Flipkart Offer Sale: ಫ್ಲಿಪ್​ಕಾರ್ಟ್​ನಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಬ್ಯಾಕ್ ಟು ಕ್ಯಾಂಪಸ್ ಆಫರ್

ಕಿರಣ್​ ಐಜಿ

Updated on: Jun 23, 2024 | 7:23 AM

ಜೂನ್ 21 ರಿಂದ ಜೂನ್ 27 ರವರೆಗೆ ಆಫರ್ ಸೇಲ್ ಇರಲಿದ್ದು, ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಸಾರವಾಗಿ ವಿವಿಧ ಬ್ರ್ಯಾಂಡ್​ಗಳ ಲ್ಯಾಪ್​ಟಾಪ್, ಟ್ಯಾಬ್ಲೆಟ್, ಗೇಮಿಂಗ್ ಉತ್ಪನ್ನಗಳು, ಮಾನಿಟರ್, ಸ್ಮಾರ್ಟ್ ವಾಚ್, ವೈರ್​ಲೆಸ್ ಇಯರ್ ಫೋನ್, ಪ್ರಿಂಟರ್, ಲ್ಯಾಪ್ ಟಾಪ್ ಅಕ್ಸೆಸರಿಗಳು ಸಹಿತ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಗ್ಯಾಜೆಟ್​ಗಳನ್ನು ಖರೀದಿಸಬಹುದಾಗಿದೆ.

ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆ ಫ್ಲಿಪ್​ಕಾರ್ಟ್, ವಿದ್ಯಾರ್ಥಿಗಳಿಗಾಗಿ ವಿಶೇಷ ಆಫರ್ ಸೇಲ್ ನಡೆಸುತ್ತಿದೆ. ಕಾಲೇಜ್ ಅಡ್ಮಿಶನ್ ಮತ್ತು ತರಗತಿಗಳು ಶುರುವಾಗುತ್ತಿರುವ ಸಂದರ್ಭದಲ್ಲಿ ಲ್ಯಾಪ್​ಟಾಪ್ ಮತ್ತು ಐಟಿ ಗ್ಯಾಜೆಟ್​ಗಳ ಮೇಲೆ ವಿಶೇಷ ಡಿಸ್ಕೌಂಟ್, ಆಫರ್ ಲಭ್ಯವಾಗಲಿದೆ. ಜೂನ್ 21 ರಿಂದ ಜೂನ್ 27 ರವರೆಗೆ ಆಫರ್ ಸೇಲ್ ಇರಲಿದ್ದು, ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಸಾರವಾಗಿ ವಿವಿಧ ಬ್ರ್ಯಾಂಡ್​ಗಳ ಲ್ಯಾಪ್​ಟಾಪ್, ಟ್ಯಾಬ್ಲೆಟ್, ಗೇಮಿಂಗ್ ಉತ್ಪನ್ನಗಳು, ಮಾನಿಟರ್, ಸ್ಮಾರ್ಟ್ ವಾಚ್, ವೈರ್​ಲೆಸ್ ಇಯರ್ ಫೋನ್, ಪ್ರಿಂಟರ್, ಲ್ಯಾಪ್ ಟಾಪ್ ಅಕ್ಸೆಸರಿಗಳು ಸಹಿತ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಗ್ಯಾಜೆಟ್​ಗಳನ್ನು ಖರೀದಿಸಬಹುದಾಗಿದೆ. ಅದರ ಜತೆಗೆ ಬ್ಯಾಂಕ್ ಕಾರ್ಡ್ ಆಫರ್, ಕ್ಯಾಶ್​ಬ್ಯಾಕ್ ಕೂಡ ಲಭ್ಯವಾಗಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.