್ಲರ ಚಿತ್ತ

ಇಡೀ ಜಗತ್ತು ಈಗ ಭಾರತದತ್ತ ಕಣ್ಣರಳಸಿ ಕೂತಿದೆ. ಇಂದು ಸಂಜೆ ಆಗಸದಲ್ಲಿ ನಡೆಯುವ ಸಾಹಸ ಹೇಗಿರುತ್ತೆ ಎನ್ನುವುದನ್ನ ಕಣ್ತುಂಬಿಕೊಳ್ಳುವುದಕ್ಕೆ ಕಾತರವಾಗಿದೆ. ನಮ್ಮ ದೇಶದ ಹೆಮ್ಮೆ ಇಸ್ರೋ ವಿಜ್ಞಾನಿಗಳ ಚಂದ್ರಯಾನ-3ಗೆ ಕೌಂಟ್​ಡೌನ್ ಶುರುವಾಗಿದೆ. ವಿಕ್ರಮ್ ಲ್ಯಾಂಡರ್ ನಾಳೆ ಚಂದ್ರನನ್ನ ಸ್ಪರ್ಶಿಸಲಿದ್ದು, ಬಾಹ್ಯಾಕಾಶ ಸಂಶೋಧನೆಯ ಪುಟಗಳಲ್ಲಿ ಭಾರತ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. ಚಂದ್ರನ ಕುಳಿ ಕೆನ್ನೆಗೆ ವಿಕ್ರಮ್ ಲ್ಯಾಂಡರ್ ಮುತ್ತಿಕ್ಕಲು ಇನ್ನೊಂದೇ ಹೆಜ್ಜೆ ಬಾಕಿ ಇದ್ದು, ಇಡೀ ವಿಶ್ವದ ಚಿತ್ತವೇ ಭಾರತದತ್ತ ನೆಟ್ಟಿದೆ.

Chandrayaan-3: ಚಂದ್ರನ ಕುಳಿ ಕೆನ್ನೆಗೆ ವಿಕ್ರಮ್ ಲ್ಯಾಂಡರ್ ಮುತ್ತಿಕ್ಕಲು ಕೌಂಟ್​ಡೌನ್, ಪ್ರಗ್ಯಾನ್​ ರೋವರ್ ಮೇಲೆ ಎಲ್ಲರ ಚಿತ್ತ
ಚಂದ್ರಯಾನ-3
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Aug 23, 2023 | 7:12 AM

Share

ಬೆಂಗಳೂರು, (ಆಗಸ್ಟ್ 23): ಬಾಹ್ಯಕಾಶ ಲೋಕದಲ್ಲಿ ಭಾರತ(India) ಹೊಸ ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ -3(Chandrayaan 3) ಯೋಜನೆಯ ಲ್ಯಾಂಡರ್ ಶಶಿಯ ಸ್ಪರ್ಶಕ್ಕೆ ರೆಡಿಯಾಗಿದೆ. ಇಂದು (ಆಗಸ್ಟ್ 23) ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ಲ್ಯಾಂಡರ್ ಲ್ಯಾಂಡ್ ಆಗಲು ಸಮಯ ನಿಗದಿ ಮಾಡಲಾಗಿದೆ. ಆದ್ರೆ ಸಂಜೆ 5.45ಕ್ಕೆ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭವಾಗಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಸೂರ್ಯ ರಶ್ಮಿ ಬಿದ್ದ ಬಳಿಕವಷ್ಟೇ ಲ್ಯಾಂಡಿಂಗ್ ಸಾಧ್ಯವಾಗಲಿದೆ. ಬರೋಬ್ಬರಿ 45 ದಿನಗಳ ಪ್ರಯಾಣದ ಮೂಲಕ ವಿಕ್ರಮ್​ ಲ್ಯಾಂಡರ್​ ಮೂರು ಲಕ್ಷ 84 ಸಾವಿರ ಕಿಲೋ ಮೀಟರ್​ ದೂರ ಇರುವ ಚಂದ್ರನ ಸಮೀಪಕ್ಕೆ ತಲುಪಿದೆ. ಇನ್ನು ಚಂದ್ರನ ಕಕ್ಷೆಗೆ ಸೇರಿದ ಬಳಿಕ ನೌಕೆ ಈವರೆಗೂ ಐದು ಬಾರಿ ಪ್ರದಕ್ಷಿಣೆ ಹಾಕಿದೆ. ಇದೀಗ ಲ್ಯಾಂಡರ್‌ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತಿದ್ದು, ಲ್ಯಾಂಡರ್​ನಿಂದ ಪ್ರಗ್ಯಾನ್​ ರೋವರ್ ಹೊರಬರುವ ಕ್ಷಣಗಣನೆ ಶುರುವಾಗಿದೆ.

ಪ್ರಗ್ಯಾನ್​ ರೋವರ್ ಮೇಲೆ ಎಲ್ಲರ ಚಿತ್ತ!

