Torrential rains in UK district: ಕಾರವಾರದ ಕರಾವಳಿ ಭಾಗದಲ್ಲಿ ನಿಲ್ಲದ ಮಳೆ, ಪ್ರವಾಹದ ಭೀತಿಯಲ್ಲಿ ಜನ

|

Updated on: Jul 05, 2023 | 5:41 PM

ಉತ್ತರ ಕನ್ನಡ ಜಿಲ್ಲಾಡಳಿತ ಹೆಚ್ಚಿನ ಹಾನಿ ಉಂಟಾಗದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದೆ.

ಉತ್ತರ ಕನ್ನಡ: ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆ ಧೋ ಅಂತ ಸುರಿಯತ್ತಿದೆ ಮತ್ತು ಅದರ ಆರ್ಭಟ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳಿಲ್ಲ. ಈ ಭಾಗದ ಸೀಬರ್ಡ್ ನೌಕಾನೆಲೆ (Seabird Naval Base ) ಮತ್ತು ಅದರ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ (rural areas) ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಪ್ರವಾಹದಂಥ ಸ್ಥಿತಿ ನಿರ್ಮಾವಾಗಿದೆ ಹಾಗೂ ಜನರು ಆತಂಕದಲ್ಲಿದ್ದಾರೆ. ನೀರು ಮನೆಗಳಿಗೆ ನುಗ್ಗಿದರೆ ಅವಾಂತರ ಸೃಷ್ಟಿಯಾಗೋದು ನಿಶ್ಚಿತ. ಕಳೆದ ರಾತ್ರಿ ಇದೇ ಭಾಗದ ಮನೆಯೊಂದಕ್ಕೆ ನೀರು ನುಗ್ಗಿದ್ದರಿಂದ ಅಲ್ಲಿ ವಾಸವಾಗಿದ್ದ ಹಿರಿಯ ಮಹಿಳೆಯೊಬ್ಬರು (elderly woman) ಸಾವನ್ನಪ್ಪಿದ್ದರು. ಕರಾವಳಿ ಭಾಗದಲ್ಲಿ ಜೋರು ಮಳೆಯಾಗುತ್ತಿದ್ದರೆ ಅತ್ತ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಮಧ್ಯ ಕರ್ನಾಟ ಮೊದಲಾದ ಕಡೆಗಳಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಹೆಚ್ಚಿನ ಹಾನಿ ಉಂಟಾಗದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದೆ. ಶಾಲಾ ಕಾಲೇಜುಗಳನ್ನು ಸದ್ಯದ ಮಟ್ಟಿಗೆ ಮುಚ್ಚಲಾಗಿದೆ ಹಾಗೂ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on