ರಾಜಕೀಯಕ್ಕೆ ಬರೋ ಮುಂಚೆ ರೌಡಿಗಳಿಗೆ ಬಾಟ್ಲು ಸಪ್ಲೈ ಮಾಡಿದವನಲ್ಲ ನಾನು: ಯಾರ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೀಗೆ ಹೇಳಿದ್ದು!?

ರಾಜಕೀಯಕ್ಕೆ ಬರೋ ಮುಂಚೆ ರೌಡಿಗಳಿಗೆ ಬಾಟ್ಲು ಸಪ್ಲೈ ಮಾಡಿದವನಲ್ಲ ನಾನು: ಯಾರ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೀಗೆ ಹೇಳಿದ್ದು!?

ಸಾಧು ಶ್ರೀನಾಥ್​
|

Updated on:Jul 05, 2023 | 5:04 PM

ಪೆನ್ ಡ್ರೈವ್ ಸಮಯ ಬರಲಿ ಬಿಡುಗಡೆ ಮಾಡ್ತೀನಿ. ಮೈ ಕೈ ಪರಚಿಕೊಳ್ಳೋದು ಬೇಡ ಅಂತಾ ಗುಂಡೂರಾವ್ ಹೇಳಿದರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ..!? ಸೋತಾಗ್ಲೂ ಜನರ ಕಷ್ಟ ಸುಃಖ ಕೇಳಿದ್ದೇವೆ. ಬ್ಲ್ಯೂ ಫಿಲ್ಮ್ಂ ನ ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

H D Kumaraswamy: ರಾಜಕಾರಣಕ್ಕೆ ಬರೋ ಮುಂಚೆ ರೌಡಿಗಳಿಗೆ ಬಾಟಲಿ ತಂದುಕೊಟ್ಟಡುತ್ತಿದ್ದವನಲ್ಲ ನಾನು. ರಾಜಕೀಯಕ್ಕೆ ಬರೋ ಮುಂಚೆ ರೌಡಿಗಳಿಗೆ ಬಾಟ್ಲು ಸಪ್ಲೈ ಮಾಡಿದವ್ನಲ್ಲ ನಾನು! ಕಷ್ಟ ಪಟ್ಟು ರಾಜಕೀಯಕ್ಕೆ ಬಂದವನು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು. KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ.. ತಾಜ್ ವೆಸ್ಟೆಂಡ್ ದ್ದು ಬಾಕಿ ಬಿಲ್ ಕಾಂಗ್ರೆಸ್ ಗೆ ಕಳಿಸಿದ್ರಾ? ನಾನೇನು ಬೀದಿಲಿ ಹೋಗೋದಾ.? ಎರಡು ಮೂರು ಲಕ್ಷ ಖರ್ಚು ಮಾಡೋ ಯೋಗ್ಯತೆ ಇಲ್ವಾ..? ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು ಆಸ್ತಿ ಈಗ ಎಷ್ಟಿದೆ ತನಿಖೆ ಮಾಡಲಿ. ಇಂಧನ ಇಲಾಖೆ ಟ್ರಾನ್ಸ್ ಫರ್ ಆಗಿದೆ. 10 ಕೋಟಿಗೆ ಬಿಕರಿಯಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಪೆನ್ ಡ್ರೈವ್ ಸಮಯ ಬರಲಿ ಬಿಡುಗಡೆ ಮಾಡ್ತೀನಿ. ಮೈ ಕೈ ಪರಚಿಕೊಳ್ಳೋದು ಬೇಡ ಅಂತಾ ಗುಂಡೂರಾವ್ ಹೇಳಿದರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ..!? ಸೋತಾಗ್ಲೂ ಜನರ ಕಷ್ಟ ಸುಃಖ ಕೇಳಿದ್ದೇವೆ. ಬ್ಲ್ಯೂ ಫಿಲ್ಮ್ಂ ನ ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ನಿನ್ನೆ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ತಗೊತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದವನು ನಾನು. ಬೇಕು ಅಂದಲ್ಲಾ ರೆಡಿ ಮಾಡಿ ಇಟ್ಟುಕೊಂಡಿದ್ದೀನಿ. ನಮ್ಮಿಂದ ಬೆಳೆದವು ನಮ್ಮ ಬಗ್ಗೆಯೇ ಮಾತಾಡ್ತಾರೆ. ವರ್ಗಾವಣೆ ದಂಧೆದೇ ಪೆನ್ ಡ್ರೈವ್. ಸಿಎಂಗೆ ಹೇಳಿ ತನಿಖೆ ಮಾಡಿಸಲಿ, ನಾನು ಹಿಡಿದುಕೊಂಡಿದ್ದೀ‌ನಾ? ನಿನ್ನೆ ಎರಡು ಟ್ರಾನ್ಸ್ ಫರ್ ಆಗಿದೆ. ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ ಎಂದು ಹೆಚ್ ಡಿಕೆ ಹೇಳಿದರು.

Published on: Jul 05, 2023 05:04 PM