Video: ಪ್ರವಾಹ ಪೀಡಿತ ಪ್ರದೇಶಕ್ಕೆ ಊರಿನ ವ್ಯಕ್ತಿಯ ಹೆಗಲ ಮೇಲೆ ಕುಳಿತು ಹೊರಟ ಕಾಂಗ್ರೆಸ್ ಸಂಸದ, ಇದೆಂಥಾ ಸಮೀಕ್ಷೆ
ದೇಶದ ವಿವಿಧೆಡೆ ಕಳೆದ ಎರದು ವಾರಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಬಿಹಾರದ ಕಟಿಹಾರ ಜಿಲ್ಲೆಯಲ್ಲಿ ಕೂಡ ಪ್ರವಾಹ ಸಂಭವಿಸಿ ಸಾಕಷ್ಟು ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗಿತ್ತು. ಈ ಪ್ರವಾಹ ಪೀಡಿತ ಪ್ರದೇಶದ ಸಮೀಕ್ಷೆ ನಡೆಸಲು ಕಾಂಗ್ರೆಸ್ ಸಂಸದ ತಾರೀಖ್ ಅನ್ವರ್ ಹಳ್ಳಿ ಜನರ ಹೆಗಲ ಮೇಲೆ ಕುಳಿತು ಹೋಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪಾಟ್ನಾ, ಸೆಪ್ಟೆಂಬರ್ 08: ದೇಶದ ವಿವಿಧೆಡೆ ಕಳೆದ ಎರದು ವಾರಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಬಿಹಾರದ ಕಟಿಹಾರ ಜಿಲ್ಲೆಯಲ್ಲಿ ಕೂಡ ಪ್ರವಾಹ ಸಂಭವಿಸಿ ಸಾಕಷ್ಟು ಆಸ್ತಿ–ಪಾಸ್ತಿಗಳಿಗೆ ಹಾನಿಯುಂಟಾಗಿತ್ತು. ಈ ಪ್ರವಾಹ ಪೀಡಿತ ಪ್ರದೇಶದ ಸಮೀಕ್ಷೆ ನಡೆಸಲು ಕಾಂಗ್ರೆಸ್ ಸಂಸದ ತಾರೀಖ್ ಅನ್ವರ್ ಹಳ್ಳಿ ಜನರ ಹೆಗಲ ಮೇಲೆ ಕುಳಿತು ಹೋಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಒಂದು ನಿಮಿಷ , 12 ಸೆಕೆಂಡುಗಳ ವಿಡಿಯೋದಲ್ಲಿ 74 ವರ್ಷದ ರಾಜಕೀಯ ನಾಯಕ ಹಳ್ಳಿಯ ಜನರ ಹೆಗಲ ಮೇಲೆ ಕುಳಿತು ಹೋಗುತ್ತಿರುವುದನ್ನು ಕಾಣಬಹುದು. ಆದರೆ ಅಲ್ಲಿ ನಡೆಸಲು ಸಾಧ್ಯವಾಗದಷ್ಟು ನೀರೇನು ಇರಲಿಲ್ಲ, ಬದಲಾಗಿ ಕೆಸರು ಮಿಶ್ರಿತ ನೀರಿತ್ತಷ್ಟೇ, ಇದೆಂಥಾ ಸಮೀಕ್ಷೆ ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಅನ್ವರ್ ಮೊದಲು ಸ್ವಲ್ಪ ದೂರ ಟ್ರ್ಯಾಕ್ಟರ್ನಲ್ಲಿ ತೆರಳಿದ್ದರು.ಬಿಹಾರದಲ್ಲಿ ಚುನಾವಣೆ ಸನ್ನಿಹಿತವಾಗುತ್ತಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದನ ಈ ವರ್ತನೆ ಭಾರಿ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