ಬರೋಬ್ಬರಿ 45 ದಿನಗಳ ಪ್ರಯಾಣದ ಮೂಲಕ ವಿಕ್ರಮ್​ ಲ್ಯಾಂಡರ್​ ಮೂರು ಲಕ್ಷ 84 ಸಾವಿರ ಕಿಲೋ ಮೀಟರ್​ ದೂರ ಇರುವ ಚಂದ್ರನ ಸಮೀಪಕ್ಕೆ ತಲುಪಿದೆ. ಇನ್ನು ಚಂದ್ರನ ಕಕ್ಷೆಗೆ ಸೇರಿದ ಬಳಿಕ ನೌಕೆ ಈವರೆಗೂ ಐದು ಬಾರಿ ಪ್ರದಕ್ಷಿಣೆ ಹಾಕಿದೆ. ಇದೀಗ ಲ್ಯಾಂಡರ್‌ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತಿದ್ದು, ಲ್ಯಾಂಡರ್​ನಿಂದ ಪ್ರಗ್ಯಾನ್​ ರೋವರ್ ಹೊರಬರುವ ಕ್ಷಣಗಣನೆ ಆರಂಭವಾಗಿದೆ

ಇದನ್ನೂ ಓದಿ: ಚಂದ್ರಯಾನ-3 ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ಕ್ಷಣವನ್ನು ಜಗತ್ತಿಗೆ ತೋರಿಸಲು LIVE ವ್ಯವಸ್ಥೆ: ಯಾವಾಗ, ಎಲ್ಲಿ? ಹೇಗೆ? ಇಲ್ಲಿದೆ ವಿವರ

ಲ್ಯಾಂಡರ್​ ಒಳಗಿದೆ ಪ್ರಗ್ಯಾನ್​ ರೋವರ್

ಚಂದ್ರನ ಮೇಲ್ಮೈನಲ್ಲಿ ಹೆಪ್ಪುಗಟ್ಟಿದ ಪ್ರದೇಶದಲ್ಲಿ ಲ್ಯಾಂಡರ್​ ಇಳಿಸೋದು ಭಾರಿ ಸವಾಲಿನ ಕೆಲಸವಾಗಿದೆ. ಇನ್ನು ಚಂದ್ರನ ಮೇಲೆ ಇಳಿಯುವ ವಿಕ್ರಮ್​ ಲ್ಯಾಂಡರ್​ ಒಡಲಲ್ಲಿ ಪ್ರಗ್ಯಾನ್​ ರೋವರ್​ ಕೂಡ ಇದೆ. ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಆದ ಬಳಿಕ ಅದರಿಂದ ಪ್ರಗ್ಯಾನ್ ರೋವರ್ ಹೊರಬರಲಿದೆ. ಚಂದ್ರನ ಮೇಲಿನ ಉಷ್ಣಾಂಶ, ಭೂಕಂಪನ, ಅಲ್ಲಿರುವ ಪ್ಲಾಸ್ಮಾ ಪ್ರಮಾಣವನ್ನು ಅಳತೆ ಮಾಡಿ ಎಲ್ಲಾ ಮಾಹಿತಿಯನ್ನು ಭೂಮಿಗೆ ಕಳುಹಿಸಲಿದೆ.

ಕೊನೆಯ 20 ನಿಮಿಷಗಳೇ ನಿರ್ಣಾಯಕ

ಭಾರತದ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್‌ಗೆ ಕೌಂಟ್‌ಡೌನ್ ಶುರವಾಗಿದೆ. ಬೆಂಗಳೂರಲ್ಲೇ ಚಂದ್ರನ 3 ಕಮಾಂಡ್ ಸೆಂಟರ್ ಇದ್ದು, ವಿಕ್ರಮ್ ಲ್ಯಾಂಡರ್‌ಅನ್ನುಬೆಂಗಳೂರಿನಿಂದಲೇ ಕಂಟ್ರೋಲ್ ಮಾಡಲಾಗುತ್ತೆ. ಚಂದ್ರನ ಮೇಲ್ಮೈನಿಂದ 25 ಕಿಲೋ ಮೀಟರ್ ಎತ್ತರದಲ್ಲಿದ್ದು, ವೇಗ ಕಡಿಮೆಯಾದ ಬೆನ್ನಲ್ಲೇ ಲ್ಯಾಂಡಿಂಗ್ ಪ್ರಕ್ರಿಯೆ ಶುರುವಾಗಲಿದೆ. ಕೊನೆಯ 20ನಿಮಿಷದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಸವಾಲಾಗಿದೆ.

ಸೋಲಾರ್​ ಮೂಲಕವೇ ರೋವರ್​ಗೆ ಶಕ್ತಿ

ಚಂದ್ರನ ಮೇಲೆ ಲ್ಯಾಂಡರ್ ಲ್ಯಾಂಡ್ ಆದ ಬಳಿಕ ಪ್ರಕ್ರಿಯೆ ಶುರವಾಗಲಿದೆ. ವಿಕ್ರಮ್ ಲ್ಯಾಂಡರ್ ರೋವರ್ ಹೊರಬರಲಿದೆ. ಚಂದ್ರನ ಮೇಲೆ 6 ಚಕ್ರ ಹೊಂದಿರುವ ರೋವರ್ ಓಡಾಟ ನಡಸೆೋ ಮೂಲಕ ಸಂಶೋಧನೆ ಆರಂಭವಾಗಲಿದೆ. ರೋವರ್‌ಗೆ ಸೂರ್ಯನ ಬೆಳಕೇ ಶಕ್ತಿಯಾಗಿದ್ದು, ಸೋಲಾರ್ ಪ್ಯಾನಲ್ ಮೂಲಕ ಈ ರೋವರ್ ಓಡಾಟ ನಡೆಸುತ್ತದೆ. ಚಂದ್ರನ ಮೇಲೆ 14 ದಿನ ಕಾಲ ರೋವರ್ ಸಂಶೋಧನೆ ನಡೆಸಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:57 am, Wed, 23 August 23